Advertisement

ಉ.ಕೊರಿಯ ವಿರುದ್ಧದ ನಿಷೇಧ ಹಠಾತ್‌ ಹಿಂಪಡೆದ ಡೊನಾಲ್ಡ್‌ ಟ್ರಂಪ್‌

06:30 AM Mar 23, 2019 | Team Udayavani |

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅತ್ಯಂತ ಅಚ್ಚರಿಯ ಹಠಾತ್‌ ಉಪಕ್ರಮದಲ್ಲಿ ಉತ್ತರ ಕೊರಿಯದ ಮೇಲೆ ಹೇರಿದ್ದ ದೊಡ್ಡ ಮಟ್ಟದ ನಿಷೇಧಗಳನ್ನು ಹಿಂಪಡೆಯುವ ಆದೇಶ ಹೊರಡಿಸಿದ್ದಾರೆ.

Advertisement

ಟ್ರಂಪ್‌ ಆಡಳಿತೆಯ ಕಂದಾಯ ಇಲಾಖೆ ಈ ದೊಡ್ಡ ಮಟ್ಟದ ನಿಷೇಧಗಳನ್ನು ಜಾರಿಗೊಳಿಸಿದ ಬೆನ್ನಿಗೇ ಟ್ರಂಪ್‌ ಅವರು ಆ ನಿಷೇಧಗಳನ್ನು ತತ್‌ಕ್ಷಣದಿಂದಲೇ ಹಿಂಪಡೆಯುವಂತೆ ಆದೇಶ ಹೊರಡಿಸಿರುವುದಾಗಿ ಅವರ ಮಾಧ್ಯಮ ಕಾರ್ಯದರ್ಶಿ ಪ್ರಕಟಿಸಿದ್ದಾರೆ.

”ಅಧ್ಯಕ್ಷ ಟ್ರಂಪ್‌ ಅವರು ಉತ್ತರ ಕೊರಿಯ ನಾಯಕ ಕಿಮ್‌ ಜಾಂಗ್‌ ಉನ್‌ ಅವರನ್ನು ಇಷ್ಟಪಡುತ್ತಾರೆ; ಅಂತೆಯೇ ಆತನ ದೇಶದ ವಿರುದ್ದ ಹೇರಲಾಗಿದ್ದ ದೊಡ್ಡ ಮಟ್ಟದ ನಿಷೇಧಗಳು ಈಗ ಅಗತ್ಯವಿಲ್ಲ ಎಂದು ತಿಳಿದಿದ್ದಾರೆ” ಎಂಬುದಾಗಿ ಮಾಧ್ಯಮ ಕಾರ್ಯದರ್ಶಿ ಹೇಳಿದರು. 

ವಿಯೆಟ್ನಾಮ್‌ನ ಹೆನಾಯ್‌ ನಲ್ಲಿ ಕಳೆದ ತಿಂಗಳಲ್ಲಿ ಕಿಮ್‌ ಜತೆಗೆ ನಡೆದಿದ್ದ ಎರಡನೇ ಶೃಂಗದ ಬಳಿಕದಲ್ಲಿ ಅಧ್ಯಕ್ಷ ಟ್ರಂಪ್‌ ಅವರು ಅಚ್ಚರಿಯ ವಿಲಕ್ಷಣಕಾರಿ ಹೆಜ್ಜೆ ಇಟ್ಟಿದ್ದಾರೆ ಎಂದು ತಿಳಿಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next