ವಾಷಿಂಗ್ಟನ್/ನವದೆಹಲಿ: ಅಧ್ಯಕ್ಷೀಯ ಚುನಾ ವಣೆ ಯಲ್ಲಿ ಸೋಲು ಅನುಭವಿಸಿದ್ದರೂ, ಅದನ್ನು ಒಪ್ಪಿಕೊಳ್ಳಲು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಿಲ್ಲ. ಜ.20ರಂದು ಹುದ್ದೆ ಯಿಂದ ನಿರ್ಗಮಿಸುವ ಮೊದಲು ಚೀನ ವಿರುದ್ಧ ಹಲವು ಆದೇಶಗಳನ್ನು ನೀಡುವ ಸಾಧ್ಯತೆ ಇದೆ. ಈ ಮೂಲಕ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ಗೆ ಇಕ್ಕಟ್ಟಿನ ಪರಿಸ್ಥಿತಿ ತಂದಿಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಜಾರ್ಜ್‌ಟೌನ್ ವಿವಿಯ ಸಂಶೋಧಕ ಜೇಮ್ಸ್ ಗ್ರೀನ್ ಮಾತನಾಡಿ “ಜ.20ರ ಒಳಗಾಗಿ ಅಮೆರಿ ಕದ ಹಲವು ನಿಯಮಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಟ್ರಂಪ್ ಆಡಳಿತ ಅಂಥ ಕ್ರಮ ಗಳನ್ನು ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ’ ಎಂದಿದ್ದಾರೆ.
ಚೀನದ ಕ್ಸಿನ್‌ಜಯಾಂಗ್ ಪ್ರಾಂತ್ಯದಲ್ಲಿ ಉಯ್ ಘರ್ ಮುಸ್ಲಿಮರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡದ್ದರ ವಿರುದ್ಧ ಟ್ರಂಪ್ ಸರಕಾರ ಕಠಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಚೀನ ಸರಕಾರ ಮಾನವ ಹತ್ಯೆ ಮಾಡಿದೆ ಎಂಬ ಆರೋಪ ಹೊರಿ ಸುವ ಸಾಧ್ಯತೆ ದಟ್ಟವಾಗಿದೆ. ಇದರ ಜತೆಗೆ ಡ್ರ್ಯಾಗನ್ ವಿರುದ್ಧ ಮತ್ತೂಂದು ಸುತ್ತಿನ ವಾಣಿಜ್ಯಿಕ ನಿರ್ಬಂಧ ಹೇರುವ ಸಾಧ್ಯತೆ ಗಳೂ ದಟ್ಟವಾಗಿವೆ.
ಹಲವು ಆದ್ಯತೆಗಳು: ಕೊರೊನಾ ಸೋಂಕು ನಿರ್ವಹಣೆ, ದೇಶದ ಅರ್ಥ ವ್ಯವಸ್ಥೆ ಪುನರು ತ್ಥಾನ, ಜನಾಂಗೀಯ ನಿಂದನೆ ಪ್ರಕರಣಗಳನ್ನು ನಿಯಂ ತ್ರಿಸುವುದು ಜೋ ಬೈಡೆನ್ ನೇತೃತ್ವದ ಸರಕಾರಕ್ಕೆ ಆದತ್ಯೆಯ ವಿಚಾರಗಳಾಗಿವೆ. ಈ ಬಗ್ಗೆ ಬೈಡೆನ್‌ರ ವೆಬ್‌ಸೈಟ್‌ನಲ್ಲಿ ಅವರ ಪ್ರಚಾರ ತಂಡ ಕೊರೊನಾ ಸೋಂಕು ಪರಿಸ್ಥಿತಿ ನಿರ್ವಹಣೆ, ಆರ್ಥ ವ್ಯವಸ್ಥೆ ಚೇತರಿಕೆ, ಜನಾಂಗೀಯ ನಿಂದನೆ ತಡೆ ಮತ್ತು ಹವಾಮಾನ ಬದಲಾವಣೆ ಎಂಬ ಆದ್ಯತಾ ಪಟ್ಟಿಯನ್ನು ಅಪ್‌ಡೇಟ್ ಮಾಡಿದೆ. ಇದರ ಜತೆಗೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗ್ೂ ಜತೆಯಾಗಿ ಕೆಲಸ ಮಾಡುವ ಬಗ್ಗೆ ಆಹ್ವಾನ ನೀಡಲಾಗಿದೆ. ಅಮೆರಿಕದ ಆಡಳಿತ ವ್ಯವಸ್ಥೆ ಹೊಸ ಸರಕಾರ ಆಡಳಿತ ನಿರ್ವಹಿಸಲು ಬೇಕಾಗಿ ರುವ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿದೆ.
ಕಮಲಾಗೆ ತಮಿಳಲ್ಲಿ ಪತ್ರ ಬರೆದ ಸ್ಟಾಲಿನ್
ನಿಯೋಜಿತ ಉಪಾಧ್ಯಕ್ಷ ಕಮಲಾ ಹ್ಯಾರಿಸ್‌ಗೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ತಮಿಳು ಭಾಷೆ ಯಲ್ಲಿ ಪತ್ರ ಬರೆದಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಅಮೆರಿಕ ಹೆಚ್ಚು ಮಾನ್ಯತೆ ಗಳಿಸಲಿ ಎಂದು ಹಾರೈಸಿದ್ದಾರೆ. “ವಣಕ್ಕಮ್’ ಎಂದು ಬರೆದಿರುವ ಡಿಎಂಕೆ ಅಧ್ಯಕ್ಷ ತಮಿಳು ನಾಡು ಮೂಲದ ಮಹಿಳೆ ಅಮೆರಿಕದಲ್ಲಿ ಮೊದಲ ಬಾರಿಗೆ ಉಪಾಧ್ಯಕ್ಷ ಹುದ್ದೆ ಅಲಂಕರಿ ಸುವುದು ಹೆಮ್ಮೆ. ತಮಿಳು ಭಾಷೆಯಲ್ಲಿ ಪತ್ರ ಬರೆದದ್ದರಿಂದ ಸಂತೋಷವಾಗಲಿದೆ ಎಂಬ ವಿಶ್ವಾಸದಿಂದ ಈ ರೀತಿ ಕ್ರಮ ಕೈಗೊಂಡಿರುವುದಾಗಿ ಸ್ಟಾಲಿನ್ ಬರೆದುಕೊಂಡಿದ್ದಾರೆ.