Advertisement

ಸಿಂಗಾಪುರದಲ್ಲಿ ಟ್ರಂಪ್‌-ಕಿಮ್‌

05:13 PM Jun 11, 2018 | Harsha Rao |

ಸಿಂಗಾಪುರ: ಅಂತ್ಯಕಾಣದ ಹಾಗೂ ಕಣ್ಣಿಗೆ ಕಾಣದ ಸಮರದಲ್ಲಿ ತೊಡಗಿರುವ ಎರಡು ದೇಶಗಳ ನಡುವಿನ ಸಮಾಗಮಕ್ಕೆ ಸಿಂಗಾಪುರ ದೇಶ ಸಿದ್ಧವಾಗಿದ್ದು, ಅಮೆರಿಕ ಮತ್ತು ಉತ್ತರ ಕೊರಿಯಾ ದೇಶಗಳ ನಾಯಕರು ಐತಿಹಾಸಿಕ ಮಾತುಕತೆಗಾಗಿ ಬಂದಿಳಿದ್ದಾರೆ.

Advertisement

ರವಿವಾರ ಮಧ್ಯಾಹ್ನವೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಚೀನದ ವಿಮಾನದಲ್ಲಿ ಬಂದರೆ, ಐದು ಗಂಟೆಗಳ ತರುವಾಯ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಮಿಸಿದರು. ಮಂಗಳವಾರ ಇವರಿಬ್ಬರ ಮಾತುಕತೆ ನಡೆಯಲಿದೆ. ಈ ಹಿಂದೆ ಹಲವಾರು ಅಂತಾರಾಷ್ಟ್ರೀಯ ಶಾಂತಿ ಮಾತುಕತೆಗಳಿಗೆ ವೇದಿಕೆಯಾ ಗಿರುವ ಸೆಂತೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಸಿಂಗಾಪುರ ಹೋಟೆಲ್‌ನಲ್ಲಿ 3000 ಅಂತಾರಾಷ್ಟ್ರೀಯ ಪತ್ರಕರ್ತರ ಮುಂದೆ ಟ್ರಂಪ್‌ ಮತ್ತು ಕಿಮ್‌ ಮಂಗಳವಾರ ಹ್ಯಾಂಡ್‌ಶೇಕ್‌ ಮಾಡಲಿದ್ದಾರೆ. ಈ ಬಳಿಕ ಇಬ್ಬರೂ ಮಾತುಕತೆ ನಡೆಸಲಿದ್ದಾರೆ. ಆದರೆ ಮಾತುಕತೆಯ ಅಜೆಂಡಾ ಏನು ಎಂಬುದು ಮಾತ್ರ ಬಹಿರಂಗವಾಗಿಲ್ಲ.

ಬರುವಾಗಲೂ ಡ್ರಾಮಾ:  ರವಿವಾರ ಬೆಳಗ್ಗೆಯೇ ಕಿಮ್‌ ಸಿಂಗಾಪುರಕ್ಕೆ ಬಂದಿಳಿಯುವ ಸುದ್ದಿಯಾಗಿತ್ತು. ಇದಕ್ಕೆ ಪೂರಕವಾಗಿ ಉತ್ತರ ಕೊರಿಯಾದ 3 ವಿಮಾನಗಳು ಬಂದಿಳಿದವು. ಅದರಲ್ಲಿ ಕಿಮ್‌ ಅವರ ಉನ್‌ ಒನ್‌ ಕೂಡ ಬಂದಿತ್ತು. ಆದರೆ, ಕಿಮ್‌ ಮಾತ್ರ ಇದರಲ್ಲಿ ಬರಲೇ ಇಲ್ಲ. ಇದಾದ ಬಳಿಕ ಚೀನದ ಬೋಯಿಂಗ್‌ ವಿಮಾನದಲ್ಲಿ ಕಿಮ್‌ ಬಂದಿಳಿದರು. ಭದ್ರತಾ ದೃಷ್ಟಿಯಿಂದ ತಮ್ಮ ವಿಮಾನದಲ್ಲಿ ಬಾರದೇ ಚೀನದ ವಿಮಾನದಲ್ಲಿ ಬಂದರು. ಇವರಿಗೆ ವಿದೇಶಾಂಗ ಸಚಿವ ವಿವಿಯನ್‌ ಬಾಲಕೃಷ್ಣನ್‌ ಸ್ವಾಗತ ಕೋರಿದರು. ಅಲ್ಲಿಂದ ನೇರವಾಗಿ ಸಿಂಗಾಪುರ ಪ್ರಧಾನಿ ಲೀ ಸೀಯಾನ್‌ ಲೂಂಗ್‌ ಅವರ ಅಧಿಕೃತ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

5 ಗಂಟೆಗಳಲ್ಲೇ ಟ್ರಂಪ್‌ ಆಗಮನ: ಕೆನಡಾದ ಜಿ7 ಶೃಂಗದಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌ ಅಲ್ಲಿ ಮುನಿಸಿಕೊಂಡು ನೇರವಾಗಿ ಸಿಂಗಾಪುರಕ್ಕೆ ಏರ್‌ಫೋರ್ಸ್‌ ಒನ್‌ನಲ್ಲಿ ಬಂದಿಳಿದರು. ಸೋಮವಾರ ಸಿಂಗಾಪುರ‌ ಪ್ರಧಾನಿ ಜತೆ ಮಾತುಕತೆ ನಡೆಸಲಿದ್ದಾರೆ.

ಸಿಂಗಾಪುರವೇ ಏಕೆ?
ಉತ್ತರ ಕೊರಿಯಾದ ಆಡಳಿತ ವಹಿಸಿಕೊಂಡ ಬಳಿಕ ಕಿಮ್‌ 2 ಬಾರಿಯಷ್ಟೇ ಚೀನಗೆ ಹೋಗಿ ಬಂದಿದ್ದಾರೆ. ಮೊನ್ನೆಯಷ್ಟೇ ದಕ್ಷಿಣ ಕೊರಿಯಾ ಗಡಿಯೊಳಗೆ ಹೋಗಿದ್ದರು. ಇದೀಗ ಇವರಿಬ್ಬರ ಮಾತುಕತೆಗೆ ಸಿಂಗಾಪುರವನ್ನೇ ಆಯ್ಕೆ ಮಾಡಿದ್ದರ ಹಿಂದೆ ಬೇರೆಯೇ ಕಾರಣವಿದೆ. ಇದುವರೆಗೆ ಕಿಮ್‌ ಐರೋಪ್ಯ ದೇಶಗಳಿಗೆ ಕಾಲಿಟ್ಟಿಲ್ಲ. ಭದ್ರತಾ ಮತ್ತು ಆ ದೇಶಗಳ ಮೇಲಿನ ಅನುಮಾನದಿಂದ ಅವರು ಅಲ್ಲಿಗೆ ಹೋಗುವುದೂ ಇಲ್ಲ. ಹೀಗಾಗಿ ಅನಿವಾರ್ಯವಾಗಿ, ಈ ಹಿಂದೆ ಬೇರೆ ಅಂತಾರಾಷ್ಟ್ರೀಯ ಸಂಘರ್ಷಗಳ ನಡುವಿನ ಶಾಂತಿ ಮಾತುಕತೆಗೆ ವೇದಿಕೆಯಾಗಿದ್ದ ಸಿಂಗಾಪುರವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.

Advertisement

ಶೃಂಗಕ್ಕೆ 101 ಕೋ.ರೂ. ಖರ್ಚು
ಟ್ರಂಪ್‌- ಕಿಮ್‌  ಮಾತುಕತೆಗೆ ಸಿಂಗಾಪುರವೇ 100 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಇದರಲ್ಲಿ ಇವರಿಬ್ಬರು ಉಳಿದಿರುವ ಹೊ ಟೇಲ್‌, ಭದ್ರತಾ ವೆಚ್ಚವೂ ಸೇರಿದೆ. ಇದನ್ನು ಸಿಂಗಾಪುರವು ಸ್ವಯಂ ಪ್ರೇರಿತವಾಗಿಯೇ, ಜಾಗ ತಿಕ ಶಾಂತಿಗಾಗಿ ಮಾಡುತ್ತಿರುವು ದಾಗಿ ಘೋಷಿಸಿಕೊಂಡಿದೆ. ರವಿವಾರ ವಷ್ಟೇ ಪ್ರಧಾನಿ ಲೀ ಅವರು ಈ ಮೊತ್ತ ಬಹಿರಂಗ ಪಡಿಸಿದ್ದಾರೆ.

ಯಾರಿಗೆ ಲಾಭ?
ಸದ್ಯದ ಮಟ್ಟಿಗೆ ಇವರಿಬ್ಬರ ಮಾತುಕತೆ ಕೇವಲ ಐತಿಹಾ ಸಿಕವಷ್ಟೇ. ಅಜೆಂಡಾ ಕೂಡ ಫಿಕ್ಸ್‌ ಆಗಿಲ್ಲ. ಹೀಗಾಗಿ ಹೆಚ್ಚಿನದ್ದೇನೂ ನಿರೀಕ್ಷಿಸ‌ಲು ಸಾಧ್ಯವಿಲ್ಲ. ಆದರೆ, ಅಮೆರಿಕ- ಉ. ಕೊರಿಯಾ ನಡುವಿನ ಸಂಘ ರ್ಷವೆಲ್ಲಾದರೂ ಈ ಮಾತು ಕತೆಯಿಂದ ಕೊನೆಗೊಂಡರೆ ಅದು ಟ್ರಂಪ್‌ ಪಾಲಿಗೆ ಮೈಲುಗಲ್ಲಾಗುತ್ತದೆ. ಏಕೆಂದರೆ ಈವರೆಗೆ ಅಮೆರಿಕದ 11 ಅಧ್ಯಕ್ಷರು ಸಾಧಿಸದೇ ಹೋದ ದ್ದನ್ನು ಟ್ರಂಪ್‌ ಸಾಧಿಸಿದಂ ತಾಗುತ್ತದೆ. ಅಲ್ಲದೆ ಈಗಾಗಲೇ ಇವರ ಹೆಸರು ನೊಬೆಲ್‌ ಶಾಂತಿ ಪ್ರಶಸ್ತಿಗೆ ಶಿಫಾರಸಾಗಿದ್ದು ಪ್ರಶಸ್ತಿಯ ಹತ್ತಿರಕ್ಕೆ ಸಾಗಿ ಬಿಡುತ್ತಾರೆ. ಇನ್ನು ಕಿಮ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿದ್ದು ಇದಕ್ಕೆ ಅಮೆರಿಕ ಹೇರಿರುವ ದಿಗ್ಬಂಧ ಕಾರಣ. ಮಾತು ಕತೆ ಫ‌ಲಪ್ರದವಾದರೆ ಎಲ್ಲಾ ದೇಶಗಳ ನಡುವೆ ಸಾಮರಸ್ಯ ಸಾಧಿಸಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next