Advertisement

Donald Trump ರಿಪಬ್ಲಿಕ್‌ನ ಅಧಿಕೃತ ಅಧ್ಯಕ್ಷ ಅಭ್ಯರ್ಥಿ

12:14 AM Jul 17, 2024 | Team Udayavani |

ಮಿಲ್ವಾಕೀ: ಹತ್ಯೆ ಸಂಚಿನಿಂದ ಪಾರಾಗಿ ಮರುಜನ್ಮ ಪಡೆದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಬಲಕಿವಿಗೆ ಬ್ಯಾಂಡೇಜ್‌ ಧರಿಸಿಯೇ ರಿಪಬ್ಲಿಕನ್‌ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡರು. ಈ ಸಮಾವೇಶದಲ್ಲಿ ಸೇರಿದ್ದ ಪ್ರತಿನಿಧಿಗಳು ಟ್ರಂಪ್‌ರನ್ನು ನವೆಂಬರ್‌ 5ರ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದರು. ಇದಕ್ಕೆ ಪ್ರತಿಯಾಗಿ ಗುರುವಾರ ಟ್ರಂಪ್‌ ಅವರು ಸ್ವೀಕಾರ ಭಾಷಣ ಮಾಡಲಿದ್ದಾರೆ.

Advertisement

ಅಭ್ಯರ್ಥಿಯೆಂದು ಅಧಿಕೃತ ಘೋಷ­ಣೆಗೆ 2 ದಿನಗಳಿರುವಂತೆಯೇ ಅಂದರೆ ರವಿವಾರ ಫಿಲಡೆಲ್ಫಿಯಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಟ್ರಂಪ್‌ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದೃಷ್ಟವಶಾತ್‌ ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದರು.

ಗುಂಡಿನ ದಾಳಿ ಬಳಿಕ ಚೇತರಿಸಿಕೊಂ­ಡಿರುವ ಟ್ರಂಪ್‌ ಅವರು ತಮ್ಮ ಕೈಯನ್ನು ಮುಷ್ಟಿ ಮಾಡಿ, ಹೋರಾಟದ ಸಂಕೇತ­ವನ್ನು ತೋರಿಸುತ್ತಾ ಸೋಮವಾರ ಸಮಾವೇ­ಶದ ಹಾಲ್‌ನೊಳಗೆ ಪ್ರವೇಶಿಸು ತ್ತಿ­ದ್ದಂತೆ, ಅಲ್ಲಿ ಸೇರಿದ್ದ ಜನಸಮೂಹದ ಕರತಾಡನ ಮುಗಿಲುಮುಟ್ಟಿತ್ತು. ಸಭಾಂಗಣ­ದಲ್ಲಿ ನೆರೆದಿದ್ದ ಸಾವಿರಾರು ರಿಪಬ್ಲಿಕನ್‌ ಪ್ರತಿನಿಧಿಗಳು, ಬೆಂಬಲಿಗರು ಹಾಗೂ ಸದಸ್ಯರು “ಫೈಟ್‌’ (ಹೋರಾಟ) ಎಂಬ ಘೋಷಣೆಗಳನ್ನು ಕೂಗಿದರು.

ಇನ್ನು, ಮುಂದಿನ ತಿಂಗಳು ಶಿಕಾಗೋ­ದಲ್ಲಿ ನಡೆಯಲಿರುವ ಡೆಮಾಕ್ರಾಟ್‌ ಪಕ್ಷದ ಸಮಾವೇಶದಲ್ಲಿ ಆ ಪಕ್ಷದ ಪ್ರತಿನಿಧಿಗಳು ಹಾಲಿ ಅಧ್ಯಕ್ಷ ಬೈಡೆನ್‌ರನ್ನು ಡೆಮಾಕ್ರಾಟ್‌ ಅಭ್ಯರ್ಥಿ ಎಂದು ಘೋಷಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next