Advertisement

ಭಾರತೀಯರ ಗ್ರೀನ್‌ಕಾರ್ಡ್‌ ಕನಸಿಗೆ ಟ್ರಂಪ್‌ ತಣ್ಣೀರು!

03:45 AM Feb 09, 2017 | Team Udayavani |

ಹೊಸದಿಲ್ಲಿ: ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಯೂರ ಬೇಕೆನ್ನುವ ಭಾರತೀಯರ ಆಸೆಗೆ ಟ್ರಂಪ್‌ ಸರಕಾರ ತಣ್ಣೀರೆರಚಲು ಮುಂದಾಗಿದೆ. ಗ್ರೀನ್‌ ಕಾರ್ಡ್‌ಗಾಗಿ ವಲಸೆ ಬರುವವರ ಅರ್ಧದಷ್ಟು ಸಂಖ್ಯೆಗೆ ಕತ್ತರಿ ಬೀಳುವ ದಿನಗಳು ದೂರವಿಲ್ಲ.

Advertisement

ವಲಸಿಗರ ವಿರೋಧಿ ನೀತಿಗೆ ಪೂರಕವಾದ “ರೈಸ್‌’ ಮಸೂದೆ ಪ್ರಸ್ತಾವಗೊಂಡಿದ್ದು, ರಿಪಬ್ಲಿಕನ್‌ನ ಟಾಮ್‌ ಕಾಟನ್‌ ಮತ್ತು ಡೆಮಾಕ್ರಟಿಕ್‌ನ ಡೇವಿಡ್‌ ಪೆಡ್ನೂì ಎಂಬ ಇಬ್ಬರು ಸಂಸದರು ಇದರ ಪರ ಧ್ವನಿ ಎತ್ತಿದ್ದಾರೆ. ರೈಸ್‌ ಮಸೂದೆ ಜಾರಿಗೆ ಡೊನಾಲ್ಡ್‌ ಟ್ರಂಪ್‌ ಅವರ ಒಲವೂ ಇರುವುದರಿಂದ ಅಮೆರಿಕದಲ್ಲಿನ್ನು ಗ್ರೀನ್‌ ಕಾರ್ಡ್‌ ಪ್ರವಾಹ ತಗ್ಗುವ ಸಾಧ್ಯತೆಯಿದೆ. ಕಾನೂನುಬದ್ಧವಾಗಿ ಗ್ರೀನ್‌ ಕಾರ್ಡ್‌ ಹೊಂದಲು, ಅಮೆರಿಕದಲ್ಲಿ ಉದ್ಯೋಗದ ಕನಸು ಕಟ್ಟಿಕೊಂಡು ಆಗಮಿಸುವವರ ಸಂಖ್ಯೆ ಈಗಾಗಲೇ ವರ್ಷಕ್ಕೆ 10 ಲಕ್ಷ ಮಂದಿಯಿದ್ದು, ಇದನ್ನು ಅರ್ಧಕ್ಕೆ ಇಳಿಸಲು ರೈಸ್‌ ಮಸೂದೆ ಜಾರಿಯಾಗಬೇಕು ಎಂಬ ಚರ್ಚೆ ಸಂಸತ್ತಿನಲ್ಲಿ ನಡೆದಿದೆ. ಈಗಾಗಲೇ ಅಮೆರಿಕದಲ್ಲಿ ಪ್ರತಿ ವರ್ಷ ಒಂದು ಲಕ್ಷ ಮಂದಿಗೆ ಗ್ರೀನ್‌ ಕಾರ್ಡ್‌ ನೀಡಲಾಗುತ್ತಿದೆ. ಈ ಸಂಖ್ಯೆಗೂ ಭರ್ಜರಿ ಕತ್ತರಿ ಬೀಳಲಿದೆ.

ಪ್ರಸ್ತುತ ಅಮೆರಿಕದಲ್ಲಿ ಗ್ರೀನ್‌ ಕಾರ್ಡ್‌ ಹೊಂದಲು ವಲಸೆ ಉದ್ಯೋಗಿಗಳು 10ರಿಂದ 35 ವರ್ಷದ ತನಕ ಕಾಯಬೇಕು. ಹೀಗೆ ಕಾಯುತ್ತಿರುವ ಲಕ್ಷಾಂತರ ಮಂದಿಗೆ “ರೈಸ್‌’ ಮಸೂದೆ ತಡೆಗೋಡೆ ಆಗಲಿದೆ. ಅಲ್ಲದೆ, ಇನ್ನು ಗ್ರೀನ್‌ಕಾರ್ಡ್‌ಗಾಗಿಯೇ 40-50 ವರ್ಷ ಕಾಯಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ ಎನ್ನಲಾಗಿದೆ. ಆದರೆ, ಈ ಮಸೂದೆಯಲ್ಲಿ ಎಚ್‌- 1ಬಿ ವೀಸಾ ಕುರಿತು ಏನೂ ಹೇಳಿಲ್ಲ. “ರೈಸ್‌’ ಜಾರಿಯಾದರೆ ಅಮೆರಿಕದ ಉದ್ಯೋಗಿಗಳ ಸಂಬಳವೂ ಅಧಿಕವಾಗಲಿದೆ. “ರೈಸ್‌’ ಮಸೂದೆ ಪರ ಸಂಸತ್ತಿನಲ್ಲಿ ಉಭಯ ಪಕ್ಷಗಳ ಪ್ರಧಾನ ಸಂಸದರೇ ಬಲವಾಗಿ ಧ್ವನಿ ಎತ್ತಿರುವುದರಿಂದ ಟ್ರಂಪ್‌ ಅವರಿಗೆ ಇದನ್ನು ಜಾರಿ ತರಲು ಯಾವುದೇ ವಿರೋಧಗಳೂ ಎದುರಾಗುವುದಿಲ್ಲ.

ಬಲವಾದ ಸಾಕ್ಷಿ ಕೊಡಿ: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ಆದೇಶಿಸಿರುವ ವಲಸೆ ವಿರೋಧಿ ನೀತಿ ವಾಷಿಂಗ್ಟನ್‌ ನ್ಯಾಯಾಲಯದಲ್ಲಿ ತೀವ್ರ ಚರ್ಚೆಗೊಳಪಟ್ಟಿದ್ದು, “ನಿಷೇಧಿಸಿರುವ 7 ದೇಶಗಳ ಪ್ರಜೆಗಳಲ್ಲಿ ಯಾರಾದರೂ ಅಮೆರಿಕದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಿದ್ದರ ಕುರಿತು ಸಾಕ್ಷಿ ಕೊಡಿ’ ಎಂದು ಸರಕಾರಕ್ಕೆ ಸಾಲಿಸಿಟರ್‌ ಜೆನರಲ್‌ ನೋವಾ ಪರ್ಸೆಲ್‌ ಸೂಚಿಸಿದ್ದಾರೆ. “ನಿಷೇಧಕ್ಕೊಳಪಟ್ಟ ರಾಷ್ಟ್ರಗಳ ಎಲ್ಲ ಮುಸ್ಲಿಮ್‌ ವಲಸಿಗರಿಂದ ಅಮೆರಿಕದ ನೆಲಕ್ಕೆ ಹಾನಿ 
ಆಗುತ್ತದೆ ಎನ್ನಲಾಗದು. ಇದರಿಂದ ಒಂದೇ ಧರ್ಮವನ್ನು ಪೂರ್ವಗ್ರಹದಿಂದ ನೋಡಿದಂತಾಗುತ್ತದೆ. ಸೂಕ್ತ ಆಧಾರಗಳಿಲ್ಲದೆ ಸಾಂವಿಧಾನಿಕವಾಗಿ ವಲಸಿಗರನ್ನು ತಡೆಯುವ ಕ್ರಮ ಸರಿಯಲ್ಲ’ ಎಂದು ಕೋರ್ಟ್‌ ಹೇಳಿದೆ. ಇನ್ನೊಂದೆಡೆ ಟ್ರಂಪ್‌ ಸರಕಾರ, “ವಲಸೆ ನಿಷೇಧದ ಪಟ್ಟಿ 7 ರಾಷ್ಟ್ರಗಳಿಗೆ ಮಾತ್ರ ಸೀಮಿತ. ಯಾವುದೇ ಕಾರಣಕ್ಕೂ ಅದನ್ನು ವಿಸ್ತರಿಸುವುದಿಲ್ಲ’ ಎಂದು ಹೇಳಿದೆ.

100 ಸ್ಟಾರ್ಟ್‌ಅಪ್‌ ವಿರೋಧ: ಎಚ್‌- 1ಬಿ ವೀಸಾ ರದ್ದತಿಯ ಭಯ ಈಗ ಸಾಫ್ಟ್ವೇರ್‌ ಸ್ಟಾರ್ಟ್‌ಅಪ್‌ಗ್ಳಿಗೂ ಆವರಿಸಿದ್ದು, 100ಕ್ಕೂ ಅಧಿಕ ಟೆಕಿ ಸ್ಟಾರ್ಟ್‌ಅಪ್‌ಗ್ಳು ಟ್ರಂಪ್‌ ನೀತಿಗೆ ವಿರೋಧ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿವೆ. “ಅಮೆರಿಕ ಸಾಮರ್ಥಯ ಜಾಗತಿಕವಾದುದ್ದು. ಸ್ಟಾರ್ಟ್‌ ಅಪ್‌ಗ್ಳಿಗೆ ಸರಕಾರದ ನೀತಿಯಿಂದ ಬಲವಾದ ಪೆಟ್ಟು ಬೀಳಲಿದೆ. ಅಮೆರಿಕದಲ್ಲಿ ಹೊಸ ಕಂಪೆನಿಗಳ ಉದಯ ಮತ್ತು ಉದ್ಯೋಗ ಸೃಷ್ಟಿಯಾಗಲು ಇದರಿಂದ ಹಿನ್ನಡೆ ಆಗಲಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

Advertisement

ಏನಿದು ರೈಸ್‌ ಆ್ಯಕ್ಟ್?
ಬಲಿಷ್ಠ ಉದ್ಯೋಗಕ್ಕಾಗಿ ಅಮೆರಿಕ ವಲಸೆ ಸುಧಾರಣಾ (ಆರ್‌ಎಐಎಸ್‌ಇ) ನೀತಿಯ ಪ್ರಧಾನ ಉದ್ದೇಶ ಅಮೆರಿಕದ ಮೂಲ ನಿವಾಸಿಗಳ ಉದ್ಯೋಗ ವೇತನವನ್ನು ಹೆಚ್ಚಿಸುವುದು. ಈ ಹಿಂದೆ ಸ್ಥಳೀಯ ವಾಸಿಗಳ ಸಂಬಂಧಿಗಳಿಗೆ ಶೇ.70ರಷ್ಟು ಗ್ರೀನ್‌ಕಾರ್ಡ್‌ ವಿತರಿಸಲಾಗುತ್ತಿತ್ತು. ಅದಕ್ಕೂ ಕತ್ತರಿ ಬೀಳಲಿದೆ. ಔದ್ಯೋಗಿಕ ವೀಸಾ, ವಲಸೆ ನೀತಿಯನ್ನು ಸುಧಾರಿಸುವುದು ಈ ಕಾಯ್ದೆಯ ಇತರೆ ಅಂಶಗಳು.

Advertisement

Udayavani is now on Telegram. Click here to join our channel and stay updated with the latest news.

Next