Advertisement
ನಮಸ್ತೆ ಟ್ರಂಪ್ ಕಾರ್ಯಕ್ರಮದ ಬಳಿಕ ಟ್ರಂಪ್ ಕುಟುಂಬ ಆಗ್ರಾದಲ್ಲಿರುವ ವಿಶ್ವವಿಖ್ಯಾತ ಸ್ಮಾರಕ ತಾಜ್ ಮಹಲ್ ಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಂಡರು. ಎರಡನೇ ದಿನದ ಪ್ರವಾಸದಲ್ಲಿ ಕೂಡ ಭಾರತದ ಸಂಪ್ರದಾಯ, ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಟ್ರಂಪ್ ಕುಟುಬಕ್ಕೆ ಲಭ್ಯವಾಗಲಿದ್ದು, ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
- ಇಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ಏರ್ಪಡಿಸಿರುವ ಸಾಂಪ್ರದಾಯಿಕ ಅದ್ದೂರಿ ಸ್ವಾಗತ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮೆಲೇನಿಯಾ ಟ್ರಂಪ್ ಭಾಗವಹಿಸಲಿದ್ದಾರೆ.
- ಬೆಳಗ್ಗೆ 10:30 ಕ್ಕೆ ರಾಜ್ ಘಾಟ್ ಗೆ ಭೇಟಿ ನೀಡಲಿರುವ ಟ್ರಂಪ್ ಹಾಗೂ ಪ್ರಧಾನಿ ಮೋದಿ, ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.
- ಬೆಳಗ್ಗೆ 11ರಿಂದ ಮೋಧಿ ಮತ್ತು ಟ್ರಂಪ್ ನಡುವೆ ಹಲವು ಯೋಜನೆಗಳ ಬಗ್ಗೆ ಹೈದರಾಬಾದ್ ಹೌಸ್ ನಲ್ಲಿ ಮಾತುಕತೆಗಳು ನಡೆಯಲಿದೆ. ಈ ವೇಳೆ ಹಲವು ನಿಯೋಗಗಳು ಭಾಗಿಯಾಗಲಿವೆ. ಇಲ್ಲಿಯೇ ಟ್ರಂಪ್ ಗೆ ಮಧ್ಯಾಹ್ನದ ಭೋಜನ ಏರ್ಪಡಿಸಲಾಗಿದೆ.
- ಅಮೆರಿಕಾದ ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್ ದೆಹಲಿ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿದ್ದಾರೆ.
- ನಂತರದಲ್ಲಿ ದೆಹಲಿಯಲ್ಲಿರುವ ಅಮೆರಿಕಾ ರಾಯಾಭಾರ ಕಚೇರಿಗೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್, ತಮ್ಮ ದೇಶದ ಸಿಇಒ ಗಳ ಜೊತೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
- ಸಂಜೆ 7:30ಕ್ಕೆ ರಾಷ್ಟ್ರಪತಿ ಕೋವಿಂದ್ ಅವರನ್ನು ಟ್ರಂಪ್ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಲಿದ್ದಾರೆ. ರಾಷ್ಟ್ರಪತಿಗಳು ಅಮೆರಿಕಾ ಅಧ್ಯಕ್ಷರಿಗಾಗಿ ಅದ್ದೂರಿ ಔತಣ ಕೂಟ ಏರ್ಪಡಿಸಿದ್ದು, ಅದದಾದ ಬಳಿಕ ರಾತ್ರಿ 10 ಗಂಟೆಗೆ ದೆಹಲಿಯಿಂದ ಅಮೆರಿಕಾಗೆ ಟ್ರಂಪ್ ವಿಮಾನದ ಮೂಲಕ ತೆರಳಲಿದ್ದಾರೆ.