Advertisement

ಮೋದಿ ಕನಸಿನ ಕ್ರೀಡಾಂಗಣ ಟ್ರಂಪ್‌ರಿಂದ ಉದ್ಘಾಟನೆ

10:17 AM Feb 14, 2020 | sudhir |

ಅಹ್ಮದಾಬಾದ್‌: ಅಹ್ಮದಾಬಾದ್‌ನಲ್ಲಿ ನಿರ್ಮಿಸಲಾದ ವಿಶ್ವದ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣವನ್ನು ಫೆ. 24 ಮತ್ತು 25ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉದ್ಘಾಟಿಸಲಿದ್ದಾರೆ. ಈ ಕ್ರೀಡಾಂಗಣದಲ್ಲಿ ಎಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಮೊದಲ ಪಂದ್ಯ ಏರ್ಪಡುವ ಸಾಧ್ಯತೆಯಿದೆ.

Advertisement

ಮೋದಿ ಕನಸಿನ ಯೋಜನೆ
ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸುವುದು ಪ್ರಧಾನಿ ನರೇಂದ್ರಮೋದಿ ಅವರ ಕನಸಿನ ಯೋಜನೆಯಾಗಿತ್ತು. ಇದರಂಗವಾಗಿ 53 ಸಾವಿರ ಆಸನ ಸಾಮರ್ಥ್ಯದ ಮೊಟೆರಾ ಕ್ರೀಡಾಂಗಣವನ್ನು 2015ರಲ್ಲಿ ಕೆಡವಲಾಗಿತ್ತು. ಆದೇ ಸ್ಥಳದಲ್ಲಿ ಇದೀಗ 1.10 ಲಕ್ಷ ಆಸನ ಸಾಮರ್ಥ್ಯದ ಆಧುನಿಕ ಸೌಕರ್ಯಗಳಿರುವ ಬೃಹತ್‌ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದಕ್ಕೆ ಸರ್ದಾರ್‌ ವಲ್ಲಭಭಾಯಿ ಕ್ರೀಡಾಂಗಣವೆಂದು ಪುನರ್‌ ನಾಮ ಕರಣ ಮಾಡಲಾಗಿದೆ.

100 ಮಿ.ಡಾ. ವೆಚ್ಚ
ಸುಮಾರು 100 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ. ಈ ಮೈದಾನ ಕೇವಲ ಕ್ರಿಕೆಟ್‌ಗೆ ಮಾತ್ರ ಆತಿಥ್ಯ ವಹಿಸುತ್ತಿಲ್ಲ. ಬದಲಾಗಿ ಫ‌ುಟ್‌ಬಾಲ್‌, ಹಾಕಿ, ಬಾಸ್ಕೆಟ್‌ಬಾಲ್‌, ಕಬಡ್ಡಿ. ಬಾಕ್ಸಿಂಗ್‌, ಲಾನ್‌ ಟೆನಿಸ್‌, ಆ್ಯತ್ಲೆಟಿಕ್ಸ್‌, ಸ್ಕ್ವಾಷ್‌, ಬಿಲಿಯರ್ಡ್ಸ್‌, ಬ್ಯಾಡ್ಮಿಂಟನ್‌ ಮತ್ತು ಈಜು ಕ್ರೀಡೆಗೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next