Advertisement
ಇತ್ತೀಚೆಗೆ, ಟ್ರಂಪ್ ಕೊರೊನಾದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ, 1971ರಲ್ಲಿ ನೆದರ್ಲೆಂಡ್‌ನಲ್ಲಿ ಪೋಷಕರ ಆಯ್ಕೆಯಿಂದ ಗರ್ಭಪಾತಗೊಂಡಿದ್ದ ಭ್ರೂಣವೊಂದರಿಂದ ಪ್ರತ್ಯೇಕಿಸಿ ಸಂಸ್ಕರಿಸಲಾಗಿದ್ದ ಜೀವಕಣಗಳನ್ನು ಬಳಸಿ ತಯಾರಿಸಲಾಗಿದ್ದ ಔಷಧ ಒಂದನ್ನು ಟ್ರಂಪ್‌ಗೆ ನೀಡಲಾಗಿತ್ತು. ಭ್ರೂಣದ ಕಿಡ್ನಿಯಲ್ಲಿದ್ದ “ಎಚ್‌ಇಕೆ-293ಟಿ’ ಮಾದರಿಯ ಜೀವಕಣಗಳು ಅವಾಗಿದ್ದು, ಅವನ್ನು ಮೋನೋಕ್ಲೋನಲ್ ಆ್ಯಂಟಿಬಾಡಿ ಸಮ್ಮಿಶ್ರದ ಸೂತ್ರದಡಿ ಔಷಧ ರೂಪದಲ್ಲಿ ಪ್ರಯೋಗಿ ಸಲಾಗಿತ್ತು. ಸುಮಾರು 8 ಗ್ರಾಂನಷ್ಟು ಈ ಮಿಶ್ರಣ ಟ್ರಂಪ್ ದೇಹವನ್ನು ಸೇರಿದ ಮೇಲೆ ಅವರು ಚೇತರಿಸಿಕೊಂಡರು ಎನ್ನಲಾಗಿದೆ. ಇದು ಕೊರೊನಾಕ್ಕೆ ಪರಿಣಾಮಕಾರಿ ಔಷಧಯಲ್ಲ ಎಂದು ವೈದ್ಯರೇ ತಿಳಿಸಿದ್ದಾರೆ. ಆದರೆ, ಇದು ದೊಡ್ಡ ವಿವಾದವನ್ನು ಎಬ್ಬಿಸಿದೆ.
ಟ್ರಂಪ್ ಹಾಗೂ ಅವರ ಬೆಂಬಲಿಗರು ಈ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಅದಕ್ಕೆ ಕಾರಣಗಳೂ ಇವೆ. ಟ್ರಂಪ್ ಪಕ್ಷ ರಿಪಬ್ಲಿಕನ್, ಮೊದಲಿನಿಂದಲೂ ಗರ್ಭಪಾತ ವಿರೋಧಿ ಧೋರಣೆ ಹೊಂದಿದೆ. ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಗರ್ಭಪಾತ ನಿಷೇಧ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಲ್ಲದೆ, ಭ್ರೂಣದ ಜೀವಕಣಗಳ ಮೇಲಿನ ಸ್ಟೆಮ್ ಸೆಲ್ಸ್ ಥರೆಪಿ ಕುರಿತಾದ ಸಂಶೋಧನೆಗಳಿಗೆ ನೀಡಲಾಗುತ್ತಿದ್ದ ಸರಕಾರಿ ಅನುದಾನವನ್ನೂ ಸ್ಥಗಿತಗೊಳಿಸಿದ್ದರು. ಈಗ ಟ್ರಂಪ್ ಅವರೇ ಪ್ರಾಣಾಪಾಯದಿಂದ ಪಾರಾಗಲು ಭ್ರೂಣದಿಂದ ಪಡೆದ ಜೀವಕಣಗಳ ಔಷಧ ಪಡೆದಿದ್ದಾರೆ ಎಂಬ ವಿಚಾರ ಖುದ್ದು ಟ್ರಂಪ್ ಅವರಿಗೂ, ಅವರ ರಿಪಬ್ಲಿಕನ್ ಪಾರ್ಟಿಗೂ ಇರುಸು ಮುರುಸು ತಂದಿದೆ.