ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಇನ್ನಷ್ಟೇ ಪೂರ್ಣ ಚಿತ್ರಣ ಲಭ್ಯವಾಗಬೇಕಾಗಿದೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತೆ ಎರಡನೇ ಅವಧಿಗೆ ಪುನರಾಯ್ಕೆ ಬಯಸಿದ್ದು, ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಲು ಬಯಸಿದ್ದು, ಅಮೆರಿಕದ ಜನ ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.
ಅಮೆರಿಕದ ಅಧ್ಯಕ್ಷಗಾದಿಗೆ ಏರಲು 270 ಎಲೆಕ್ಟ್ರೋರಲ್ ಮತ ಪಡೆಯಬೇಕಾಗಿದೆ. ಜೋ ಬೈಡೆನ್ 220 ಹಾಗೂ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 213 ಎಲೆಕ್ಟ್ರೋರಲ್ ಮತ ಪಡೆದಿದ್ದಾರೆ. ಆದರೆ ಅಮೆರಿಕದ ಮಾಧ್ಯಮಗಳು ಜೋ ಬೈಡೆನ್ 245 ಎಲೆಕ್ಟ್ರೋರಲ್ ಮತ ಪಡೆದು ಗೆಲುವಿನ ಸನಿಹದಲ್ಲಿದ್ದಾರೆ ಎಂದು ಹೇಳಿವೆ.
ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಇನ್ನು ಎಣಿಕೆಗೆ ಬಾಕಿ ಉಳಿದಿರುವ ಮತಗಳ ಪೈಕಿ ಬೈಡೆನ್ ಗಿಂತ ಡೊನಾಲ್ಡ್ ಟ್ರಂಪ್ ಗೆ ನಿರಾಯಾಸವಾಗಿ ಗೆಲುವು ಸಾಧಿಸಲು ಬೇಕಾದ ಮ್ಯಾಜಿಕ್ ನಂಬರ್ ಲಭ್ಯವಾಗಲಿದೆ ಎಂದು ಕೆಲವು ಮಾಧ್ಯಮಗಳು ವಿಶ್ಲೇಷಿಸಿವೆ.
ಇದನ್ನೂ ಓದಿ:ವಿವಾಹ ವಿಚ್ಛೇದನ ನಂತರವೂ ಪತ್ನಿ, ಮಕ್ಕಳಿಗೆ ಪತಿ ಜೀವನಾಂಶ ಕೊಡಬೇಕು: ಹೈಕೋರ್ಟ್
ಗೆಲುವಿನ ವಿಚಾರದಲ್ಲಿ ಈಗಾಗಲೇ ಟ್ರಂಪ್ ಆಕ್ಷೇಪ ಎತ್ತಿದ್ದಾರೆ. ಇದರಿಂದಾಗಿ ಒಂದು ವೇಳೆ ಫಲಿತಾಂಶದ ಬಗ್ಗೆ ಕಾನೂನು ಹೋರಾಟ ಆರಂಭಗೊಂಡರೆ ಮತ್ತಷ್ಟು ಕಾಲ ವಿಳಂಬವಾಗಲಿದೆ ಎಂಬ ತಜ್ಞರ ಅಭಿಪ್ರಾಯ ಸತ್ಯವಾಗತೊಡಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾನೂನು ಸಮರದತ್ತ ಮುಖಮಾಡಲಿದೆ ಎಂಬುದು ನಿಚ್ಚಳವಾಗತೊಡಗಿದೆ.
ಇದು ಮೋಸ…ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇನೆ: ಡೊನಾಲ್ಡ್ ಟ್ರಂಪ್
ಇದು ಅಮೆರಿಕದ ಜನರಿಗೆ ಎಸಗಿದ ಮೋಸವಾಗಿದೆ. ನಾವು ಚುನಾವಣೆ ಗೆಲ್ಲಲು ಸಿದ್ದವಾಗಿದ್ದೇವು. ನಿಜ ಹೇಳಬೇಕೆಂದರೆ ನಾವು ಚುನಾವಣೆ ಗೆದ್ದಿದ್ದೇವೆ. ಈಗ ನಮ್ಮ ಗುರಿ ಇರುವುದು ಪ್ರಾಮಾಣಿಕತೆ ಮೇಲೆ. ನಾವು ಈಗ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ. ಎಲ್ಲಾ ಮತದಾನ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ನ ಮೆಟ್ಟಿಲೇರುವುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.