Advertisement

ಅಧ್ಯಾಯ 1. 1 ಟ್ರಂಪ್‌ ಪರಿಣಾಮ

07:41 PM Feb 04, 2017 | Harsha Rao |

As democracy is perfected, the office of president represents, more and more closely, the inner soul of the people. On some great and glorious day the plain folks of the land will reach their heart’s desire at last and the White House will be adorned by a downright moron… 
– H.L. Mencken, Baltimore Evening Sun, 
 
July 26, 1920
ಈ ಮಾತುಗಳನ್ನು ಹೇಳಿದ ಎಚ್‌. ಎಲ…. ಮೆನೆRನ್‌ ತೀರಿಹೋಗಿಯೇ ಅರವತ್ತು ವರ್ಷಗಳಾಗಿಬಿಟ್ಟವು. ಮೆನೆRನ್‌ ಅಮೆರಿಕನ್‌ ಇಂಗ್ಲಿಶ್‌ನ ಕುರಿತು ಆಳವಾದ ಅಧ್ಯಯನ ಮಾಡಿದ್ದ ವಿದ್ವಾಂಸ, ಪತ್ರಕರ್ತ ಎಲ್ಲದಕ್ಕಿಂತ ಹೆಚ್ಚಾಗಿ ರಾಜಕೀಯವನ್ನು ವ್ಯಂಗ್ಯದ ಮೂಲ ಚುಚ್ಚುತ್ತಿದ್ದ ಬರಹಗಾರ. ಒಂಬತ್ತೂವರೆ ದಶಕಗಳ ಹಿಂದೆ ಆತ ಹೇಳಿದ ಮಾತುಗಳು ಅಮೆರಿಕದ ರಾಜಕಾರಣದ ಸಂದರ್ಭದಲ್ಲಿ ಪದೆ ಪದೇ ಬಳಕೆಯಾಗಿದೆ. ರೇಗನ್‌ ಕಾಲಕ್ಕೆ ಇದು ಬಳಕೆಯಾದದ್ದು ಒಂದು ಬಗೆಯÇÉಾದರೆ ತೀರಾ ಇತ್ತೀಚೆಗೆ ಜಾರ್ಜ್‌ ಬುಷ್‌ ಜ್ಯೂನಿಯರ್‌ ಅಧ್ಯಕ್ಷ ಪದವಿಗೆ ಏರಿದಾಗ ಬಳಕೆಯಾದದ್ದು ಮತ್ತೂಂದು ಬಗೆಯಲ್ಲಿ. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷ ಪದವಿಗೆ ಏರಿದ ನಂತರ ಮೆನೆRನ್‌ ಬಾಲ್ಟಿಮೋರ್‌ ಈವಿನಿಂಗ್‌ ಸನ್‌ ಪತ್ರಿಕೆಗೆ ಬರೆದ ಅಂಕಣದ ಈ ಕೊನೆಯ ಸಾಲುಗಳು ಬೇರೆಯದೇ ಆದ ಅರ್ಥವನ್ನು ಪಡೆದಿವೆ.

Advertisement

“”ಪ್ರಜಾಪ್ರಭುತ್ವ ನಿಕೃಷ್ಟವಾಗುತ್ತ ಹೋದ ಹಾಗೆ, ಅಧ್ಯಕ್ಷರ ಕಚೇರಿ ಜನರ ಒಳಾತ್ಮವನ್ನು ಹೆಚ್ಚು ಹೆಚ್ಚು ಪ್ರತಿನಿಧಿಸುತ್ತಾ ಹೋದಂತೆ ಒಂದು ಮಹಾನ್‌ ಮಹತ್ವದ ದಿನದಂದು ಸಾಮಾನ್ಯ ಜನರ ಹೃದಯದಾಳದ ಅಭೀಪ್ಸೆಯೊಂದು ನಿಜವಾಗಿಬಿಡುತ್ತದೆ. ಶ್ವೇತಭವನವನ್ನು ಮೂರ್ಖನೊಬ್ಬ ಅಲಂಕರಿಸುತ್ತಾನೆ”

ಈ ಒಂದೊಂದು ಮಾತುಗಳೂ ಇಂದಿನ ಅಮೆರಿಕದ ಪ್ರಜಾಪ್ರಭುತ್ವವನ್ನಷ್ಟೇ ಅಲ್ಲ ಪ್ರಪಂಚದ ಬಹುತೇಕ ಪ್ರಜಾಪ್ರಭುತ್ವಗಳ ಮಟ್ಟಿಗೂ ನಿಜವಲ್ಲವೇ. ಮೆನೆRನ್‌ ಪರಿಭಾವಿಸಿದ್ದ ವ್ಯಂಗ್ಯಾರ್ಥಗಳೆಲ್ಲವೂ ಕಳೆದು ಹೋಗಿ ಅದೆಲ್ಲವೂ ನಿಜಾರ್ಥದಲ್ಲಿಯೇ ಸಂಭವಿಸಿಬಿಡುವ ವಿಶಿಷ್ಟ, ವಿಲಕ್ಷಣ ವೈಚಿತ್ರವೊಂದು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ಕಾಲಘಟ್ಟವಿದು.

ಟಿ. ವಿ. ಚಾನೆಲ್‌ ಒಂದರಲ್ಲಿ ಉದ್ಯಮಶೀಲತೆಗೆ ಸಂಬಂಧಿಸಿದ ರಿಯಾಲಿಟಿ ಶೋ ಒಂದರ ಮೂಲಕ ಪ್ರಸಿದ್ಧಿಗೆ ಬಂದ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಪದವಿಗೇರುವುದನ್ನು ಬಿಡಿ, ಕನಿಷ್ಠ ಪ್ರಾಥಮಿಕ ಹಂತದಿಂದಲೂ ಆಯ್ಕೆಯಾಗುವುದಿಲ್ಲ ಎಂಬ ಅನಿಸಿಕೆ ಮೊದಲಿಗೆ ಇತ್ತು. ಪ್ರಪಂಚದ ಬಹುಮುಖ್ಯ ಪ್ರಜಾಪ್ರಭುತ್ವವೊಂದನ್ನು ಮುನ್ನಡೆಸುವ ವ್ಯಕ್ತಿ ಹೇಗೆಲ್ಲ ವರ್ತಿಸಬಾರದು ಎಂದು ಅಮೆರಿಕನ್ನರು ಭಾವಿಸುತ್ತಾರೋ ಅದೆಲ್ಲವನ್ನೂ ಟ್ರಂಪ್‌ ಮಾಡುತ್ತಿದ್ದುದು ನಿಜ.

ಮಹಿಳೆಯರಂತೂ ಟ್ರಂಪ್‌ ಆಡಿದ ಒಂದೊಂದು ಮಾತುಗಳನ್ನೂ ದ್ವೇಷಿಸುವಂಥ ಸ್ಥಿತಿ ಇತ್ತು. ಆಗಮಿಕರೇ ಬಂದು ಕಟ್ಟಿದ ದೇಶವೊಂದರ ಅಧ್ಯಕ್ಷ ಹು¨ªೆಗೆ ಏರಲು ಬಯಸುತ್ತಿದ್ದ ವ್ಯಕ್ತಿ ವಲಸಿಗರ ಕುರಿತಂತೆ ಆಡುತ್ತಿದ್ದ ಮಾತುಗಳು ಸ್ವತಃ ಅಮೆರಿಕನ್ನರÇÉೇ ರೇಜಿಗೆ ಹುಟ್ಟಿಸುತ್ತಿದ್ದವು. ಆದರೆ ಚುನಾವಣಾ ಫ‌ಲಿತಾಂಶಗಳು ಈ ಎಲ್ಲವನ್ನೂ ಕೇವಲ ಮಾಧ್ಯಮಗಳು ಕಟ್ಟಿದ ಕಥನ ಎನ್ನುವಂತೆ ಮಾಡಿಬಿಟ್ಟವು.

Advertisement

ಇದೇಕೆ ಹೀಗಾಯಿತು ಎಂಬುದಕ್ಕೆ ಮಾಧ್ಯಮ ತಜ್ಞರ ಬಳಿ ಹಲವು ಕಾರಣಗಳಿವೆ. ಇವೆ‌ಲ್ಲವೂ ಮಾಧ್ಯಮಗಳೇಕೆ ಟ್ರಂಪ್‌ ಗೆಲುವನ್ನು ಊಹಿಸುವಲ್ಲಿ ಸೋತವು ಎಂಬುದಕ್ಕೆ ಮಾತ್ರ ಸೀಮಿತವಾಗಿವೆ. ಅಮೆರಿಕದ ಮತದಾರರ ಮನಸ್ಸಿನಲ್ಲಿ ಏನು ನಡೆಯುತ್ತಿತ್ತು. ಈ ಬದಲಾವಣೆ ಏಕಾಯಿತು ಎಂಬುದರ ಬಗ್ಗೆ ಈಗಲೂ ಯಾರೂ ಸ್ಪಷ್ಟವಾದ ಊಹೆಗಳನ್ನು ಮುಂದಿಡುತ್ತಿಲ್ಲ. ಚುನಾವಣಾ ಫ‌ಲಿತಾಂಶದ ನಂತರವೂ ಟ್ರಂಪ್‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಅಮೆರಿಕದ ಮತ್ತೂಂದು ಮುಖವನ್ನು ತೋರಿಸುತ್ತಿವೆಯಷ್ಟೆ.

ಟ್ರಂಪ್‌ ಗೆಲುವನ್ನು ಕೇವಲ ಒಂದು ದೇಶಕ್ಕೆ ಸೀಮಿತವಾದ ಘಟನೆಯನ್ನಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಈ ಬಗೆಯ ಊಹಾತೀತವಾದ ಕೆಲವು ಘಟನೆಗಳು ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ನಡೆದಿವೆ. ಒಳ್ಳೆಯ ಆಡಳಿತ, ಸಮರ್ಥ ನಾಯಕತ್ವ, ಪರಿಣಾಮಕಾರಿ ಪ್ರಜಾಪ್ರಭುತ್ವ ಮುಂತಾದ ಘೋಷಣೆಗಳೆಲ್ಲವೂ ಪ್ರಪಂಚದಾದ್ಯಂತ ಸವಕಲಾಗಿಬಿಟ್ಟಿವೆಯೇ ಎಂಬ ಸಂಶಯ ಈಗ ಎಲ್ಲರನ್ನೂ ಕಾಡುತ್ತಿದೆ. ಯೂರೋಪ್‌ ಒಕ್ಕೂಟದಿಂದ  ಬ್ರಿಟನ್‌ ಹೊರ ನಡೆಯಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಎಲ್ಲರ¨ªಾಗಿತ್ತು. ಆದರೆ ಜನಮತಗಣನೆಯ ಫ‌ಲಿತಾಂಶ ಹೊರಬಿ¨ªಾಗ ಅದು ಭಿನ್ನವಾಗಿತ್ತು. ಇಟಲಿಯಲ್ಲಿ, ಜರ್ಮನಿಯಲ್ಲಿ, ಸ್ವಲ್ಪ ಮಟ್ಟಿಗೆ ಭಾರತದಲ್ಲಿ, ನೇಪಾಳದಲ್ಲಿ ಹೀಗೆ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳೂ ಇದನ್ನೇ ಹೋಲುತ್ತಿವೆ.

ಜನರು ಆಡಳಿತದಲ್ಲಿರುವ ಪಕ್ಷಗಳ ವಿರುದ್ಧ ಮತ ಚಲಾಯಿಸುವುದನ್ನು “ಆಡಳಿತ ವಿರೋಧಿ ಅಲೆ’ ಎಂದು ಗುರುತಿಸುತ್ತೇವೆ. ಈ ಆಡಳಿತ ಪರ ಮತ್ತು ಆಡಳಿತ ವಿರೋಧಿ ಎಂಬುದು ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯ ಮಿತಿಯೊಳಗೇ ನಡೆಯುತ್ತಿರುತ್ತದೆ. ಪರ ವಿರೋಧಗಳೆರಡೂ ಹೆಚ್ಚಾ ಕಡಿಮೆ ಒಂದೇ ಬಗೆಯ ಎರಡು ಭಿನ್ನ ಆಯ್ಕೆಗಳ ಒಳಗಿರುತ್ತದೆ. ವರ್ತಮಾನದ ಪ್ರಪಂಚದ ಒಂದೇ ಬಗೆಯ ಎರಡು ಭಿನ್ನ ಆಯ್ಕೆಗಳಿಗಿಂತ ಸಂಪೂರ್ಣ ಹೊಸತಾದ ಮೂರನೆಯ ಆಯ್ಕೆಯ ಕಡೆಗೆ ಸಾಗುತ್ತಿದೆ ಎನಿಸುತ್ತಿದೆ. ಟ್ರಂಪ್‌ ಗೆಲುವು ಸೂಚಿಸುತ್ತಿರುವುದು ಅದನ್ನೇ.

ಉದಾರವಾದಿ ಪ್ರಜಾಪ್ರಭುತ್ವ ಎಂಬ ಮಾದರಿಯೇ ಬೇಸರವಾಗಿರುವಂತೆ ಜನ ಮತ ಚಲಾಯಿಸುತ್ತಿರುವಂತಿದೆ. ಈ ಪ್ರಕ್ರಿಯೆಯಲ್ಲಿ ಆಯ್ಕೆಯಾಗುತ್ತಿರುವವರು ಈಗಾಗಲೇ ಇರುವ ರಾಜಕೀಯ ಪಕ್ಷಗಳಿಗೆ ಸೇರಿದವರೇ ಆದರೂ ಆಡುವ ಭಾಷೆ ಭಿನ್ನವಾದುದು. ಇದರಲ್ಲಿ ಉತ್ತಮ ಆಡಳಿತ, ಸಮರ್ಥ ನಾಯಕತ್ವದಂಥ ಭರವಸೆಗಳಿಗಿಂತ ಹೆಚ್ಚಾಗಿ ಸ್ವಲ್ಪ ಅತಿ ಎನಿಸುವಂಥ ರಾಷ್ಟ್ರೀಯವಾದವಿದೆ. ಯಾವುದೇ ಸ್ಪಷ್ಟ ಆರ್ಥಿಕ ಯೋಜನೆಗಳಿಲ್ಲದೇ ಇದ್ದರೂ ರಾಷ್ಟ್ರೀಯವಾದೀ ಆರ್ಥಿಕತೆಯ ಬಗ್ಗೆ ಹೇಳುತ್ತಾರೆ. ಇದೆಲ್ಲವೂ ಜನರಿಗೆ ಇಷ್ಟವಾಗಲು ತೊಡಗುತ್ತದೆ. ಅವರು ಬದಲಾವಣೆಗಾಗಿ ಮತ ಚಲಾಯಿಸುತ್ತಾರೆ.

ಭಾರತದ ಮಾಹಿತಿ ತಂತ್ರಜ್ಞಾನೋದ್ಯಮಕ್ಕೂ ಅಮೆರಿಕಕ್ಕೂ ಬಹಳ ದೊಡ್ಡ ನಂಟಿದೆ. ಇಲ್ಲಿ ಉದ್ಯಮ ಬೆಳೆದಿರುವುದೇ ಅಮೆರಿಕದ ಹೊರಗುತ್ತಿಗೆಗಳಿಂದ. ಅಮೆರಿಕದ ಸಿಲಿಕಾನ್‌ ವ್ಯಾಲಿಯ ಶ್ರೀಮಂತಿಕೆಯ ಹಿಂದೆಯೇ ಭಾರತದಿಂದ ವಲಸೆ ಹೋದ ಎಂಜಿನಿಯರುಗಳಿ¨ªಾರೆ. ಅಮೆರಿಕವೆಂಬ ದೇಶದ ಉನ್ನತಿಗೆ ಕಾರಣವಾದದ್ದೇ ಈ ಬಗೆಯ ವಲಸಿಗರು. ಸ್ವತಃ ಟ್ರಂಪ್‌ ಪೂರ್ವಜರೂ ವಲಸಿಗರೇ. ಆದರೆ ಟ್ರಂಪ್‌ ತಮ್ಮ ಚುನಾವಣಾ ಭಾಷಣದಲ್ಲಿ ವಿಷ ಉಗುಳಿದ್ದು ಬಿಳಿಯರಲ್ಲದ ವಲಸಿಗರ ಮೇಲೆ.

ಅಮೆರಿಕದ ವಿವಿಧ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ದಕ್ಷಿಣ ಏಷ್ಯಾದ ಪ್ರಮುಖರೆಲ್ಲರೂ ಟ್ರಂಪ್‌ರ ನಂಜಿನ ಮಾತುಗಳನ್ನು ತಿರಸ್ಕರಿಸುವ ಮಾತುಗಳನ್ನು ಆಡುತ್ತಿದ್ದರೂ ಭಾರತೀಯರ ಒಂದು ವರ್ಗ ಟ್ರಂಪ್‌ ಬೆಂಬಲಕ್ಕೂ ನಿಂತಿತ್ತು. ಶಲಭ್‌ ಕುರ್ಮಾ ಎಂಬ ರಿಪಬ್ಲಿಕನ್‌ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರ ನೇತೃತ್ವದಲ್ಲಿರುವ ಈ ವರ್ಗಕ್ಕೆ ಭಾರತದ ಪ್ರಧಾನಿ ಮತ್ತು ಟ್ರಂಪ್‌ ಮಧ್ಯೆ ಸಾಮ್ಯ ಇರುವಂತೆ ಕಾಣಿಸುತ್ತಿತ್ತು.

ಯೂರೋಪಿನಲ್ಲಿ ಬ್ರೆಕ್ಸಿಟ್‌ ಸೃಷ್ಟಿಸಿರುವ ತಲ್ಲಣ, ಅಮೆರಿಕದಲ್ಲಿ ಟ್ರಂಪ್‌ ಮೂಲಕ ಸೃಷ್ಟಿಯಾಗುತ್ತಿರುವ ತಲ್ಲಣಗಳ ಜೊತೆಗೆ ಭಾರತದಲ್ಲಿ ಅಪನಗದೀಕರಣವೂ ಒಂದು ಬಗೆಯ ತಲ್ಲಣವನ್ನು ಸೃಷ್ಟಿಸಿದೆ. ಈ ತಲ್ಲಣಗಳಿಗೆ ಕಾರಣರಾದವರು ಇದನ್ನು ನಾವು ಮೀರುತ್ತೇವೆಂಬ ಭರವಸೆಯಲ್ಲಿ¨ªಾರೆ. ಇದು ನಿಜವೂ ಆಗಬಹುದು. ಎರಡನೇ ಮಹಾಯುದ್ಧದ ನಂತರದ ಅವಧಿಯಲ್ಲಿ ನಡೆದ ಪ್ರಜಾಪ್ರಭುತ್ವಿàಕರಣದಂಥದ್ದೇ ಒಂದು ವಿದ್ಯಮಾನ ಈಗಿನ “ನವರಾಷ್ಟ್ರೀಯತೆ’ಯೂ ಆಗಿರಬಹುದು. ಇದು ಹೀಗೆಯೇ ಎಷ್ಟುಕಾಲ ಮುಂದುವರೆಯಬಹುದು ಎಂಬ ಭರವಸೆಯನ್ನು ಯಾರೂ ಕೊಡಲಾರರು. ಎÇÉಾ ಮಾದರಿಗಳ ಕುರಿತೂ ಜನರಿಗೆ ಒಂದಷ್ಟು ಕಾಲ ಕಳೆದ ನಂತರ ಬೇಜಾರು ಹುಟ್ಟುತ್ತದೆ. ಆಗ ಮತ್ತೂಂದು ಬದಲಾವಣೆ ಸಂಭವಿಸುತ್ತದೆ. ಅದು ಮತ್ತೇನನ್ನೂ ಹುಟ್ಟಿಸಿ ಇನ್ನೇನನ್ನೋ ಬದಲಾಯಿಸಿ ಮತ್ತೇನೋ ಒಂದು ಮಾದರಿಯನ್ನು ನಮ್ಮ ಮುಂದಿಡುತ್ತದೆ.

– ಪರಶುರಾಮ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next