Advertisement

ಎಚ್‌- 4 ವೀಸಾ ರದ್ದು ಖಚಿತ: ಸೋಮವಾರವೇ ಪ್ರಕಟನೆೆ ಹೊರಡಿಸಿದ್ದ ಅಮೆರಿಕ

08:40 AM Jun 16, 2018 | Team Udayavani |

ವಾಷಿಂಗ್ಟನ್‌ : ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಗಾತಿಗಳಿಗೆ ಕೆಲಸ ಮಾಡಲು ಅಗತ್ಯವಿರುವ ಎಚ್‌-4 ವೀಸಾ ರದ್ದು ಮಾಡುವುದನ್ನು ಮತ್ತೂಮ್ಮೆ ಖಚಿತಪಡಿಸಿದೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರಕಾರ. ಎಚ್‌-4 ವೀಸಾ ಹೊಂದಿದವರನ್ನು ಅಮೆರಿಕದಲ್ಲಿ ಉದ್ಯೋಗ ನಿರ್ವಹಿಸುವ ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ ಗೃಹ ಖಾತೆ ಕ್ರಮ ಕೈಗೊಳ್ಳಲಿದೆ. ಸೋಮವಾರ ಈ ಬಗ್ಗೆ  ಪ್ರಕಟಣೆ ಹೊರಡಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ ನಷ್ಟವಾಗಲಿದೆ.

Advertisement

‘ಅಮೆರಿಕದ ವಸ್ತುಗಳನ್ನೇ ಖರೀದಿಸಿ, ಅಮೆರಿಕದವರನ್ನೇ ನೇಮಿಸಿ ಎಂಬ ಅಧ್ಯಕ್ಷ ಟ್ರಂಪ್‌ ಸೂಚನೆ ಪ್ರಕಾರ ಉದ್ಯೋಗ ಆಧಾರಿತ ವೀಸಾಗಳ ಆಮೂಲಾಗ್ರ ಪರಿಶೀಲನೆ ನಡೆಸಲಾಗುತ್ತಿದೆ. ಅದಕ್ಕಾಗಿ ಹಲವು ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ದೇಶದಲ್ಲಿ ಉತ್ತಮ ವೇತನ ಮತ್ತು ಕೆಲಸದ ವಾತಾವರಣವನ್ನು ನಮ್ಮ ಪ್ರಜೆಗಳಿಗೆ ನೀಡುವಂತಾಗಲು ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ’ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ (USCIS)ದ ವಕ್ತಾರ ಮೈಕೆಲ್‌ ಬಾರ್ಸ್‌ ತಿಳಿದ್ದಾರೆ.

ಈ ನಡುವೆ ವೀಸಾ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸರಕಾರದ ಮಟ್ಟದಲ್ಲಿ ಪ್ರಭಾವ ಬೀರುವಂತೆ ಸಂಸತ್‌ ಸದಸ್ಯ ಪೌಲ್‌ ಟೊಂಕೋ ಅವರನ್ನು ಭಾರತೀಯ- ಅಮೆರಿಕನ್‌ ಸಮುದಾಯದ ಹಲವಾರು ಮಂದಿ ಒತ್ತಾಯಿಸಿದ್ದಾರೆ. ಅಮೆರಿಕ ಪೌರತ್ವ ಪಡೆಯುವ ವ್ಯವಸ್ಥೆಯಾಗಿರುವ ‘ಗ್ರೀನ್‌ ಕಾರ್ಡ್‌’ ನೀಡಿಕೆ ತ್ವರಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next