Advertisement
ಸ್ವಾಮಿ ವಿವೇಕಾನಂದರು ಹೇಳಿದ್ದರು, ಶಿಕ್ಷಣದ ಗುರಿ “ಪುರುಷ ಸಿಂಹಗಳ ನಿರ್ಮಾಣ’ ಎಂದು. ಹಾಗಿದ್ದರೆ, ಶಿಕ್ಷಣ ನಮ್ಮಲ್ಲಿ ಶ್ರದ್ಧೆ- ಆತ್ಮವಿಶ್ವಾಸಗಳನ್ನು ಬಲಪಡಿಸ ಬೇಡವೆ? ಶಿಕ್ಷಣ ನಮ್ಮಲ್ಲಿ ಚಾರಿತ್ರ್ಯ ನಿರ್ಮಾಣ ಮಾಡಬೇಡವೆ? ವಿವೇಕಾನಂದರು ಮುಂದುವರಿದು ಹೇಳುತ್ತಾರೆ, “ನಮ್ಮ ಈಗಿನ ಶಿಕ್ಷಣ ನಮಗೆ ದೌರ್ಬಲ್ಯ ಗಳನ್ನು ಮಾತ್ರ ಕಾಣಿಸುತ್ತಿದೆ. ನಮ್ಮ ಈಗಿನ ಶಿಕ್ಷಣ ನಮಗೆ ಸೋಲುವುದನ್ನು ಕಲಿಸುತ್ತದೆ. ನಮ್ಮ ಈಗಿನ ಶಿಕ್ಷಣ ನಮಗೆ ಯಾವುದನ್ನು ಸಾಧ್ಯವಿಲ್ಲ ಎಂಬುದನ್ನು ಕಲಿಸುತ್ತದೆ. ಪರಮ ಶಕ್ತಿಯ ಪ್ರತಿಪಾದಕರಾದ ನಾವು ನಮ್ಮಿಂದ ಸಾಧ್ಯವಿಲ್ಲ ಎನ್ನುವಂಥ ಕಲ್ಪನೆಯಲ್ಲಿ ಮುಳುಗಿದ್ದೇವೆ. ಯಾವಾಗಲೂ ಭಯ ಮತ್ತು ಭ್ರಮೆಯ ನಡುವೆ ಪುಸ್ತಕದ ಪುಟಗಳನ್ನು ತಿರುವಿಹಾಕಲಾಗುತ್ತದೆ. ಅಸಂಖ್ಯ ತಲ್ಲಣಗಳ ನಡುವೆ ಅವರಿವರ ನಿಯಮಗಳು ತಲೆಗೆ ಹೋಗುತ್ತವೆ. ರಾಮಕೃಷ್ಣ , ಬುದ್ಧ , ಭಗತ್ ಸಿಂಗ್ ಆಜಾದ್, ಗಾಂಧೀಜಿ ಇಂಥ ಮಹಾತ್ಮರ ಉಸಿರು ಈ ಗಾಳಿಯಲ್ಲಿ ಇದೆ. ಆದರೆ, ಅದನ್ನು ಗುರುತಿಸಲಾಗುತ್ತಿಲ್ಲ. ನಾವು ನಮ್ಮನ್ನು ಕಂಡುಕೊಳ್ಳುವುದಕ್ಕೆ ಶಿಕ್ಷಣ ಕಾರಣವಾಗಬೇಕು.
ಪ್ರಥಮ ಬಿ. ಎ.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ