Advertisement

ಲಾರಿ ಟೈರ್‌ ಸಿಡಿದು ಸರಣಿ ಅಪಘಾತ: 14 ಮಂದಿ ಸಾವು

03:50 AM Mar 19, 2017 | Team Udayavani |

ಮೊಳಕಾಲ್ಮೂರು (ಚಿತ್ರದುರ್ಗ): ಟೈರ್‌ ಸಿಡಿದು ನಿಯಂತ್ರಣ ತಪ್ಪಿದ ಲಾರಿ ಎರಡು ಆಟೋ ಹಾಗೂ ಟೆಂಪೋ ಟ್ರಾವೆಲರ್‌ಗೆ ಢಿಕ್ಕಿ ಹೊಡೆದು 14 ಮಂದಿ ಮೃತಪಟ್ಟಿದ್ದಾರೆ. ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಸಮೀಪ ರಾಜ್ಯ ಹೆದ್ದಾರಿ 19ರಲ್ಲಿ ಈ ಅಪಘಾತ ಸಂಭವಿಸಿದ್ದು, 20 ಜನ ಗಾಯ ಗೊಂಡಿದ್ದಾರೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್‌ಗೆ ಸೇರಿಸಲಾಗಿದೆ.

Advertisement

ಮೃತಪಟ್ಟವರಲ್ಲಿ 9 ಮಂದಿಯ ಗುರುತು ಮಾತ್ರ ಪತ್ತೆಯಾಗಿದ್ದು, ಇನ್ನುಳಿದ ಐವರ ಗುರುತು ಪತ್ತೆ ಯಾಗಿಲ್ಲ. ನಾಗಸಮುದ್ರದ ಆಟೋ ಚಾಲಕ ಜಿ.ಎಸ್‌. ಬಸವರಾಜ (34), ವಡೇರಹಳ್ಳಿ ಗ್ರಾಮದ ವೈಶಾಲಿ (8), ಅಪ್ಪೇನಹಳ್ಳಿ ಗ್ರಾಮದ ಹನುಮಂತಪ್ಪ (45), ದುರುಗಮ್ಮ (40), ಚಿಂತಾ ಮಣಿ (13), ಹೊನ್ನೂರಪ್ಪ (48), ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ ಗ್ರಾಮದ ಶಿವರಾಜ್‌ (9), ಲಿಂಗಪ್ಪ, ಜಯಮ್ಮ ಮೃತಪಟ್ಟವರು. ಈ ಪೈಕಿ ಲಿಂಗಪ್ಪ ಹಾಗೂ ಜಯಮ್ಮ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ತನ್ನ ಪುತ್ರನೊಂದಿಗೆ ಸ್ವಗ್ರಾಮ ಬೇವಿನ ಹಳ್ಳಿಗೆ ಟೆಂಪೋ ಟ್ರಾವೆಲರ್‌ನಲ್ಲಿ ತೆರಳುತ್ತಿದ್ದರು. ಆದರೆ ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದವರೇ ಮಸಣ ಸೇರು ವಂತಾಗಿದ್ದು ವಿಪರ್ಯಾಸ.

ಅಪಘಾತ ಸಂಭವಿಸಿದ್ದು ಹೇಗೆ?: ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬೆಂಗಳೂರು ಕಡೆ ಹೋಗುತ್ತಿದ್ದ ಲಾರಿಯ ಟೈರ್‌ಗಳು ಸ್ಫೋಟಿಸಿ ಚಾಲಕನ ನಿಯಂ ತ್ರಣ ತಪ್ಪಿ 2 ಆಟೋ ಮತ್ತು ಟೆಂಪೋ ಟ್ರಾವೆಲರ್‌ಗೆ ಢಿಕ್ಕಿ ಹೊಡೆಯಿತು. ಇದರ ಪರಿಣಾಮ 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಳಿದ ಮೂವರು ಬಳ್ಳಾರಿಯ ವಿಮ್ಸ್‌ನಲ್ಲಿ ಕೊನೆಯುಸಿರೆಳೆದರು. ಟೆಂಪೋ ಟ್ರಾವೆಲರ್‌ನಲ್ಲಿದ್ದ ಆದೆಪ್ಪ, ಮಾರೆಮ್ಮ, ರಾಯಪ್ಪ, ನಿಂಗಪ್ಪ, ಗಂಗಮ್ಮ ಸಹಿತ 20 ಮಂದಿ ಗಂಭೀರ
ವಾಗಿ ಗಾಯಗೊಂಡಿದ್ದಾರೆ. ಅವ ರಿಗೆ ರಾಂಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್‌ಗೆ ದಾಖಲಿಸಲಾಗಿದೆ.

ಲಕ್ಷ ರೂ. ಪರಿಹಾರಕ್ಕೆ ಸೂಚನೆ: ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡು ವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾರ್ಯಕ್ರಮ ನಿಮಿತ್ತ ಚಿತ್ತಾಪುರಕ್ಕೆ ಬಂದಿದ್ದ ಸಿಎಂ, ಪತ್ರಕರ್ತರ ಜತೆ ಮಾತನಾಡಿ, ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next