ಸೂರತ್: ರಸ್ತೆಬದಿಯ ಫುಟ್ ಪಾತ್ ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್ ಒಂದು ಹರಿದು ಕನಿಷ್ಠ 13 ಮಂದಿ ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ಗುಜರಾತ್ ರಾಜ್ಯದ ಸೂರತ್ ನಲ್ಲಿ ಕಳೆದ ರಾತ್ರಿ ನಡೆದಿದೆ.
ಮೃತಪಟ್ಟ ಕಾರ್ಮಿಕರೆಲ್ಲಾ ರಾಜಸ್ಥಾನದ ಬನ್ಸ್ವಾರ ಜಿಲ್ಲೆಯವರೆಂದು ತಿಳಿದುಬಂದಿದೆ. ಕೆಲಸ ಅರಸಿಕೊಂಡು ಸೂರತ್ ಕಡೆಗೆ ಬಂದಿದ್ದ ವಲಸೆ ಕಾರ್ಮಿಕರು, ಸೂರತ್‌ನ ಕೊಸಾಂಬಾ ಬಳಿ ತಂಗಿದ್ದರು,
ಕಬ್ಬು ತುಂಬಿದ್ದ ಟ್ರಾಕ್ಟರ್ ಮತ್ತು ಟ್ರಕ್ ನಡುವೆ ಢಿಕ್ಕಿಯಾಗಿ, ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯ ಫುಟ್ ಪಾತ್ ನಲ್ಲಿ ಟ್ರಕ್ ಚಲಿಸಿದೆ. ಫುಟ್ ಪಾತ್ ನಲ್ಲಿ 18 ಮಂದಿ ಕಾರ್ಮಿಕರು ಮಲಗಿದ್ದರು. ಅವರಲ್ಲಿ 13 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಹೆಚ್ಚುತ್ತಿದೆ ಫೈನಲ್ ಡೇ ರೋಚಕತೆ: ಗಿಲ್ ಅರ್ಧಶತಕ, ಯಾರಿಗೆ ಒಲಿಯಲಿದೆ ವಿಜಯಮಾಲೆ
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 13 ಮಂದಿ ಮೃತರ ಗುರುತು ಪತ್ತೆ ಕಾರ್ಯ ಪೂರ್ಣಗೊಂಡ ಬಳಿಕ ಅವರ ಕುಟುಂಬಸ್ಥರಿಗೆ ಶವ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಇದನ್ನೂ ಓದಿ:ಕೋವಿಡ್ ಹಿಮ್ಮೆಟ್ಟಿಸಲು ಮಾರ್ಗದರ್ಶಿ ಸೂತ್ರಗಳ ಪಾಲನೆ ಅಗತ್ಯವಲ್ಲವೇ?