Advertisement

ದೆಹಲಿಯಲ್ಲಿ ಟ್ರಕ್ ಮಾಲಕನಿಗೆ ಬಿತ್ತು ಬರೋಬ್ಬರಿ ಎರಡು ಲಕ್ಷ ರೂಪಾಯಿ ದಂಡ!

10:09 AM Sep 13, 2019 | Team Udayavani |

ನವದೆಹಲಿ: ದೇಶದಲ್ಲಿ ಪರಿಷ್ಕೃತ ಸಂಚಾರಿ ನಿಯಮ ಉಲ್ಲಂಘನೆ ದಂಡ ವ್ಯವಸ್ಥೆ ಜಾರಿಗೆ ಬಂದ ನಂತರ ಇನ್ನೊಂದು ದುಬಾರಿ ದಂಡ ಪ್ರಕರಣ ವರದಿಯಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾಗಿ ಟ್ರಕ್ ಮಾಲಕರೊಬ್ಬರಿಗೆ ದೆಹಲಿ ಪೊಲೀಸರು ಬರೋಬ್ಬರಿ ಎರಡು ಲಕ್ಷದ ಐದುನೂರು ರೂಪಾಯಿಗಳ ದಂಡವನ್ನು ವಿಧಿಸಿದ್ದಾರೆ.

Advertisement

ಈ ದಂಡವನ್ನು ಟ್ರಕ್ ಮಾಲಕ ನ್ಯಾಯಾಲಯದಲ್ಲಿ ಕಟ್ಟಬೇಕಾಗಿದೆ. ಆದರೆ ನ್ಯಾಯಾಲಯದಲ್ಲಿ ದಂಡ ಕಟ್ಟುವ ಸಂದರ್ಭದಲ್ಲಿ ಈ ಟ್ರಕ್ ಮಾಲಕ ಸೂಕ್ತ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದಲ್ಲಿ ಈ ದಂಡ ಮೊತ್ತದಲ್ಲಿ ಸ್ವಲ್ಪ ವಿನಾಯಿತಿ ಸಿಗಬಹುದು ಎಂದು ಹೇಳಲಾಗುತ್ತಿದೆ.

ಭಾರೀ ದಂಡಕ್ಕೆ ಕಾರಣನಾದ ಟ್ರಕ್ ಚಾಲಕನನ್ನು ರಾಮ್ ಕ್ರಿಷನ್ ಎಂದು ಗುರುತಿಸಲಾಗಿದೆ.

ರಾಷ್ಟ್ರ ರಾಜಧಾನಿಯ ರೋಹಿಣಿ ಬಳಿ ಇರುವ ಮುಬಾರಕ ಚೌಕದ ಬಳಿ ದೆಹಲಿ ಸಂಚಾರಿ ಪೊಲೀಸರು ಈ ಟ್ರಕ್ ಅನ್ನು ನಿಲ್ಲಿಸಿ ಚಾಲಕನ ಬಳಿ ಡ್ರೈವಿಂಗ್ ಲೈಸನ್ಸ್ ಮತ್ತು ಟ್ರಕ್ ಗೆ ಸಂಬಂಧಿಸಿದ ಸೂಕ್ತ ದಾಖಲೆಗಳು ಇಲ್ಲದೇ ಇದ್ದ ಕಾರಣಕ್ಕೆ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

ಎರಡು ಲಕ್ಷ ದಂಡ ಹೇಗೆ ಗೊತ್ತಾ?

Advertisement

ಡ್ರೈವಿಂಗ್ ಲೈಸನ್ಸ್ ಇರಿಸಿಕೊಂಡಿರದೇ ಇದ್ದುದಕ್ಕೆ – 5000 ರೂಪಾಯಿಗಳು

ವಾಹನದ ನೋಂದಣಿ ದಾಖಲಾತಿ ಇಲ್ಲದೇ ಇದ್ದುದಕ್ಕೆ – 10,000 ರೂಪಾಯಿಗಳು

ಫಿಟ್ನೆಸ್ ಪ್ರಮಾಣಪತ್ರ ಇಲ್ಲದಿದ್ದುಕ್ಕೆ – 10,000 ರೂಪಾಯಿಗಳು

ಪರವಾನಿಗೆ ಪತ್ರ ಉಲ್ಲಂಘನೆಗೆ – 10,000 ರೂಪಾಯಿಗಳು

ವಿಮೆ ಇಲ್ಲದೇ ಇದ್ದುದಕ್ಕೆ – 4000 ರೂಪಾಯಿಗಳು

ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದನ್ವಯ ಮಾಲಿನ್ಯಕ್ಕಾಗಿ – 10,000 ರೂಪಾಯಿಗಳು

ಟ್ರಕ್ ನಲ್ಲಿ ನಿರ್ಮಾಣ ಸಾಮಾಗ್ರಿಗಳನ್ನು ಮುಚ್ಚದೇ ಇದ್ದುದಕ್ಕೆ – 20,000 ರೂಪಾಯಿಗಳು

ಸೀಟ್ ಬೆಲ್ಟ್ ಧರಿಸದೇ ಇದ್ದುದಕ್ಕೆ – 1000 ರೂಪಾಯಿಗಳು

ಓವರ್ ಲೋಡಿಂಗ್ ಕಾರಣಕ್ಕೆ – 20,000 + 36,000 (ಪ್ರತೀ ಹೆಚ್ಚುವರಿ ಓವರ್ ಲೋಡ್ ಟನ್ ಗೆ 2000 ದಂತೆ) ಈ ಟ್ರಕ್ ನಲ್ಲಿ 18 ಟನ್ ಹೊರೆ ಹೆಚ್ಚುವರಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next