Advertisement

ಟ್ರಾಯ್‌ ಆದೇಶ: ಆತಂಕದಲಿ ಆಪರೇಟರ್‌ಗಳು

02:34 PM Dec 21, 2018 | Team Udayavani |

ಚಿಕ್ಕಬಳ್ಳಾಪುರ: ವಿವಿಧ ವಾಹಿನಿಗಳ ವೀಕ್ಷಣೆ ಜನರ ಆಯ್ಕೆಗೆ ಬಿಟ್ಟಿದ್ದು ಎಂದು ದೇಶದ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ ಸಂಸ್ಥೆ ಇತ್ತೀಚೆಗೆ ನೀಡಿರುವ ಹೊಸ ಆದೇಶ ಇದೀಗ ಕೇಬಲ್‌ ಟೀವಿ ಆಪರೇಟರ್‌ಗಳ ವಲಯದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಬೆನ್ನಲೇ ಜಿಲ್ಲೆಯಲ್ಲಿ ಸಹ ಟ್ರಾಯ್‌ ಹೊಸ ಆದೇಶ ಹೆಚ್ಚು ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದರ ಬಗ್ಗೆ ಬಿರುಸಿನ ಲೆಕ್ಕಾಚಾರ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

Advertisement

ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬಹು ಭಾಷೆಗಳ ಚಾನಲ್‌ಗ‌ಳನ್ನು ವೀಕ್ಷಿಸುವ ಲಕ್ಷಾಂ ತರ ಗ್ರಾಹಕರು ಜಿಲ್ಲೆಯುಲ್ಲಿ ಇದ್ದು, ಟ್ರಾಯ್‌ ಹೊಸ ನೀತಿಯಿಂದ ಮಾಸಿಕ ಕೇಬಲ್‌ ದರ ಹಾಲಿ ಇರುವ ಶುಲ್ಕಕ್ಕಿಂತ ದುಪ್ಪ ಟ್ಟಾಗಲಿದೆ ಯೆಂಬ ಮಾತು ಕೇಳಿ ಬರುತ್ತಿದ್ದು, ಇದ ರಿಂದ ಗ್ರಾಹಕರು ಕೇಬಲ್‌ ಸಹವಾಸವನ್ನು ಕೈಬಿಟ್ಟರೆ ಕೇಬಲ್‌ ಉದ್ಯಮವನ್ನು ನಂಬಿಕೊಂಡಿರುವ ಕೇಬಲ್‌ ಟೀವಿ ಆಪರೇಟರ್‌ ಬದುಕು ಬೀದಿಗೆ ಬರುತ್ತದೆ.

ಆರ್ಥಿಕ ಹೊರೆ: ಟ್ರಾಯ್‌ ರೂಪಿಸಿ ಅನುಷ್ಠಾನ ಗೊಳಿಸುತ್ತಿರುವ ಹೊಸ ನೀತಿಯಿಂದ ಜನರು ತಮಗೆ ಇಷ್ಟವಾದ ಚಾನಲ್‌ಗ‌ಳನ್ನು ವೀಕ್ಷಿಸಲು ಆಯ್ಕೆ ಮಾಡಿ ಕೊಳ್ಳುವ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಅದರ ಪ್ರಕಾರ ಚಾನಲ್‌ಗ‌ಳನ್ನು ನೋಡಬೇಕಾದರೆ ಈಗ ಕಟ್ಟುತ್ತಿರುವ ಮಾಸಿಕ 150 ರೂ. ರಿಂದ 200 ರೂ. ಶುಲ್ಕವನ್ನು ಆಗ 350 ರಿಂದ 400 ರೂ. ವರೆಗೂ ಗ್ರಾಹಕರು ಪಾವತಿಸಬೇಕಾಗುತ್ತದೆ. ಇದರಿಂದ ಗ್ರಾಹಕರ ಮೇಲೆ ಹೆಚ್ಚು ಆರ್ಥಿಕ ಹೊರೆ ಹೆಚ್ಚಾಗುತ್ತದೆಯೆಂದು ಕೇಬಲ್‌ ಟಿವಿ ಆಪರೇಟರ್‌ಗಳು ಹೇಳುತ್ತಿದ್ದಾರೆ.

ಆಪರೇಟರ್‌ಗಳಿಗೆ ಆತಂಕ: ಇದರಿಂದ ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೆಚ್ಚಾದಂತೆ ಗ್ರಾಹಕರು ಕೇಬಲ್‌ ಟಿವಿ ನೋಡುವುದನ್ನು ಬಿಟ್ಟರೆ ದಶಕಗಳಿಂದ ಕೇಬಲ್‌ ಉದ್ಯಮವನ್ನು ನಡೆಸಿಕೊಂಡು ಬರುತ್ತಿರುವರು ಮಾಲೀಕರು, ಕಾರ್ಮಿಕರು ಬೀದಿಗೆ ಬರುವಂತಾಗುತ್ತದೆಯೆಂಬ ಆತಂಕವನ್ನು ಜಿಲ್ಲೆಯ ಕೇಬಲ್‌ ಆಪರೇಟರ್‌ಗಳು ವ್ಯಕ್ತಪಡಿಸುತ್ತಿದ್ದಾರೆ. 

ಗ್ರಾಹಕರಿಗೆ ಪೆಟ್ಟು: ಈಗಾಗಲೇ ನಾವು ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ರೀತಿಯ ಚಾನಲ್‌ಗಳನ್ನು ಕೊಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಕೇವಲ ಮಾಸಿಕ 150 ರೂ. ಶುಲ್ಕ ಮಾತ್ರ ನಾವು ಪಡೆದು 200 ಕ್ಕೂ ಹೆಚ್ಚು ಚಾನಲ್‌ಗ‌ಳನ್ನು ನೀಡುತ್ತಿದ್ದೇವೆ. ನಗರದಲ್ಲಿ 200 ರೂ, ಶುಲ್ಕ ಪಡೆದು 350 ಕ್ಕೂ ಹೆಚ್ಚು ಚಾನಲ್‌ಗ‌ಳನ್ನು ನೀಡುತ್ತಿದ್ದೇವೆ.

Advertisement

ಟ್ರಾಯ್‌ನ ಹೊಸ ನೀತಿ ಪ್ರಕಾರ ಈಗ ಗ್ರಾಹಕರಿಗೆ ನೀಡುತ್ತಿರುವ ಚಾನಲ್‌ಗ‌ಳಿಗೆ ಗ್ರಾಮಾಂತರದಲ್ಲಿ 250ರ ಬದಲಾಗಿ 350 ರೂ. ಶುಲ್ಕ ವಸೂಲಿ ಮಾಡಬೇಕಾಗುತ್ತದೆ. ನಗರ ಪಟ್ಟಣದಲ್ಲಿ 600 ರಿಂದ 800 ರೂ. ಶುಲ್ಕ ವಸೂಲಿ
ಮಾಡಬೇಕಾಗುತ್ತದೆಯೆಂದು ಚಿಕ್ಕಬಳ್ಳಾಪುರದ ಕೇಬಲ್‌ ಟಿವಿ ಆಪರೇಟರ್‌ ಟಿ.ಆನಂದ್‌ ಕುಮಾರ್‌ ಉದಯವಾಣಿಗೆ ತಿಳಿಸಿದರು.

ಆಪರೇಟರ್‌ಗಳಿಗೂ ಹೊಡೆತ: ಶುಲ್ಕದ ಜತೆಗೆ ಪ್ರತ್ಯೇಕವಾಗಿ ಎಫ್ಟಿಎ 130 ರೂ. ಶುಲ್ಕ ವಿಧಿಸುವಂತೆ ಟ್ರಾಯ್‌ ಹೇಳಿದೆ. ಅದರ ಜತೆಗೆ ರಾಜ್ಯದ ತೆರಿಗೆ ಬೇರೆ ಪ್ರತ್ಯೇಕವಾಗಿ ವಸೂಲಿ ಮಾಡಬೇಕು. ಸದ್ಯ ನಾವು 200 ರೂ. ಶುಲ್ಕ ಪಡೆದರೂ ಎಲ್ಲಾ ಭಾಷೆಗಳ ಚಾನಲ್‌ಗ‌ಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ 200 ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಹೊಸ ಆದೇಶ ಜಾರಿಯಾದರೆ ಗ್ರಾಹಕರಿಗೆ ಹೆಚ್ಚು ಆರ್ಥಿಕ ಹೊರೆ ಬೀಳುತ್ತದೆ. ಇದರಿಂದ ಕೇಬಲ್‌ ಟಿವಿ ಆಪರೇಟರ್‌ಗಳಿಗೂ ಹೊಡೆತ ತಪ್ಪಿದ್ದಲ್ಲ ಎಂದರು.

ಇದರ ಬಗ್ಗೆ ನಮಗೇನು ಗೊತ್ತಿಲ್ಲ: ಟ್ರಾಯ್‌ ನೀಡಿರುವ ಆದೇಶ ಗ್ರಾಹಕರಗಿಂತ ಸದ್ಯದ ಮಟ್ಟಿಗೆ ಕೇಬಲ ಟಿವಿ ಆಪರೇಟರ್‌ಗಳಿಗೆ ಸಾಕಷ್ಟು ಬಿಸಿ ಮುಟ್ಟುವಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ಟ್ರಾಯ್‌ ನೀಡಿರುವ ಆದೇಶಕ್ಕೆ ಕೇಬಲರ್‌ ಟಿವಿ ಆಪರೇಟರ್‌ ಗಳಿಂದ ವ್ಯಕ್ತವಾಗುತ್ತಿರುವ ವಿರೋಧ ಗ್ರಾಹಕರಿಂದ ಕಂಡ ಬರುತ್ತಿಲ್ಲ. ಆಗಾಗಿ ಈ ಬಗ್ಗೆ ಗ್ರಾಹಕರದಲ್ಲಿ ಮಾತ್ರ ಗೊಂದಲ ಏರ್ಪಟ್ಟಿದೆ. ಬಹುತೇಕ ಗ್ರಾಹಕರಿಗೆ ಟ್ರಾಯ್‌ ನೀಡಿರುವ ಆದೇಶದ ವಸ್ತುಸ್ಥಿತಿ ಅರಿವು
ಆಗಿಲ್ಲ. ಆದರೆ ಚಾನಲ್‌ ವೀಕ್ಷಣೆ ಜನರ ಆಯ್ಕೆಗೆ ಬಿಟ್ಟಿದ್ದು ಎಂಬುದು ಮಾತ್ರ ಗ್ರಾಹಕರಿಗೆ ಇಷ್ಟವಾಗಿದೆ.

ಆದರೆ ಆದರಿಂದ ಎಷ್ಟು ಹೊರೆ ಆಗುತ್ತದೆ. ಮಾಸಿಕ ಶುಲ್ಕದಲ್ಲಿ ಎಷ್ಟು ಹೆಚ್ಚಾಗುತ್ತದೆ. ಕಡಿಮೆ ಆಗುತ್ತದೆಯೆ ಎಂಬುದರ ಬಗ್ಗೆ ಏನು ಅರಿವು ಇಲ್ಲ. ಈ ಬಗ್ಗೆ ಹಲವರನ್ನು ಪ್ರಶ್ನಿಸಿದರೂ ಇದರ ಬಗ್ಗೆ ನಮಗೇನು ಗೊತ್ತಿಲ್ಲ. ಸದ್ಯ ನಾವು 200 ರಿಂದ 250 ರೂ, ಕೊಟ್ಟು ನಮಗೆ ಬೇಕಾದ ಚಾನಲ್‌ಗ‌ಳನ್ನು ನೋಡುತ್ತಿದ್ದೇವೆ. ಇದೇ ವ್ಯವಸ್ಥೆ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ಹಲವು ಗ್ರಾಹಕರು ವ್ಯಕ್ತಪಡಿಸಿದರು. 

ಟ್ರಾಯ್‌ ನೀಡಿರುವ ಹೊಸ ಆದೇಶದ

ಬಗ್ಗೆ ನಮಗೇನು ಅಷ್ಟೊಂದು ಅರಿವು ಇಲ್ಲ. ಸದ್ಯಕ್ಕೆ ಪ್ರತಿ ತಿಂಗಳು 200 ರೂ, ಕೊಟ್ಟು ಎಲ್ಲಾ ಚಾನಲ್‌ಗ‌ಳನ್ನು ನೋಡುತ್ತಿದ್ದೇವೆ. ಇದೇ ವ್ಯವಸ್ಥೆ ಉತ್ತಮವಾಗಿದೆ. ಸರ್ಕಾರಗಳು ಏನಾ ಆದೇಶ, ನೀತಿ ರೂಪಿಸಿದರೂ ಅದು ಜನ ಸಾಮಾನ್ಯರಿಗೆ ಹೊರೆ ಆಗಬಾರದು. ಟ್ರಾಯ್‌ ನೀಡಿರುವ ಆದೇಶ ಜನ ಸಾಮಾನ್ಯರಿಗೆ ಅನುಕೂಲವಾಗುವುದಾದರೆ ಪರವಾಗಿಲ್ಲ.  ಹೊರೆ ಆದರೆ ತುಂಬ ಕಷ್ಟವಾಗುತ್ತದೆ. ಕೆಲಕೇಬಲ್‌ ಅಪರೇಟರ್‌ಗಳು ಹೇಳುವ ಪ್ರಕಾರ ಹೊಸ ನೀತಿಯಿಂದ ತಿಂಗಳಿಗೆ 800 ರಿಂದ 1000 ರೂ, ಕಟ್ಟಬೇಕೆಂದು ಹೇಳುತ್ತಿದ್ದಾರೆ. ಇದು ನಮಗೆ ಹೊರೆ ಆಗಲಿದೆ.
 ವಿಷ್ಣು, ವಾಪಸಂದ್ರ ನಿವಾಸಿ 

ಟ್ರಾಯ್‌ ನೀಡಿರುವ ಹೊಸ ನೀತಿಯನ್ನು ರದ್ದುಗೊಳಿಸಿ ಯಥಾಸ್ಥಿತಿ ಮುಂದುವರಿಸುವಂತೆ ಆಗ್ರಹಿಸಿ ಶುಕ್ರವಾರ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಕೇಬಲ್‌ ಟೀವಿ ಆಪರೇಟರ್‌ ಅಸೋಸಿಯೇಷನ್‌ ವತಿಯಿಂದ ಬೃಹತ್‌
ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಿಂದಲ್ಲೂ ನೂರಾರು ಕೇಬಲ್‌ ಆಪರೇಟರ್‌ಗಳು ಪ್ರತಿಭಟನೆಯಲ್ಲಿ
ಭಾಗವಹಿಸಲಿದ್ದಾರೆ. ಟ್ರಾಯ್‌ ನೀಡಿರುವ ಹೊಸ ಆದೇಶ ಕೇಬಲ್‌ ಟಿವಿ ಆಪರೇಟರ್‌ ಗಳಿಗೆ ಮಾತ್ರವಲ್ಲದೇ ಗ್ರಾಹಕರ ಮೇಲೆಯು ಹೆಚ್ಚು ಆರ್ಥಿಕ ಹೊರೆ ಬೀಳುತ್ತದೆ.
 ವಾಸುದೇವರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾ ಕೇಬಲ್‌ ವಿತರಕರು.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next