ಮಳೆಗಾಲ ಎದುರುಗೊಳ್ಳುವ ಈ ಕಾಲದಲ್ಲಿ ಪಾಲಿಕೆಯು ಕಸದ ನಿರ್ವಹಣೆಗೆ ವಿಶೇಷ ಆದ್ಯತೆ ನೀಡಬೇಕಾಗಿದ್ದರೂ, ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
Advertisement
ಸೆಂಟ್ರಲ್ ಮಾರುಕಟ್ಟೆ, ಬಿ.ಬಿ. ಅಲಬಿ ರಸ್ತೆ, ಭವಂತಿ ಸ್ಟ್ರೀಟ್ ರಸ್ತೆ, ಮೈದಾನ 3, 4ನೇ ಅಡ್ಡರಸ್ತೆಯ ವ್ಯಾಪ್ತಿಯಲ್ಲಿ ಈ ಸಮಸ್ಯೆ ಇದ್ದು, ಪ್ರತೀ ನಿತ್ಯ ಇಲ್ಲಿಂದ ಕಸ ನಿರ್ವಹಣೆ ಆಗುತ್ತಿಲ್ಲ ಎಂಬ ದೂರು ಬಂದಿದೆ. ಕೆಲವೊಮ್ಮೆ ಎರಡು-ಮೂರು ದಿನಕ್ಕೊಮ್ಮೆ ಇಲ್ಲಿಂದ ಕಸ ವಿಲೇವಾರಿ ಮಾಡುತ್ತಿರುವುದರಿಂದ ತ್ಯಾಜ್ಯದ ರಾಶಿ ಈ ಭಾಗದಲ್ಲಿ ತುಂಬಿಕೊಂಡಿದೆ ಎಂಬುದು ಅವರ ಆರೋಪ.
ಕಸವೆಲ್ಲ ರಸ್ತೆ ಬದಿಯಲ್ಲಿಯೇ ಬಾಕಿ ಉಳಿದ ಕಾರಣದಿಂದ ಮಳೆಗಾಲದಲ್ಲಿ ಇನ್ನೊಂದು ಸಮಸ್ಯೆಗೆ ಆಹ್ವಾನ ಮಾಡಿ ದಂತಾಗಿದೆ. ಕಸದ ಮೇಲೆ ಮಳೆ ನೀರು ಬಿದ್ದು ಅದರಿಂದ ಇನ್ನೊಂದು ಅನಾಹುತವಾಗುವ ಸಾಧ್ಯತೆಯಿದೆ. ಜತೆಗೆ, ಮಳೆ ನೀರಿನಲ್ಲಿ ಕಸವೆಲ್ಲ ತೋಡಿಗೆ ಸೇರುವ ಆತಂಕವೂ ಇದೆ. ಮೊನ್ನೆ ಸುರಿದ ಸಣ್ಣ ಮಳೆಯಲ್ಲಿಯೇ ಕೆಲವು ಭಾಗದ ಕಸ ಗೌರಿಮಠದ ಸಮೀಪದ ತೋಡಿಗೆ ಸೇರಿ, ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಮಸ್ಯೆಯಾಗಿತ್ತು. ಮುಂದೆಯೂ ಕಸದ ಸಮಸ್ಯೆ ಹೀಗೆಯೇ ಉಲ್ಬಣಿಸಿದರೆ ಇನ್ನಷ್ಟು ಸಮಸ್ಯೆ ಆಗುವ ಸಾಧ್ಯತೆಯಿದೆ.
Related Articles
ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ಆ ವ್ಯಾಪ್ತಿಯಲ್ಲಿ ಕೆಲವು ದಿನದ ಹಿಂದೆ ಕಸದ ನಿರ್ವಹಣೆ ಕುರಿತಾದಂತೆ ಸಮಸ್ಯೆಗಳಿತ್ತು. ವಾಹನಗಳ ಕೊರತೆಯಿಂದ ಕಸ ತೆಗೆಯುವ ವೇಳೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಆದರೆ, ಈಗ ಈ ಸಮಸ್ಯೆ ಇತ್ಯರ್ಥವಾಗುತ್ತಿದ್ದು, ಪ್ರತೀ ದಿನ ಕಸ ನಿರ್ವಹಣೆಗೆ ಸೂಚಿಸಲಾಗಿದೆ.
– ಶಬರೀನಾಥ್
ಪರಿಸರ ಎಂಜಿನಿಯರ್, ಮನಪಾ
Advertisement