Advertisement
ಸೊರ್ಕಳ ಪ್ರದೇಶದಲ್ಲಿ ಈ ರಸ್ತೆಯಲ್ಲಿ ಹಾದುಹೋಗುವ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿವೆ. ರಾತ್ರಿ ವೇಳೆ ಕತ್ತಲು ಇರುವುದರಿಂದ ಪಾದಾಚಾರಿಗಳು ನಡೆದುಕೊಂಡು ಹೋಗಲು ಪರದಾಡುತ್ತಿದ್ದು,ಸಂಕಷ್ಟ ಎದುರಿಸುವಂತಾಗಿದೆ.ಶಿರ್ವ-ಬೆಳ್ಮಣ್ ಮುಖ್ಯ ರಸ್ತೆಯಿಂದ ಸುಮಾರು 300 ಮೀ. ದೂರದಲ್ಲಿ ಶಿರ್ವ ಪೊಲೀಸ್ ಠಾಣೆ ಈ ರಸ್ತೆಯ ಬದಿಯಲ್ಲಿದೆ. ಠಾಣೆಯ ಮುಂಭಾಗದಲ್ಲಿ ಠಾಣೆಯಿಂದಲೇ ಒಂದು ಬೀದಿ ದೀಪ ಅಳವಡಿಸಲಾಗಿದೆ.
ಗ್ರಾ.ಪಂ.ನ 14ನೇ ಹಣಕಾಸು ನಿಧಿಯಿಂದ ಅನುದಾನ ಮೀಸಲಿರಿಸಿದ್ದು, ಕೂಡಲೇ ಬೀದಿ ದೀಪ ಅಳವಡಿಸಲು ವ್ಯವಸ್ಥೆ ಕಲ್ಪಿಸಲಾಗುವುದು.
-ಅನಂತಪದ್ಮನಾಭ ನಾಯಕ್,
ಪಂ. ಅಭಿವೃದ್ಧಿ ಅಧಿಕಾರಿ,ಶಿರ್ವ
Related Articles
ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿ ದೀಪದ ಬಗ್ಗೆ ಹಲವಾರು ಲಿಖೀತ ಮನವಿ ಸಲ್ಲಿಸಲಾಗಿದೆ.ಗ್ರಾಮ ಸಭೆಯಲ್ಲೂ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಲಾಗಿದ್ದರೂ ಈವರೆಗೆ ಗ್ರಾ.ಪಂ.ಆಡಳಿತದಿಂದ ಯಾವುದೇ ಸ್ಪಂದನೆ ಇಲ್ಲ.
– ಅಬ್ದುಲ್ ಖಾದರ್,ಶಿರ್ವ ಪೊಲೀಸ್ ಠಾಣಾಧಿಕಾರಿ
Advertisement