ಹೊನ್ನಾವರ: ಜಿಲ್ಲೆಯ ಗಂಭೀರ ಕಾಯಿಲೆಗೊಳಗಾದ ರೋಗಿಗಳಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಒಂದಲ್ಲ ಒಂದು ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆತು ಜೀವ ಉಳಿಯುತ್ತಿತ್ತು. ಆ ಜಿಲ್ಲೆಗಳಲ್ಲಿ ಕೋವಿಡ್ ಕಾರಣದಿಂದಾಗಿ ದೊಡ್ಡ ಆಸ್ಪತ್ರೆಗಳೆಲ್ಲಾ ಕೋವಿಡ್‌ಗೆ ಸಾಕಷ್ಟು ಹಾಸಿಗೆಗಳನ್ನು ಬಿಟ್ಟುಕೊಟ್ಟಿರುವುದರಿಂದ ಐಸಿಯು, ವೆಂಟಿಲೇಟರ್‌ಗಳ ತೀವ್ರ ಕೊರತೆ ಉಂಟಾಗಿ ಉತ್ತರ ಕನ್ನಡದಿಂದ ಹೋಗುವವರಿಗೆ ತುರ್ತು ಚಿಕಿತ್ಸೆ ದೊರೆಯುತ್ತಿಲ್ಲ.
ಕೆಲವು ದೊಡ್ಡ ಆಸ್ಪತ್ರೆಗಳು ನಮ್ಮಲ್ಲಿ ಐಸಿಯು ಮತ್ತು ವೆಂಟಿಲೇಟರ್‌ಗಳ ಕೊರತೆ ಇದೆ, ಉತ್ತರ ಕನ್ನಡದಿಂದ ಜಿಲ್ಲೆಗೆ ಬರುವವರು ಮತ್ತು ಕಳಿಸುವ ವೈದ್ಯರುಗಳು ಮುಂಚಿತವಾಗಿ ತಿಳಿಸಿ, ಹಾಸಿಗೆಗಳ ಲಭ್ಯವಿದ್ದರೆ ಮಾತ್ರ ಬನ್ನಿ ಎಂದು ಸಂದೇಶ ಕಳಿಸಿರುವುದು ಕಳವಳಕಾರಿಯಾಗಿದೆ.
ಈಗ ಜಿಲ್ಲೆಯ ಕೆಲವು ಕೋವಿಡ್ ಸೋಂಕಿತರು ದಕ್ಷಿಣ ಕನ್ನಡದ ಆಸ್ಪತ್ರೆಗಳಲ್ಲಿದ್ದಾರೆ. ಅಪಘಾತ, ಹೃದಯಾಘಾತ, ಹೆರಿಗೆ ಸಮಸ್ಯೆ ಮತ್ತು ಜೀವರಕ್ಷಕ ಚಿಕಿತ್ಸೆ ಅಗತ್ಯವುಳ್ಳಂತಹ ಗಂಭೀರ ಕಾಯಿಲೆಯುಳ್ಳವರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ನಿತ್ಯ ಹಲವರು ದಕ್ಷಿಣ ಕನ್ನಡಕ್ಕೆ ಹೋಗಿ ಅಲ್ಲಿ ಆಸ್ಪತ್ರೆಯನ್ನು ಹುಡುಕಾಡುವ ಪರಿಸ್ಥಿತಿ ಇದೆ. ಅಲ್ಲಿಯ ಆಸ್ಪತ್ರೆಗಳು ಹಾಸಿಗೆ ಖಾಲಿ ಇದ್ದರೆ ಖಂಡಿತ ಕೊಡುತ್ತವೆ. ಸುಳ್ಳು ಹೇಳುವುದಿಲ್ಲ ಎಂಬ ವಿಶ್ವಾಸ ಜನರಿಗಿದೆ.
ಹಲವಾರು ಕಡೆಯಿಂದ ರೋಗಿಗಳನ್ನು ಕರೆದೊಯ್ದವರು ಅಲ್ಲಿ ಹೋದ ಮೇಲೆ ´ಫೋನ್ ಮಾಡಿಸುತ್ತಾರೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ನಿರ್ವಹಿಸಬಹುದಾದ ಕಾಯಿಲೆ ಬಂದವರು ಇಲ್ಲಿ ಚಿಕಿತ್ಸೆ ಪಡೆಯುವುದು ಒಳಿತು ಅಥವಾ ನಾಲ್ಕಾರು ಆಸ್ಪತ್ರೆಗಳಲ್ಲಿ ವಿಚಾರಿಸಿ ಮುಂಗಡ ಹಾಸಿಗೆ ಕಾಯ್ದಿಟ್ಟುಕೊಂಡು ಹೋಗುವುದು ಉತ್ತಮವಾಗಿದೆ.
ಚಿಕಿತ್ಸೆ ಪಡೆಯಲು ಪರದಾಟ : ಜಿಲ್ಲೆಯ ಕೆಲವು ಕೋವಿಡ್ ಸೋಂಕಿತರು ದಕ್ಷಿಣ ಕನ್ನಡದ ಆಸ್ಪತ್ರೆಗಳಲ್ಲಿದ್ದಾರೆ. ಅಪಘಾತ, ಹೃದಯಾಘಾತ, ಹೆರಿಗೆ ಸಮಸ್ಯೆ ಮತ್ತು ಜೀವರಕ್ಷಕ ಚಿಕಿತ್ಸೆ ಅಗತ್ಯವುಳ್ಳಂತಹ ಗಂಭೀರ ಕಾಯಿಲೆಯುಳ್ಳವರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ನಿತ್ಯ ಹಲವರು ದಕ್ಷಿಣ ಕನ್ನಡಕ್ಕೆ ಹೋಗಿ ಅಲ್ಲಿ ಆಸ್ಪತ್ರೆಯನ್ನು ಹುಡುಕಾಡುವ ಪರಿಸ್ಥಿತಿ ಇದೆ.