Advertisement

ಶಿಕ್ಷಕ ಹುದ್ದೆಗಳಿಗೆ ಅರ್ಹತೆ ಪಡೆಯಲು ತಿಣುಕಾಟ

02:39 PM Nov 18, 2019 | Suhan S |

ಗಂಗಾವತಿ: ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಗುಣಾತ್ಮಕ ಶಿಕ್ಷಣದ ಕೊರತೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಅರ್ಥ ಮಾಡಿಕೊಳ್ಳುವ ಮನೋಭಾವ ಕಡಿಮೆಯಾಗಿರುವುದರಿಂದ ನಾಲ್ಕು ವರ್ಷಗಳಿಂದ ಮಾಧ್ಯಮಿಕ ಶಿಕ್ಷಣದ ಸುಮಾರು 10 ಸಾವಿರ ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ಶೇ. 81ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಹೊಸ ನೇಮಕಾತಿ ಅನ್ವಯ ಪದವಿ ಮತ್ತು ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿನ ಶೇ. 50ರಂತೆ ಅರ್ಹತೆ ಪರಿಗಣಿಸಲಾಗುತ್ತಿದ್ದು, ಈ ನಿಯಮದಂತೆ ಅಭ್ಯರ್ಥಿಗಳು ಆಯ್ಕೆಯಾಗುತ್ತಿಲ್ಲ.

Advertisement

ನೇಮಕಾತಿ ಪ್ರಕಾರ ಮುಂಚಿತವಾಗಿ ಸಿಇಟಿ ಪರೀಕ್ಷೆಯ ಪಠ್ಯಕ್ರಮ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನೀಡಿದರೂ ಅಭ್ಯರ್ಥಿಗಳು ಸರಿಯಾಗಿ ಓದದಿರುವುದರಿಂದ ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗುತ್ತಿಲ್ಲ. 6ಮತ್ತು 8ನೇ ತರಗತಿಗೆ ಖಾಲಿ ಇದ್ದ 10,565 ಪದವೀಧರ ಶಿಕ್ಷಕರ ಹುದ್ದೆಗಳಿಗೆ 2016-19ರ ವರೆಗೆ ಅರ್ಜಿ ಆಹ್ವಾನಿಸಲಾಗಿತ್ತು. ನೇಮಕಾತಿ ಪರೀಕ್ಷೆ ಬರೆದ 51,888 ಜನರ ಪೈಕಿ ಶೇ. 19ರಷ್ಟು ಅಭ್ಯರ್ಥಿಗಳು ಅಂದರೆ 3,142 ಜನ ಮಾತ್ರ ಅರ್ಹತೆ ಪಡೆದಿದ್ದು 1:2ರಂತೆ ದಾಖಲಾತಿ ಪರಿಶೀಲನೆ ನಡೆಸಿದರೆ 2500 ಅಭ್ಯರ್ಥಿಗಳು ಶಿಕ್ಷಕರಾಗಿ ನೇಮಕವಾಗಬಹುದು ಉಳಿದ ಹುದ್ದೆಗಳು ಪುನಃ ಖಾಲಿಯಾಗಿವೆ. ಕಲ್ಯಾಣ ಕರ್ನಾಟಕದಲ್ಲಿ ಇಂಗ್ಲಿಷ್‌ ಶಿಕ್ಷಕರು 388, ಸಮಾಜ ಪಾಠಗಳ ಶಿಕ್ಷಕರು 610 ಮತ್ತು ಗಣಿತ ವಿಜ್ಞಾನ 39 ಸೇರಿ ಉಳಿದ ಜಿಲ್ಲೆಗಳಲ್ಲಿ ಇಂಗ್ಲಿಷ್‌ 941, ಸಮಾಜ ಪಾಠಗಳು 852 ಮತ್ತು ಗಣಿತ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ನೇಮಕವಾಗಲು ಅರ್ಹತೆ ಪಡೆದಿದ್ದಾರೆ.

ಗುಣಾತ್ಮಕ ಶಿಕ್ಷಣದ ಕೊರತೆ: ಪಿಯುಸಿ ವರೆಗೂ ಉತ್ತಮ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ವೇಳೆ ಗುಣಾತ್ಮಕ ಶಿಕ್ಷಣದ ಕೊರತೆ ಇದೆ ಎನ್ನಲಾಗುತ್ತಿದೆ. ಪದವಿಯಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮತ್ತು ಆಧುನಿಕ ಶಿಕ್ಷಣ ನೀಡುವುದು ಅವಶ್ಯ. ಕೇಂದ್ರದ ಎನ್‌ಸಿಆರ್‌ಟಿ ಪಠ್ಯ ವಿಷಯ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಮಾಹಿತಿ ನೀಡಬೇಕು. ಇತಿಹಾಸ, ಸಾಹಿತ್ಯ, ಕನ್ನಡ ಮತ್ತು ಇಂಗ್ಲಿಷ್‌ ಭಾಷೆ ಬೋಧನೆ ಮತ್ತು ಆಧುನಿಕ ಶಿಕ್ಷಣ ಪೂರ್ಣ ಮಾಹಿತಿ ಅವಶ್ಯವಾಗಿದೆ. ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಎಆರ್‌-ಟಿಇಟಿ ಪರೀಕ್ಷೆ ಕುರಿತು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರಗಳ ಅವಶ್ಯವಿದೆ.

 

-ಕೆ. ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.

Next