Advertisement

ಮೋದಿ ಸರಕಾರದಿಂದ ಬ್ಯಾಂಕ್‌ಗಳಿಗೆ ಬರೆ

05:25 PM Feb 21, 2021 | Team Udayavani |

ರಾಣಿಬೆನ್ನೂರ: ಕೇಂದ್ರದ ಮೋದಿ ಸರಕಾರ ದಿವಾಳಿಯಾಗುತ್ತಿರುವ ಬ್ಯಾಂಕ್‌ಗಳ ಕೆಲವುಹೆಸರುಗಳನ್ನು ಹೇಳಿ, ಅವುಗಳನ್ನು ತಮಗಿಷ್ಟವಾದಬ್ಯಾಂಕ್‌ಗಳೊಂದಿಗೆ ವಿಲೀನ ಮಾಡಿ, ಕೆಲವೊಂದು ಬ್ಯಾಂಕ್‌ಗಳ ಉಸಿರು ಕಟ್ಟಿಸಿದೆ. ಇದರಿಂದ,ದೇಶದ ಹಣಕಾಸು ಸಂಸ್ಥೆಗಳಿಗೆ ಎಂದೂ ಮಾಸದ ಬರೆ ಎಳೆದಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಆರೋಪಿಸಿದರು.

Advertisement

ನಗರದ ಎಪಿಎಂಸಿ ಸಭಾಂಗಣದಲ್ಲಿ ಬ್ಯಾಂಕ್‌ ವ್ಯವಸ್ಥಾಪಕರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಪ್ರಭುದೇವ ಅವರ ಮುಖಾಂತರ ಆರ್‌ ಬಿಐ ಗೌರ್ನರ್‌ಗೆ ತಕರಾರು ಅರ್ಜಿ ಸಲ್ಲಿಸಿ ಮಾತನಾಡಿದರು.

ಕೆಲವು ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ತೀರ್ಮಾನ ಜನವಿರೋಧಿ  ನೀತಿಯಾಗಿದೆ. 1956ಕ್ಕಿಂತ ಪೂರ್ವದಲ್ಲಿಉಳ್ಳವರು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಬಡವರಿಗೆ, ವ್ಯಾಪಾರಸ್ಥರಿಗೆ, ರೈತರಿಗೆ ಸಾಲ ನೀಡಿಅವರಿಂದ ದುಬಾರಿ ಬಡ್ಡಿ ದರದಲ್ಲಿ ಹಣ ವಸೂಲಿಮಾಡುತ್ತಿದ್ದುದನ್ನು ಮನಗಂಡ ಅಂದಿನ ಕೇಂದ್ರಸರ್ಕಾರ, ಎಲ್ಲಾ ಖಾಸಗಿ ಹಣಕಾಸು ಸಂಸ್ಥೆಗಳನ್ನುಒಂದುಗೂಡಿಸಿ ರಾಷ್ಟ್ರೀಕರಣ ಮಾಡುವ ಮೂಲಕಬಡವರ, ರೈತರ ಹಾಗೂ ಜನಪರವಾಗಿ ಕೆಲಸಮಾಡಿತ್ತು. ಇಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಉಳ್ಳವರ ಪರವಾಗಿ ತಲೆ ಎತ್ತಿ ನಿಂತಿದ್ದಾರೆ ಎಂದು ದೂರಿದರು.

ರೈತರ ಜೀವನಾಡಿಯಾಗಿ 65 ವರ್ಷಗಳಿಂದಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್‌ ಆಫ್‌ಮಹಾರಾಷ್ಟ್ರ, ಬ್ಯಾಂಕ್‌ ಆಫ್‌ ಇಂಡಿಯಾ,ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆಇತರೆ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲುತುದಿಗಾಲ ಮೇಲೆ ನಿಂತಿರುವುದು ದುರಂತ. ಕೂಡಲೇ ಅವರ ನಿರ್ಧಾರ ಬದಲಿಸುವಂತೆ ದೇಶದಲ್ಲಿಯೇ ಮೊದಲು ನಾವು ತಕರಾರುಅರ್ಜಿ ಸಲ್ಲಿಸಿದ್ದೇವೆ ಎಂದರು.

ಸಭೆಯಲ್ಲಿ ರೈತ ಮುಖಂಡರಾದ ಎಸ್‌ .ಡಿ.ಹಿರೇಮಠ, ದಿಳ್ಳೆಪ್ಪ ಸತ್ಯಪ್ಪನವರ, ಸುರೇಶಪ್ಪಗರಡಿಮನಿ, ಈರಣ್ಣ ಹಲಗೇರಿ, ಹರಿಹರಗೌಡಪಾಟೀಲ, ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರು, ರೈತರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next