Advertisement
ಇವು ನಗರದ ವಿವಿಧೆಡೆ ಗುರುವಾರ ಕಂಡುಬಂದ ದೃಶ್ಯಗಳು.. ಸೋಂಕಿತ ವ್ಯಕ್ತಿಯಿಂದ ಪ್ರಾಣಿಗಳಿಗೂ ವೈರಸ್ ತಗಲುವ ಸಾಧ್ಯತೆ ಇದೆ ಎಂಬುದು ಈಗಾಗಲೇ ವಿದೇಶಗಳಲ್ಲಿ ಸಾಬೀತಾಗಿದೆ. ಆ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆ ಪ್ರತ್ಯೇಕ ಸುತ್ತೋಲೆಯನ್ನೂ ಹೊರಡಿಸಿದೆ. ಆದರೂ ಬೀದಿನಾಯಿ, ಬೆಕ್ಕು, ಬಿಡಾಡಿ ದನಗಳು ಆಸ್ಪತ್ರೆ ಆವರಣದಲ್ಲೇ ಓಡಾಡಿಕೊಂಡಿವೆ. ಅವುಗಳ ಮೇಲೆ ನಿಗಾ ಇಡುವ ವ್ಯವಸ್ಥೆಯೂ ಇಲ್ಲ. ಈ ನಿರ್ಲಕ್ಷ್ಯ ಮುಂದುವರಿದರೆ, ಮತ್ತೂಂದು ಸಮಸ್ಯೆಗೆ ಕಾರಣವಾಗುವ ಆತಂಕ ಮೂಡಿದೆ.
Related Articles
Advertisement
ಅನುಷ್ಠಾನವಾಗದ ಮಾರ್ಗಸೂಚಿ: ಬೀದಿನಾಯಿ, ಬಿಡಾಡಿ ದನ, ನಿರ್ಲಕ್ಷಿತ ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರ ಹಾಗೂ ಆರೋಗ್ಯ ಸೇವೆ ನೀಡುವ ಸಿಬ್ಬಂದಿ ಕೋವಿಡ್-19 ಸೋಂಕು ಮುಕ್ತರಾಗಿರಬೇಕು ಎಂದು ಸೂಚನೆ ನೀಡಿದೆ. ಇದು ಸ್ವಯಂಸೇವಕರು, ಸಂಘ-ಸಂಸ್ಥೆಗಳು ಹಾಗೂ ಪ್ರಾಣಿಪ್ರಿಯರಿಗೂ ಅನ್ವಯಿಸಲಿದೆ. ಅಲ್ಲದೆ, ಬೆಳಗ್ಗೆ 6ರಿಂದ 9ಗಂಟೆ ಹಾಗೂ ಸಂಜೆ 7ರಿಂದ 9ಗಂಟೆ ವರೆಗೆ ಆಹಾರ ನೀಡಲು ಅವಕಾಶ ನೀಡಲಾಗಿದೆ. ಪ್ರಾಣಿಗಳಿಗೆ ಆಹಾರ ನೀಡುವ ವೇಳೆ ಮಾಸ್ಕ್, ಕೈಗವಸು ಧರಿಸಿರಬೇಕು. ಸ್ಯಾನಿಟೈಸರ್ ಬಳಸುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಾಣಿ-ಪಕ್ಷಿಗಳ ಮಾರಾಟ ಮಾಡುವವರು ಲಾಕ್ ಡೌನ್ ಹಿನ್ನೆಲೆಯಲ್ಲಿ ಮಳಿಗೆಗಳಲ್ಲಿರುವ ಪ್ರಾಣಿ, ಪಕ್ಷಿಗಳನ್ನು ನಿರ್ಲಕ್ಷಿಸಿದರೆ, ಆಹಾರ ನೀಡದೆ ಹಿಂಸೆ ನೀಡಿದರೆ ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960ರ ಪರಿಚ್ಛೇದ11 (1)ರ ಪ್ರಕಾರ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಹೀಗಾಗಿ, ಮಳಿಗೆಗಳಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ದಿನದಲ್ಲಿ ಎರಡು ಬಾರಿ ನೀರು, ಆಹಾರ ಹಾಗೂ ಔಷಧಿ ನೀಡಬೇಕು. ಅಲ್ಲದೇ, ಇವುಗಳಿಗೆ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಮಾಡಿರಬೇಕು ಎಂದು ಸೂಚಿಸಲಾಗಿದೆ. ಆದರೆ, ಇದರ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ.
ಪ್ರಾಣಿಗಳ ರಕ್ಷಣೆಗೆ ಆದ್ಯತೆ ನೀಡಿ : ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಸಾಕು ಪ್ರಾಣಿಗಳಿಗೆ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಪಶು ಸಂಗೋಪನೆ ಮತ್ತು ಹೈನುಗಾರಿಕೆಗೆ ಹೆಚ್ಚು ಮಹತ್ವ ನೀಡಿದ್ದು, ಸಾಕು ಪ್ರಾಣಿಗಳು ಮತ್ತು ಪಶುಗಳಿಗೂ ಮುಂಜಾಗ್ರತೆ ವಹಿಸಲು ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಾಣಿ ಕಲ್ಯಾಣ ಮಂಡಳಿಯನ್ನು ನಿಯಮಾನುಸಾರ ನೋಂದಣಿ ಮಾಡಲಾಗಿದೆ. ಸರ್ಕಾರಿ ಹಾಗೂ ಸರ್ಕಾರೇತರ ತಜ್ಞರು ಇದರಲ್ಲಿ ಇರಲಿದ್ದಾರೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ನಿರ್ದೇಶಕರು ಇದರ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಅಲ್ಲದೇ, ಎಲ್ಲ ಪ್ರಾಣಿ- ಪಕ್ಷಿಗಳ ಆರೋಗ್ಯ ರಕ್ಷಣೆಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ. –ಪ್ರಭು ಚೌಹ್ವಾಣ್, ಪಶುಸಂಗೋಪನಾ ಸಚಿವ
– ಹಿತೇಶ್ ವೈ