Advertisement

ಲಢಾಕ್ ನ ಅತಿಕ್ರಮಿತ ಪ್ರದೇಶಗಳಿಂದ ಕಾಲ್ಕಿತ್ತ ಚೀನಾ ; ಫಲಕೊಟ್ಟ ದ್ವಿಪಕ್ಷೀಯ ಮಾತುಕತೆ

10:20 PM Jun 08, 2020 | Hari Prasad |

ನವದೆಹಲಿ: ಕೋವಿಡ್ ಕಳವಳದ ನಡುವೆಯೇ ಕಾಲ್ಕೆರೆದು ಭಾರತದೊಂದಿಗೆ ಗಡಿ ತಂಟೆಗೆ ಬಂದಿದ್ದ ಕೆಂಪು ರಾಷ್ಟ್ರ ಚೀನಾ ಇದೀಗ ಲಢಾಕ್ ಭಾಗದ ನೈಜ ನಿಯಂತ್ರಣ ರೇಖೆಯ ನಾಲ್ಕು ಪ್ರದೇಶಗಳಿಂದ ಸೈಲೆಂಟಾಗಿ ಕಾಲ್ಕಿತ್ತಿದೆ.

Advertisement

ಈ ಮೂಲಕ ಭಾರತ ಹಾಗೂ ಚೀನಾ ದೇಶಗಳ ಮಿಲಿಟರಿ ಕಮಾಂಡರ್ ಮಟ್ಟದಲ್ಲಿ ನಡೆದ ಸುಮಾರು 7 ಗಂಟೆಗಳ ಉನ್ನತ ಮಟ್ಟದ ಸಭೆ ಫಲಕಾರಿಯಾದಂತಾಗಿದೆ ಎಂದು ಉನ್ನತ ಮೂಲಗಳನ್ನು ಉದ್ದೇಶಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಮುದ್ರ ಮಟ್ಟದಿಂದ ಸುಮಾರು 14 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಮೋಲ್ಡೋ-ಚುಸ್ ಹುಲ್ ಗಡಿ ಭಾಗದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಎರಡೂ ದೇಶಗಳ ಸೇನಾ ಮುಖ್ಯಸ್ಥರು ಲಢಾಕ್ ವಿಚಾರವನ್ನು ಶಾಂತಿಯುತವಾಗಿ ಮುಗಿಸುವ ನಿರ್ಧಾರಕ್ಕೆ ಬಂದಿದ್ದರು.

ಸೋಮವಾರದಂದು ಚೀನಾದ ವಿದೇಶಾಂಗ ಸಚಿವಾಲಯವೂ ಸಹ ಇದೇ ನಿರ್ಧಾರಕ್ಕೆ ಸಹಮತವನ್ನು ವ್ಯಕ್ತಪಡಿಸಿ ಹೇಳಿಕೆಯೊಂದನ್ನು ನೀಡಿತ್ತು.

ಈ ಮಾತುಕತೆಯ ಬಳಿಕ ನೈಜ ನಿಯಂತ್ರಣ ರೇಖೆ ಭಾಗದಲ್ಲಿ ಲಢಾಕ್ ನ ನಾಲ್ಕು ಪ್ರದೇಶಗಳಲ್ಲಿ ಚೀನಾ ಸೈನಿಕರ ಗಸ್ತು ನಿಂತಿದೆ.

Advertisement

ಲಡಾಕ್ ಭಾಗದಲ್ಲಿನ ಪಾಂಗೊಂಗ್ ಸರೋವರ ಸೇರಿದಂತೆ ನೈಜ ನಿಯಂತ್ರಣ ರೇಖೆಯ ಒಟ್ಟು ನಾಲ್ಕು ಭಾಗಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿಯಾಗಿದ್ದರು ಮತ್ತು ಚೀನಾ ಸೈನಿಕರ ಯುದ್ಧೋನ್ಮಾದ ಸ್ಥಿತಿ ಭಾರತದ ಚಿಂತೆಗೆ ಕಾರಣವಾಗಿತ್ತು.

ಆದರೆ ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಧಾನಿಯವರ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಈ ವಿಚಾರವವನ್ನು ಗಂಭೀರವಾಗಿ ಪರಗಣಿಸುತ್ತಿದ್ದಂತೆಯೇ ಚೀನಾದ ವರಸೆ ಮೆತ್ತಗಾಗುತ್ತಾ ಬಂತು.

ಬಳಿಕ ಕಳೆದ ಶನಿವಾರದಂದು ಲೇಹ್ ಬಾಗದ 14 ಕಾರ್ಪ್ಸ್ ನ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಹಾಗೂ ದಕ್ಷಿಣ ಕ್ಸಿಝಿಯಾಂಗ್ ಪ್ರದೇಶದ ಕಮಾಂಡರ್ ಆಗಿರುವ ಮೇಜರ್ ಜನರಲ್ ಲಿಯು ಚಿನ್ ನಡುವೆ ಉನ್ನತ ಮಟ್ಟದ ಮಾತುಕತೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next