Advertisement

ಖಾದಿ ಮಂಡಳಿ ಎಕ್ಸ್‌ಪೋದಲ್ಲಿ ಕೇರಳದ ಹನನ್‌

06:00 AM Aug 03, 2018 | |

ತಿರುವನಂತಪುರ: ಕಾಲೇಜು ಅವಧಿ ಮುಗಿದ ನಂತರ ಮೀನು ಮಾರಿ, ಹಣ ಸಂಪಾದಿಸಿ ಶಿಕ್ಷಣದ ವೆಚ್ಚ, ತಾಯಿಯ ಅನಾರೋಗ್ಯದ ಖರ್ಚು ಭರಿಸುತ್ತಿದ್ದ ಕೇರಳದ ಹನನ್‌ ಹಮೀದ್‌ ಎಂಬ ವಿದ್ಯಾರ್ಥಿನಿ ಕಳೆದ ವಾರವಷ್ಟೇ ಟ್ರೋಲ್‌ಗೆ ಗುರಿಯಾಗಿದ್ದರು. ಟ್ರೋಲ್‌ಗ‌ಳಿಗೆ ತನ್ನ ಸಾಧನೆಗಳಿಂದ ಉತ್ತರ ನೀಡುತ್ತಿರುವ ಹನನ್‌ ಬುಧವಾರ ರ್‍ಯಾಂಪ್‌ ವಾಕ್‌ ಮಾಡಿ ಮತ್ತಷ್ಟು ಜನರನ್ನು ನಿಬ್ಬೆರಗು ಮಾಡಿದ್ದಾರೆ.

Advertisement

ರಾಜ್ಯ ಸರಕಾರ ಮಾಲಕತ್ವದ ಕೇರಳ ಖಾದಿ ಮಂಡಳಿ ಆಯೋಜಿಸಿದ್ದ ಓಣಂ -ಬಕ್ರೀದ್‌ ಎಕ್ಸ್‌ಪೋ ಕಾರ್ಯಕ್ರಮದಲ್ಲಿ, ಅವರು ಖಾದಿಯ ಲಂಗ ದಾವಣಿ ಧರಿಸಿ, ಆತ್ಮವಿಶ್ವಾಸದಿಂದ ರ್‍ಯಾಂಪ್‌ ವಾಕ್‌ ಮಾಡಿ, ನೆರೆದಿದ್ದ ವೀಕ್ಷಕರನ್ನು ಬೆರಗುಗೊಳಿಸಿದ್ದಾರೆ. ಹನನ್‌ಗೆ ವೇದಿಕೆ ಏರಿ ಪ್ರದರ್ಶನ ನೀಡುವುದು ಹೊಸತಲ್ಲ. ಈ ಹಿಂದೆ ಸಾಕಷ್ಟು ಬಾರಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ಸ್ವಾಗತಕಾರಿಣಿಯಾಗಿ ಕೆಲಸ ಮಾಡಿದ್ದಾರೆ.

ಹನನ್‌ರನ್ನು ಸರ್ಕಾರಿ ಪ್ರಾಯೋಜಕತ್ವದ ಕಾರ್ಯಕ್ರಮದಲ್ಲಿ ಅವಕಾಶ ನೀಡಿದ್ದ ಕುರಿತು ಮಾತನಾಡಿದ ಖಾದಿ ಮಂಡಳಿ ಉಪಾಧ್ಯಕ್ಷೆ ಶೋಭನಾ ಜಾರ್ಜ್‌, ಹನನ್‌ ತನ್ನ ಕಾಲ ಮೇಲೆ ನಿಲ್ಲಲು ಹಾಕುತ್ತಿರುವ ಶ್ರಮವನ್ನು ನಾವು ಈ ರೀತಿ ಗೌರವಿಸಿದ್ದೇವೆ ಎಂದರು. ಹನನ್‌ ಕಾಲೇಜು ಮುಗಿಸಿ ಬಂದು ಹಣ ಸಂಪಾದನೆಗೆ ಮೀನು ಮಾರುವ ವಿಡಿಯೋ ಜಾಣತಾಣದಲ್ಲಿ ಪೋಸ್ಟ್‌ ಆಗಿತ್ತು. ಇದು ಆಕೆ ಪ್ರಸಿದ್ಧಿಗಾಗಿ ಮಾಡುತ್ತಿರುವ ನಾಟಕ ಎಂದು ಜಾಲತಾಣಿಗರು ಆಕೆಯನ್ನು ಗೇಲಿ ಮಾಡಿ ಟ್ರೋಲ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next