Advertisement

ಗಂಗಾ ಸ್ನಾನಕ್ಕಿಂತಲೂ ತ್ರಿವೇಣಿ ಸಂಗಮ ಸ್ನಾನ ಪವಿತ್ರ

07:40 AM Feb 19, 2019 | |

ಮೈಸೂರು: ಉತ್ತರದಲ್ಲಿ ಗಂಗಾಸ್ನಾನ ಎಷ್ಟು ಪವಿತ್ರವೋ, ದಕ್ಷಿಣದ ಈ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಅದಕ್ಕಿಂತಲೂ ಪವಿತ್ರವಾದುದು ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. ತಿರುಮಕೂಡಲು ನರಸೀಪುರದಲ್ಲಿ ನಡೆಯುತ್ತಿರುವ 11ನೇ ಮಹಾ ಕುಂಭಮೇಳದ ಎರಡನೇ ದಿನವಾದ ಸೋಮವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಶೈವ-ವೈಷ್ಣವ ಎರಡೂ ಪರಂಪರೆಯ ಸಂಗಮವನ್ನು ಕಾಣಬಹುದು. ಶೈವ ಪರಂಪರೆಯ ಶ್ರೀ ಅಗಸೆöàಶ್ವರ ಸ್ವಾಮಿ ದೇವಸ್ಥಾನ ಮತ್ತು ರುದ್ರಪಾದ, ವೈಷ್ಣವ ಪರಂಪರೆಯ ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನಗಳು ಈ ಕ್ಷೇತ್ರದಲ್ಲಿ ದೂರದೂರದಲ್ಲಿದ್ದರೂ ಭಕ್ತರು ಎರಡೂ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಈ ಕ್ಷೇತ್ರ ದ್ವೆ„ತ ಎಂದು ಕಾಣಿಸಿದರು. ಇದು ಅದ್ವೆ„ತ ಅಂತಾ ಕಾಣಿಸುತ್ತೆ. ಅದ್ವೆ„ತವೇ ಅಂತಿಮ ಎಂದರು.

ಆತ್ಮ-ಪರಮಾತ್ಮ ಶ್ರೇಷ್ಠ ಎಂಬುದು ಸೀಮಿತ ಗ್ರಹಿಕೆ. ಬ್ರಹ್ಮಾಂಡವೇ ಸರ್ವ ಶ್ರೇಷ್ಠ. ಭರತ ಭೂಮಿ ಪುಣ್ಯ ಭೂಮಿ, ಆಧ್ಯಾತ್ಮದ ಭೂಮಿ. ಭಾರತೀಯ ಪರಂಪರೆಯ ಎಲ್ಲ ಆಧ್ಯಾತ್ಮಿಕ ಸಂತರು, ಆತ್ಮ-ಪರಮಾತ್ಮ ಬೇರೆಯಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ. ನಾವು ಮಾತನಾಡುವ ಮತ್ತು ಕೇಳಿಸಿಕೊಳ್ಳುವ ಚೈತನ್ಯ ಒಂದೇ.

ಇಲ್ಲವಾದರೆ, ಮಾತಿಗೂ ಕೇಳಿಸಿಕೊಳ್ಳುವುದಕ್ಕೂ ಸಾಧ್ಯವಾಗದೆ, ಜನರ ನಡುವೆ ಸಂಪರ್ಕವೇ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಇಂದಿನ ಯುವ ಜನಾಂಗ ವ್ಯಾಟ್ಸ್‌ ಆ್ಯಪ್‌, ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಮುಳುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸಮಾಜಕ್ಕೆ ಗುರುಗಳ ಮಾರ್ಗದರ್ಶನದ ಅಗತ್ಯತೆ ಇದೆ. ಧಾರ್ಮಿಕ ಕಾರ್ಯಗಳ ಮೂಲಕ ಸಮಾಜವನ್ನು ಭಕ್ತಿಯತ್ತ ಕರೆದೊಯ್ಯಬೇಕಿದೆ ಎಂದು ಹೇಳಿದರು.

ನಿರೀಕ್ಷೆಗೆ ಮೀರಿದ ಜನ: ಧಾರ್ಮಿಕ ಸಭೆಯ ಅಧ್ಯಕ್ಷತೆವಹಿಸಿದ್ದ  ಶಾಸಕ ಎಂ.ಅಶ್ವಿ‌ನ್‌ಕುಮಾರ್‌ ಮಾತನಾಡಿ, ಕುಂಭಮೇಳಕ್ಕೆ ಜನ ಹರಿದು ಬರುತ್ತಿರುವುದನ್ನು ನೋಡಿದರೆ, ಕಾವೇರಿ-ಕಪಿಲ ಹಾಗೂ ಸ್ಫಟಿಕ ಸರೋವರವೇ ಹರಿದು ಬರುತ್ತಿರುವಂತೆ ಭಾಸವಾಗುತ್ತಿದೆ. ಕಳೆದ ಕುಂಭಮೇಳಕ್ಕೆ ಜನ ಬರುತ್ತಾರೋ ಇಲ್ಲವೋ ಎಂಬ ಭಾವನೆ ಇತ್ತು. ಈ ಬಾರಿ ನಮ್ಮ ನಿರೀಕ್ಷೆಗೂ ಮೀರಿ ಜನರು ಹರಿದುಬರುತ್ತಿರುವುದು ನಿಜಕ್ಕೂ ವಿಸ್ಮಯವೇ ಸರಿ ಎಂದರು.

Advertisement

ತೇಲುವ ಸೇತುವ ಆಕರ್ಷಣೆ:ಕುಂಭಮೇಳ ಯಶಸ್ಸಿಗೆ ಎಲ್ಲ ರೀತಿಯ ಸಹಕಾರವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನೀಡಿದ್ದರಿಂದ ತ್ವರಿತಗತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಧ್ಯವಾಯಿತು ಎಂದರು.

ಈ ಬಾರಿ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ನಡುಗಡ್ಡೆಗೆ ಬರಲು ಸೇನೆಯ ಯೋಧರು ನಿರ್ಮಿಸಿರುವ ತೇಲುವ ಸೇತುವೆ ಜನರ ಆಕರ್ಷಣೆಯ ಕೇಂದ್ರವಾಗಿದೆ. ಆ ಸೇತುವೆ ಮೇಲೆ ಓಡಾಡುವುದು ಹೊಸ ಅನುಭವವನ್ನು ಕೊಡುತ್ತಿದೆ. ಹಾಗಾಗಿ ಹೆಚ್ಚು ಜನರು ಆ ಸೇತುವೆ ಮೇಲೆ ಓಡಾಡುತ್ತಿದ್ದಾರೆ ಎಂದು ಹೇಳಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನಿಲೆ ಕನಕಗುರುಪೀಠ ಮೈಸೂರು ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ತಿ.ನರಸೀಪುರ ಶಾಖಾ ಮಠದ ದೊರೆಸ್ವಾಮಿ,ಓಂಕಾರ ಆಶ್ರಮದ ಮಧುಸೂದನಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶಾಂತಾನಂದ ಸ್ವಾಮೀಜಿ, ಸಿದ್ಧಾರೂಢ ಮಠ ತಿ.ನರಸೀಪುರ ಶಾಖೆಯ ಮಾತೆ ವೇದಾವತಿ, ವೆಂಕಟಸ್ವಾಮೀಜಿ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next