Advertisement

ತ್ರಿಶಾ ಜೊತೆ ರೇಪ್‌ ಸೀನ್‌ ಮಾಡುವ ಬಯಕೆ: ಮನ್ಸೂರ್‌ ವಿರುದ್ಧ ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

03:29 PM Nov 20, 2023 | Team Udayavani |

ಚೆನ್ನೈ: ನಟಿ ತ್ರಿಶಾ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಒಳಗಾಗಿದ್ದ ನಟ ಮನ್ಸೂರ್‌ ಅಲಿಖಾನ್‌ ಅವರ ಮೇಲೆ ಕ್ರಮಕೈಗೊಳ್ಳಲು ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದೆ.

Advertisement

ದಳಪತಿ ವಿಜಯ್‌ ಹಾಗೂ ತ್ರಿಶಾ ಪ್ರಧಾನ ಪಾತ್ರದ ʼಲಿಯೋʼ ಸಿನಿಮಾದಲ್ಲಿ ಹಿರಿಯ ನಟ ಮನ್ಸೂರ್ ಅಲಿ ಖಾನ್ ಕೂಡ ನಟಿಸಿದ್ದಾರೆ. ಆದರೆ ಅವರ ಪಾತ್ರ ಸಿನಿಮಾದ ನಾಯಕಿ ತ್ರಿಶಾ ಅವರೊಂದಿಗೆ ಇಲ್ಲ. ಈ ಬಗ್ಗೆ ಇತ್ತೀಚೆಗೆ ನಟ ಮನ್ಸೂರ್‌ ಅಲಿ ಖಾನ್ ಮಾತನಾಡಿರುವ ವೇಳೆ ವಿವಾದಾತ್ಮಕ ಹೇಳಿಕೆಯೊಂದು ನೀಡಿ ಟೀಕೆಗೆ ಒಳಗಾಗಿದ್ದಾರೆ.

ಮನ್ಸೂರ್‌ ಹೇಳಿದ್ದೇನು?:

“ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಸಿನಿಮಾದಲ್ಲಿ ಅವರೊಂದಿಗೆ ಬೆಡ್‌ ರೂಮ್‌ ಸೀನ್ ಇರುತ್ತದೆ ಅನ್ಕೊಂಡಿದ್ದೆ. ಅವಳನ್ನು ಎತ್ತಿಕೊಂಡು ಬೆಡ್‌ ರೂಮ್‌ ಗೆ ಹೋಗುವ ದೃಶ್ಯವಿದೆ ಅಂದುಕೊಂಡಿದ್ದೆ. ಈ ರೀತಿ ನಾನು ಈ ಹಿಂದಿನ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ಮಾಡಿದ್ದೇನೆ. ನಾನು ತುಂಬಾ ರೇಪ್‌ ಸೀನ್‌ ಗಳನ್ನು ಮಾಡಿದ್ದೇನೆ. ಇದೇನು ನನಗೆ ಹೊಸತಲ್ಲ. ಆದರೆ ಇವರು(ಚಿತ್ರತಂಡ) ನನಗೆ ಕಾಶ್ಮೀರದಲ್ಲಿ ಚಿತ್ರೀಕರಣವಾಗುವ ವೇಳೆ ಸೆಟ್‌ ನಲ್ಲಿ ತ್ರಿಶಾಳನ್ನು ತೋರಿಸಲೇ ಇಲ್ಲ” ಎಂದಿದ್ದಾರೆ.

ಇವರ ಹೇಳಿಕೆಯನ್ನು ಸ್ವತಃ ತ್ರಿಶಾ, ಲೋಕೇಶ್‌ ಕನಕರಾಜ್‌, ಖುಷ್ಬೂ ಸುಂದರ್‌ ಸೇರಿದಂತೆ ಹಲವರು ಖಂಡಿಸಿದ್ದರು.

Advertisement

“ಮನ್ಸೂರ್ ಅಲಿ ಖಾನ್ ಅವರು ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಈ ರೀತಿ ಲೈಂಗಿಕತೆ ಹಾಗೂ ಅಗೌರವದ ದೃಷ್ಟಿಕೋನದಲ್ಲಿ ಅವರು ಮಾತನಾಡಿದ್ದಾರೆ. ಅವರು ಮನಸ್ಸಿನಲ್ಲಿ ಯೋಚನೆ ಮಾಡುತ್ತಲೇ ಇರಲಿ. ಇಂಥ ವ್ಯಕ್ತಿಯೊಂದಿಗೆ ನಾನು ಜೀವನಮಾನವಿಡೀ ತೆರೆ ಹಂಚಿಕೊಳ್ಳುವುದಿಲ್ಲ.ಇಂತಹ ಜನರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ” ಎಂದು ನಟಿ ತ್ರಿಶಾ ಹೇಳಿದ್ದಾರೆ.

ಇದರ ಬೆನ್ನಲ್ಲೇ ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಮನ್ಸೂರ್‌ ಅಲಿಖಾನ್‌ ಅವರ ಹೇಳಿಕೆಯನ್ನು ಖಂಡಿಸಿದ್ದು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಮುಂದಾಗಿದೆ.

“ನಟ ಮನ್ಸೂರ್ ಅಲಿ ಖಾನ್ ಅವರು ನಟಿ ತ್ರಿಷಾ ಕೃಷ್ಣ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸುತ್ತದೆ. ಈ ವಿಷಯದಲ್ಲಿ ನಾವು ಸ್ವಯಂ ಪ್ರೇರಿತರಾಗಿ IPC ಸೆಕ್ಷನ್ 509 B ಮತ್ತು ಇತರ ಸಂಬಂಧಿತ ಕಾನೂನುಗಳನ್ನು ಜಾರಿಗೊಳಿಸಲು ಡಿಜಿಪಿ ಗೆ ನಿರ್ದೇಶಿಸುತ್ತೇವೆ. ಇಂತಹ ಹೇಳಿಕೆಗಳು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಾಮಾನ್ಯಗೊಳಿಸುತ್ತವೆ ಮತ್ತು ಅದನ್ನು ಖಂಡಿಸಬೇಕು” ಎಂದು ಟ್ವೀಟ್ ಮಾಡಿದೆ.

ವಿವಾದ ಭುಗಿಲೆದ್ದ ಬಳಿಕ ಮನ್ಸೂರ್‌ ಅಲಿ ಅವರು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಹೇಳಿಕೆಯನ್ನು ಹಗುರವಾದ ಧಾಟಿಯಲ್ಲಿ(ತಮಾಷೆಯ ರೀತಿಯಲ್ಲಿ) ಹೇಳಿದ್ದೇನೆ ಎಂದು ಹೇಳಿದ್ದಾರೆ.

ಮನ್ಸೂರ್ ಈ ರೀತಿಯ ಹೇಳಿಕೆಗಳನ್ನು ನೀಡಿರುವುದು‌ ಇದೇ ಮೊದಲಲ್ಲ.

Advertisement

Udayavani is now on Telegram. Click here to join our channel and stay updated with the latest news.

Next