ಹೈದರಾಬಾದ್: ಟಾಲಿವುಡ್ ಸ್ಟಾರ್ ಪ್ರಭಾಸ್(Prabhas) ʼಸಲಾರ್ʼ(Salaar: Part 1 – Ceasefire) ಹಾಗೂ ʼಕಲ್ಕಿʼ(Kalki 2898 AD) ಸಿನಿಮಾದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ.
ಎರಡು ಬ್ಯಾಕ್ ಟು ಬ್ಯಾಕ್ ಹಿಟ್ ಬಳಿಕ ಪ್ರಭಾಸ್ ತನ್ನ ಮುಂದಿನ ಪ್ರಾಜೆಕ್ಟ್ ನತ್ತ ಗಮನ ಹರಿಸಿದ್ದಾರೆ. ಇತ್ತೀಚೆಗೆ ಹನು ರಾಘವಪುಡಿ (Hanu Raghavapudi) ನಿರ್ದೇಶನದ ʼಫೌಜಿʼ(Fauji) ಸಿನಿಮಾದ ಮುಹೂರ್ತದಲ್ಲಿ ಪ್ರಭಾಸ್ ಭಾಗಿಯಾಗಿದ್ದರು.
ಮುಂದೆ ಅವರು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ʼರಾಜಾಸಾಬ್ʼ (Rajasaab) ಚಿತ್ರದ ತಯಾರಿ ವೇಗವಾಗಿ ನಡೆಯುತ್ತಿದೆ. ಇದಾದ ಬಳಿಕ ಅವರು ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ʼಸ್ಪಿರಿಟ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Viral Video: ಆಟವಾಡುವ ವಸ್ತುವೆಂದು ತಿಳಿದು ಹಾವನ್ನೇ ಕಚ್ಚಿಕೊಂದ ಒಂದು ವರ್ಷದ ಮಗು.!
ಸಂದೀಪ್ ವಂಗಾ ಅವರ ʼಸ್ಪಿರಿಟ್ʼ ಬಗ್ಗೆ ದಿನಕಳೆದಂತೆ ಹೈಪ್ ಹೆಚ್ಚಾಗುತ್ತಿದೆ. ಅನೌನ್ಸ್ ಆದ ದಿನದಿಂದ ಒಂದಲ್ಲ ಒಂದು ಕಾರಣಕ್ಕೆ ಸಿನಿಮಾ ಸದ್ದು ಮಾಡುತ್ತಿದೆ.
ʼಸ್ಪಿರಿಟ್ʼ ನಲ್ಲಿ ಪ್ರಭಾಸ್ ಡಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕ ಹಾಗೂ ವಿಲನ್ ಆಗಿ ಪ್ರಭಾಸ್ ಅವರೇ ಬಣ್ಣ ಹಚ್ಚಲಿದ್ದಾರೆ. ಪೊಲೀಸ್ ಆಗಿ ನಾಯಕನ ಪಾತ್ರವನ್ನು ಮಾಡಲಿದ್ದು, ನೆಗೆಟಿವ್ ಪಾತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ ಎಂದು ವರದಿಯಾಗಿದೆ.
ಇದೀಗ ಸಿನಿಮಾದ ನಾಯಕಿ ಬಗ್ಗೆ ಗಾಸಿಪ್ ವೊಂದು ಹರಿದಾಡಿದೆ. ಬಹುಭಾಷಾ ನಟಿ ತ್ರಿಷಾ ಕೃಷ್ಣನ್ (Trisha Krishnan) ಸಿನಿಮಾದಲ್ಲಿ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. ತ್ರಿಷಾ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ಪ್ರಭಾಸ್ ಅವರ ಮತ್ತೊಂದು ಪಾತ್ರಕ್ಕೆ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ತ್ರಿಷಾ ಕೂಡ ನೆಗೆಟಿವ್ ಶೇಡ್ನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಆದರೆ ಇದು ಆರಂಭಿಕ ಹಂತದ ಮಾಹಿತಿ ಆಗಿದ್ದು, ಈ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಭಾರತ ಸೇರಿದಂತೆ ಪ್ಯಾನ್ ಏಷ್ಯಾದಲ್ಲಿ ರಿಲೀಸ್ ಆಗಲಿರುವ ʼಸ್ಪಿರಿಟ್ʼ ನಲ್ಲಿ ಖ್ಯಾತ ಕೊರಿಯನ್ ನಟ ಮಾ ಡಾಂಗ್ ಸಿಯೋಕ್ (Korean actor Ma Dong- Seok) ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.