Advertisement

ತ್ರಿಶಾ ಕಾಲೇಜು:ಸಿಎ,ಸಿಎಸ್‌ ಆಕಾಂಕ್ಷಿಗಳ ನೆಚ್ಚಿನ ಆಯ್ಕೆ

09:51 PM Apr 24, 2019 | Sriram |

ಮಹಾನಗರ: ನಗರದ ಅಳಕೆ ಬಳಿಯ ಶ್ರೀನಿಧಿ ಕಾಂಪ್ಲೆಕ್ಸ್‌ನಲ್ಲಿರುವ ತ್ರಿಶಾ ಕಾಲೇಜ್‌ ಆಫ್ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌, ತ್ರಿಶಾ ಸಂಧ್ಯಾ ಕಾಲೇಜು ಸಿಎ, ಸಿಎಸ್‌ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದೆ.

Advertisement

ಕಾಲೇಜಿನಲ್ಲಿ ಅನುಭವಿ ಅಧ್ಯಾಪಕರು, ಪಠ್ಯೇತರ ಚಟುವಟಿಕೆ, ಸುಸಜ್ಜಿತ ಗ್ರಂಥಾಲಯದೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ ವಾತಾವರಣವಿದೆ. ದೂರದ ಊರಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ಸೌಲಭ್ಯವಿದೆ. ಇಲ್ಲಿ ಬಿಕಾಂ ಜತೆಗೆ ಸಿಎ, ಸಿಎಸ್‌, ಎಂಬಿಎ ಅರ್ಹತಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ, ಬ್ಯಾಂಕಿಂಗ್‌ ಪರೀಕ್ಷೆಗೆ ತರಬೇತಿ ನೀಡುವುದರಿಂದ ವಿದ್ಯಾರ್ಥಿಗಳ ಸಮಯದ ಉಳಿತಾಯ, ಒತ್ತಡವಿಲ್ಲದ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ.

1998ರಲ್ಲಿ ಉಡುಪಿಯಲ್ಲಿ ಎನ್‌.ಎಸ್‌. ಗೋಪಾಲಕೃಷ್ಣ ಭಟ್‌ರಿಂದ ಸ್ಥಾಪಿತವಾದ ತ್ರಿಶಾ ಕ್ಲಾಸಸ್‌ ಈವರೆಗೂ 50 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಮೆಚ್ಚಿನ ಕಲಿಕಾ ಸಂಸ್ಥೆಯಾಗಿದೆ. ಆಲ್‌ ಇಂಡಿಯಾ ರ್‍ಯಾಂಕ್‌ಗಳೊಂದಿಗೆ ದ.ಕ., ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸಿಎ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಸಂಸ್ಥೆ ಮಾದರಿಯಾಗಿದೆ.

ರೆಗ್ಯುಲರ್‌ ಬಿಕಾಂನ ಜತೆ ದುಡಿಮೆ ಮತ್ತು ಶಿಕ್ಷಣ ಇವೆರಡನ್ನು ಸರಿದೂಗಿಸಲು ಪೂರಕ ವಾಗುವಂತೆ ವಿದ್ಯಾರ್ಥಿಗಳಿಗೆ ತ್ರಿಶಾ ಸಂಧ್ಯಾ ಕಾಲೇಜು ಲಭ್ಯವಿದೆ. ಸಿಎ, ಸಿಎಸ್‌ ತರಗತಿಗಳಿಗೆ ದೇಶದ ವಿವಿಧೆಡೆಗಳಿಂದ ಪ್ರಸಿದ್ಧ ವಿಷಯ ತಜ್ಞರನ್ನು ಕರೆಸಿ ಬೋಧಿಸಲಾಗುತ್ತದೆ. ಸಿದ್ಧಾಂತ್‌ ಫೌಂಡೇಶನ್‌ನಡಿ ಕಾರ್ಯಾಚರಿಸುತ್ತಿರುವ ತ್ರಿಶಾ ಕಾಲೇಜು ಮಂಗಳೂರು,ಉಡುಪಿ, ಬೆಂಗಳೂರು ಹೀಗೆ 3 ಕಡೆ ತನ್ನ ಸಂಸ್ಥೆಗಳನ್ನು ಹೊಂದಿದ್ದು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಒದಗಿಸುತ್ತಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next