Advertisement

ತ್ರಿಪುರದ 168 ಮತಗಟ್ಟೆಗಳಲ್ಲಿ ಮೇ 12ರಂದು ಮರು ಚುನಾವಣೆ: ಆಯೋಗದ ಪ್ರಕಟನೆ

09:47 AM May 09, 2019 | Sathish malya |

ಹೊಸದಿಲ್ಲಿ : ತ್ರಿಪುರ ಲೋಕಸಭಾ ಚುನಾವಣೆ ವೇಳೆ ಭಾರೀ ಪ್ರಮಾಣದಲ್ಲಿ ಮತಗಟ್ಟೆ ವಶೀಕರಣ ನಡೆದಿದೆ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ಅನುಸರಿಸಿ ಚುನಾವಣಾ ಆಯೋಗ ತ್ರಿಪುರದ 26 ಅಸೆಂಬ್ಲಿ ಕ್ಷೇತ್ರಗಳಿಗೆ ಒಳಪಟ್ಟ 168 ಮತಗಟ್ಟೆಗಳಲ್ಲಿ ಇದೇ ಮೇ 12ರಂದು ಬೆಳಗ್ಗೆ 7ರಿಂದ ಸಂಜೆ 5 ವರೆಗಿನ ಅವಧಿಯಲ್ಲಿ ಮರು ಚುನಾವಣೆಯನ್ನು ನಡೆಸಲಿದೆ. ಈ ಸಂಬಂಧ ಅದು ಅಧಿಕೃತ ಪ್ರಕಟನೆಯನ್ನು ಹೊರಡಿಸಿದೆ.

Advertisement

ಕಳೆದ ಎಪ್ರಿಲ್‌ 11ರಂದು ತ್ರಿಪುರ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದಾಗ ಶೇ.81ರಷ್ಟು ಮತದಾನ ನಡೆದಿತ್ತು.

ಎಪ್ರಿಲ್‌ 19ರಂದು ತ್ರಿಪುರದಲ್ಲಿನ ಕಾಂಗ್ರೆಸ್‌ ಮತ್ತು ಸಿಪಿಎಂ ಜತೆಗೂಡಿ ಚುನಾವಣಾ ಆಯೋಗವನ್ನು ಭೇಟಿಯಾಗಿ ತ್ರಿಪುರ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ವ್ಯಾಪಕ ಮತಗಟ್ಟೆ ವಶೀಕರಣ ಮತ್ತು ಚುನಾವಣಾ ಅಕ್ರಮಗಳು ನಡೆದಿವೆ ಎಂದು ದೂರಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next