Advertisement

ಮೂರು ರಾಜ್ಯಗಳ ಮತ ಎಣಿಕೆ ಆರಂಭ: ಇಲ್ಲಿದೆ ಆರಂಭಿಕ ಲೆಕ್ಕಚಾರ

09:15 AM Mar 02, 2023 | Team Udayavani |

ಹೊಸದಿಲ್ಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮೂರು ರಾಜ್ಯಗಳಲ್ಲಿ ಒಟ್ಟು 60 ವಿಧಾನ ಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಚುನಾವಣಾ ಫಲಿತಾಂಶ ಕುತೂಹಲ ಕೆರಳಿಸಿದೆ.

Advertisement

ಮೇಘಾಲಯ:  (ಮ್ಯಾಜಿಕ್‌ ನಂಬರ್ 31)

ಮೇಘಾಲಯದಲ್ಲಿ ಆರಂಭಿಕ ಹಂತದಲ್ಲಿ 60 ಕ್ಷೇತ್ರಗಳಲ್ಲಿ 8 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು,ಕಾಂಗ್ರೆಸ್‌ 8 ಕ್ಷೇತ್ರದಲ್ಲಿ, ಎನ್‌ ಪಿಪಿ 21 ಕ್ಷೇತ್ರದಲ್ಲಿ ಹಾಗೂ ಇತರರು 11 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತ್ರಿಪುರಾ: (ಮ್ಯಾಜಿಕ್‌ ನಂಬರ್ 31)

ಇನ್ನು ತ್ರಿಪುರಾದಲ್ಲಿ ಕಾಂಗ್ರೆಸ್‌ ಮೈತ್ರಿಕೂಟ 4, ಬಿಜೆಪಿ ಮೈತ್ರಿಕೂಟ 39,  ಟಿಎಂಪಿ 5,ಇತರೆ 2 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಒಟ್ಟು 60 ಕ್ಷೇತ್ರಗಳಿವೆ.

Advertisement

ನಾಗಲ್ಯಾಂಡ್‌: (ಮ್ಯಾಜಿಕ್‌ ನಂಬರ್ 31)

ಅಂತಿಮವಾಗಿ ನಾಗಲ್ಯಾಂಡ್‌ ನಲ್ಲಿ ಆರಂಭಿಕ ಹಂತದ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ಮೈತ್ರಿಕೂಟ ಒಟ್ಟು 60 ಕ್ಷೇತ್ರದಲ್ಲಿ 34 ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು,ಎನ್‌ ಪಿಎಫ್ ಪಕ್ಷ 4, ಕಾಂಗ್ರೆಸ್‌ 1 ಇತರೆ ಪಕ್ಷಗಳು 9 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಸಮೀಕ್ಷೆಗಳು ಹೇಳಿದ್ದೇನು?: ತ್ರಿಪುರಾ, ನಾಗಾಲ್ಯಾಂಡ್‌ ಬಿಜೆಪಿ ತೆಕ್ಕೆಗೆ ಹೋಗಲಿದೆ. ಮೇಘಾಲಯ ಅತಂತ್ರವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಫೆ. 16ರಂದು ತ್ರಿಪುರಾ ಮತ್ತು ಫೆ. 27ರಂದು ನಾಗಾಲ್ಯಾಂಡ್‌ ಹಾಗೂ ಮೇಘಾಲಯ ವಿಧಾನಸಭೆಗಳಿಗೆ ಚುನಾವಣೆ ನಡೆದಿತ್ತು. ತ್ರಿಪುರಾದಲ್ಲಿ ಪ್ರಾದೇಶಿಕ ಪಕ್ಷ ತಿಪ್ರ ಮೋಥಾ 42 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next