Advertisement

ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಜಿ 20 ಔತಣ ಕೂಟ: ಸರಕಾರ ವಿರುದ್ಧ ಆಕ್ರೋಶ

10:18 PM Apr 06, 2023 | Team Udayavani |

ಅಗರ್ತಲಾ: 122 ವರ್ಷಗಳ ಐತಿಹ್ಯವಿರುವ ತ್ರಿಪುರಾ ಉಜ್ಜಯಂತ ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಜಿ20 ಪ್ರತಿನಿಧಿಗಳ ಔತಣಕೂಟ ಆಯೋಜಿಸಲಾಗಿತ್ತು. ಈ ಕ್ರಮ ತೆಗೆದುಕೊಂಡ ರಾಜ್ಯಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ದರ್ಬಾರ್‌ ಹಾಲ್‌ ರಾಜಮನೆತನದ ಪಾರುಪತ್ಯದಲ್ಲಿ ಮಹಾರಾಜರ ಪಟ್ಟಾಭಿಷೇಕಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಸ್ಥಳ. ಇದೇ ಸ್ಥಳದಲ್ಲೇ ಏ.3ರಂದು ನಡೆದ ಜಿ 20 ಪ್ರತಿನಿಧಿಗಳ ಸಭೆಯಲ್ಲಿ ಸರ್ಕಾರ ಔತಣಕೂಟ ಆಯೋಜಿಸಿತ್ತು. ಈ ಹಿನ್ನೆಲೆ 122 ವರ್ಷಗಳಿಂದಲೂ ರಾಜ್ಯದ ಜನತೆ ಪೂಜನೀಯ ಭಾವದಲ್ಲಿ ಕಾಣುತ್ತಿದ್ದ ಸ್ಥಳವನ್ನು ಮನರಂಜನೆಗೆ ಬಳಸುವ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯ, ಜನರ ಭಾವನೆಗಳಿಗೆ ಸರ್ಕಾರ ಧಕ್ಕೆ ತಂದಿದೆ ಎಂದು ಭಾರತ ರಾಷ್ಟ್ರೀಯ ಕಲೆ-ಸಂಸ್ಕೃತಿ ಪಾರಂಪರಿಕ ಟ್ರಸ್ಟ್‌ನ ತ್ರಿಪುರಾ ಸಂಚಾಲಕರಾದ ಎಂ.ಕೆ.ಪ್ರಜ್ಞಾ ದೇಬ್‌ ಬರ್ಮನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಣಿಕ್ಯ ರಾಜಮನೆನತದ ಆಸ್ಥಾನವಾಗಿದ್ದ ಅರಮನೆಯನ್ನು 2013ರಲ್ಲಿ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next