Advertisement

ತ್ರಿರಾಷ್ಟ್ರ ಫ‌ುಟ್ಬಾಲ್‌ ಕೂಟ: ಭಾರತಕ್ಕೆ ಸೈಂಟ್‌ ಕಿಟ್ಸ್‌ ಎದುರಾಳಿ 

09:04 AM Aug 24, 2017 | Team Udayavani |

ಮುಂಬಯಿ: ಭಾರತ ತಂಡವು ಗುರುವಾರ ನಡೆಯುವ ಹೀರೊ ತ್ರಿರಾಷ್ಟ್ರ ಫ‌ುಟ್ಬಾಲ್‌ ಕೂಟದ ಎರಡನೇ ಹೋರಾಟದಲ್ಲಿ ಸೈಂಟ್‌ ಕಿಟ್ಸ್‌ ಆ್ಯನ್‌x ನೆವಿಸ್‌ ತಂಡವನ್ನು ಎದುರಿಸಲಿದ್ದು ಗೆಲುವಿನ ನಿರೀಕ್ಷೆಯಲ್ಲಿದೆ. 

Advertisement

ಮಾರಿಷಸ್‌ ತಂಡದೆದುರು ನಡೆದ ಮೊದಲ ಪಂದ್ಯದಲ್ಲಿ 2-1 ಗೋಲುಗಳಿಂದ ಜಯ ಸಾಧಿಸಿದ್ದ ಭಾರತ ಸತತ 10ನೇ ಪಂದ್ಯದಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ.  ಸೆ. 5ರಂದು ನಡೆಯುವ ಏಶ್ಯನ್‌ಕಪ್‌ ಅರ್ಹತಾ ಕೂಟದಲ್ಲಿ ಮಕಾವ್‌ ತಂಡವನ್ನು ಎದುರಿಸಲು ಈ ಕೂಟ ಭಾರತಕ್ಕೆ ಅಭ್ಯಾಸ ಪಂದ್ಯವಾಗಿದೆ. ಭಾರತ ಕಳೆದ ಕೆಲವು ತಿಂಗಳುಗಳಲ್ಲಿ ಎಂಟು ಅಧಿಕೃತ ಅಂತಾರಾಷ್ಟ್ರೀಯ ಪಂದ್ಯ ಜಯಿಸಿದ್ದರೆ ಭೂತಾನ್‌ ವಿರುದ್ಧ ಅನಧಿಕೃತ ಸೌಹಾರ್ದ ಪಂದ್ಯವೊಂದನ್ನು ಜಯಿಸಿತ್ತು. ಇದೀಗ ಸತತ 10ನೇ ಪಂದ್ಯ ಗೆಲುವಿಗಾಗಿ ಭಾರತ ಪ್ರಯತ್ನಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next