Advertisement

ತ್ರಿವಳಿ ತಲಾಖ್‌: ಸುಪ್ರೀಂ ತೀರ್ಪಿಗೆ ಮುಸ್ಲಿಂ ಮಹಿಳೆಯರ ಸಹಮತ

10:16 AM Jul 19, 2020 | sudhir |

ಹೊಸದಿಲ್ಲಿ: ಮುಸ್ಲಿಂ ಸಮುದಾಯದವರು ಹೆಚ್ಚಿರುವ ಈಶಾನ್ಯ ದಿಲ್ಲಿ ಪ್ರದೇಶದ ಬಹುತೇಕ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್‌ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ದಿಲ್ಲಿ ಅಲ್ಪಸಂಖ್ಯಾತ ಆಯೋಗದ ವರದಿ ಹೇಳಿದೆ. 2017ರಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ತ್ರಿವಳಿ ತಲಾಖ್‌ನ್ನು ರದ್ದುಗೊಳಿಸಿ, ಇದನ್ನು ಸಂವಿಧಾನಬಾಹಿರ ಪದ್ಧತಿ ಎಂದು ಘೋಷಿಸಿತ್ತು.

Advertisement

ರಾಷ್ಟ್ರ ರಾಜಧಾನಿಯಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶ ಈಶಾನ್ಯ ದೆಹಲಿ. ಇಲ್ಲಿನ 30 ಸ್ಥಳಗಳಲ್ಲಿ ಸುಮಾರು 600 ಮುಸ್ಲಿಂ ಮಹಿಳೆಯರ ಸಮೀಕ್ಷೆಯನ್ನು ಆಯೋಗ ನಡೆಸಿತು. ಇವರ ಪೈಕಿ ಶೇ.93ರಷ್ಟು ಮಹಿಳೆಯರು ನ್ಯಾಯಾಲಯದ ತೀರ್ಪನ್ನು ಬೆಂಬಲಿಸಿದ್ದಾರೆ. ಈ ತೀರ್ಪು ಮುಸ್ಲಿಂ ಮಹಿಳೆಯರಿಗೆ ಹೊಸ ಜೀವನ ಕಲ್ಪಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ. 7ರಷ್ಟು ಮಹಿಳೆಯರು ಮಾತ್ರ ತಮ್ಮ ಧರ್ಮ, ಸಂಸ್ಕೃತಿಯಲ್ಲಿನ ಪದ್ಧತಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಇಲ್ಲಿನ ಮುಸ್ಲಿಮರಲ್ಲಿ ಬಹುಪತ್ನಿತ್ವ ಪ್ರಚಲಿತ ದಲ್ಲಿಲ್ಲ. ಏಕಪತ್ನಿತ್ವವೇ ಪ್ರಚಲಿತದಲ್ಲಿದೆ. ಇಲ್ಲಿ ವಿವಾಹ ವಿಚ್ಛೇದನದ ಪ್ರಕರಣಗಳೂ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next