Advertisement

ಮೇ.11ರಿಂದ ತ್ರಿವಳಿ ತಲಾಕ್‌ ವಿಚಾರಣೆ; ಖುರ್ಷಿದ್ amicus curiae

04:01 PM May 03, 2017 | Team Udayavani |

ಹೊಸದಿಲ್ಲಿ : ತ್ರಿವಳಿ ತಲಾಕ್‌, ನಿಖಾ ಹಲಾಲ ಮತ್ತು ಮುಸ್ಲಿಮರಲ್ಲಿನ ಬಹು ಪತ್ನಿತ್ವದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಹಲವು ಅರ್ಜಿಗಳ ವಿಚಾರಣೆಯನ್ನು ಇದೇ ಮೇ 11ರಂದು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್‌ ಪೀಠವು  ಆರಂಭಿಸಲಿದೆ. ಈ ನಿಟ್ಟಿನಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್‌ ಖುರ್ಷಿದ್‌ ಅವರನ್ನು ನ್ಯಾಯಾಲಯವು ಕೋರ್ಟ್‌ ಸಲಹೆಗಾರರನ್ನಾಗಿ (ಎಮಿಕಸ್‌ ಕ್ಯೂರಿ ಆಗಿ) ನೇಮಿಸಿದೆ. 

Advertisement

ವರಿಷ್ಠ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌ ಮತ್ತು ಜಸ್ಟಿಸ್‌ ಗಳಾಗಿರುವ ಡಿ ವೈ ಚಂದ್ರಚೂಡ್‌ ಮತ್ತು ಎಸ್‌ ಕೆ ಕೌಲ್‌ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ ಪೀಠ, ಖುರ್ಷಿದ್‌ ಅವರಿಗೆ ತ್ರಿವಳಿ ತಲಾಕ್‌ ವಿಷಯದಲ್ಲಿನ ಅವರ ಪರಿಣತ ಅಭಿಪ್ರಾಯಗಳನ್ನು ಲಿಖೀತವಾಗಿ ಒಪ್ಪಿಸುವಂತೆ ಸೂಚಿಸಿದೆ. 

ಭಾರತೀಯ ಮುಸ್ಲಿಮರಲ್ಲಿ ಜಾರಿಯಲ್ಲಿರುವ ತ್ರಿವಳಿ ತಲಾಕ್‌ ಪದ್ಧತಿಯನ್ನು ಪ್ರಶ್ನಿಸಿ ಹಲವಾರು ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸಿ ತ್ರಿವಳಿ ತಲಾಕ್‌ ಪದ್ಧತಿಯನ್ನು ಕೊನೆಗೊಳಿಸುವುದಕ್ಕೆ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next