Advertisement
ಇದೇ ಸಂದರ್ಭದಲ್ಲಿ, ಶಾ ಬಾನೋ ಪ್ರಕರಣವನ್ನು ಪ್ರಸ್ತಾವಿಸಿದ ಸಚಿವ ಪ್ರಸಾದ್, “ಮತ ಬ್ಯಾಂಕ್ ರಾಜಕೀಯ ಮಾಡುವುದನ್ನು ಬಿಟ್ಟು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೇ ಮಧ್ಯಪ್ರವೇಶಿಸಿ, ಈ ಐತಿಹಾಸಿಕ ಬದಲಾವಣೆಗೆ ಮುನ್ನುಡಿ ಬರೆಯಬೇಕು. ತಮ್ಮ ಪತಿ(ರಾಜೀವ್ ಗಾಂಧಿ) ಮಾಡಿದ ಪಾಪವನ್ನು ತೊಳೆಯಲು ಇದು ಅವರಿಗೆ ಸುವರ್ಣಾವಕಾಶ’ ಎಂದೂ ಹೇಳಿದರು. ಕಾಂಗ್ರೆಸ್‌ನವರಿಗೆ ಮುಸ್ಲಿಮರು ಮತಕ್ಕೆ ಬೇಕೇ ಹೊರತು, ಆ ಸಮುದಾಯದಲ್ಲಿ ಲಿಂಗ ಸಮಾನತೆ ತರುವುದನ್ನು ಆ ಪಕ್ಷ ಬಯಸುತ್ತಿಲ್ಲ ಎಂದೂ ವಾಗ್ಧಾಳಿ ನಡೆಸಿದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಉತ್ತರಪ್ರದೇಶದಲ್ಲಿ ಒಂದೇ ದಿನ 2 ತ್ರಿವಳಿ ತಲಾಖ್ ಪ್ರಕರಣಗಳು ನಡೆದಿವೆ. ಸೌದಿ ಅರೇಬಿಯಾದಲ್ಲಿರುವ ವ್ಯಕ್ತಿಯೊಬ್ಬ ಎಸ್ಸೆಮ್ಮೆಸ್ ಮೂಲಕ ತನ್ನ ಪತ್ನಿಗೆ ತಲಾಖ್ ಹೇಳಿದ್ದರೆ, ಮತ್ತೂಬ್ಬ ವ್ಯಕ್ತಿ ಫೋನ್ ಕರೆಯ ಮೂಲಕ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡಿದ್ದಾನೆ.