Advertisement

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಟ್ರಿಪಲ್‌ ತಲಾಖ್‌

12:33 AM Feb 29, 2020 | Sriram |

ಕುಂದಾಪುರ: ಕನ್ನಡಕ್ಕೆ ರಿಸರ್ವೇಶನ್‌ ಚಿತ್ರದ ಮೂಲಕ 2017ರಲ್ಲಿ ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಮತ್ತು 2018ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ (ಬಿಫ್ಸ್) ತಂದುಕೊಟ್ಟ ಕುಂದಾಪುರದ ಕಲಾವಿದ ಯಾಕುಬ್‌ ಖಾದರ್‌ ಗುಲ್ವಾಡಿ ಅವರ ಪ್ರಥಮ ನಿರ್ದೇಶನದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲಾಖ್‌ ವಿಚಾರದಲ್ಲಿ ಸೂಕ್ಷ್ಮವಾಗಿ ಚರ್ಚೆಗೊಳಗಾದ ಕಥೆಯನ್ನಿಟ್ಟುಕೊಂಡು ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ತಯಾರಾದ ಟ್ರಿಪಲ್‌ ತಲಾಖ್‌ ಸಿನಿಮಾ ಫೆ. 26ರಿಂದ ಮಾ. 4ರ ತನಕ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅನ್ಸಂಗ್‌ ಇನ್‌ಕ್ರೆಡಿಬಲ್‌ ಇಂಡಿಯಾ ಭಾರತದಲ್ಲಿ ಸ್ವಲ್ಪ ತಿಳಿದಿರುವ ಭಾಷೆಗಳು (ಬ್ಯಾರಿ ಭಾಷೆ) ವಿಭಾಗದಲ್ಲಿ ವಿಶೇಷ ಪ್ರದರ್ಶನ ಕಾಣಲಿದೆ.

Advertisement

ಗುಲ್ವಾಡಿ ಟಾಕೀಸ್‌ ಸಂಸ್ಥೆಯ ಈ ಸಿನೆಮಾವನ್ನು ಮುಂಬಯಿಯ ನಾರಾಯಣ ಪ್ರಭಾ ಸುವರ್ಣ ಮತ್ತು ಯಾಕುಬ್‌ ಖಾದರ್‌ ನಿರ್ಮಿಸಿದ್ದಾರೆ. ಬ್ಯಾರಿ ಭಾಷೆಯ ಇತಿಹಾಸದಲ್ಲೇ ದೂರದ ಲಂಡನ್ನಿನ ಬ್ರಿಷ್ಟಲ್‌ನಲ್ಲಿ ಮೊದಲ ಪ್ರದರ್ಶನ ಕಂಡ ಈ ಸಿನೆಮಾ ಜ. 25ರಂದು ಕುಂದಾಪುರದ ಯುವ ಮೆರೀಡಿಯನ್‌ನಲ್ಲಿ ತನ್ನ 2ನೇ ಪ್ರದರ್ಶನ ನಡೆಯಿತು.
ಮುಸ್ಲಿಂ ಸಮುದಾಯದಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಂಡ ಈ ಸಿನೆಮಾ ರಾಷ್ಟ್ರಾದ್ಯಂತ ತನ್ನ ಸಬೆಕ್ಟ್ ನಿಂದ ಗಮನ ಸೆಳೆದಿದ್ದು ಮುಸ್ಲಿಂ ಮಹಿಳೆಯರ ಬದುಕಿನ ಪ್ರಶ್ನೆಯಾಗಿ ಕೂಡ ಕಾಡಿತ್ತು. ಒಂದೇ ಉಸಿರಿನಲ್ಲಿ ಹೇಳುವ ಮೂರು ತಲಾಖ್‌ ಇತ್ತೀಚೆಗೆ ಸುಪ್ರಿಂ ಕೋರ್ಟ್‌ ನೀಡಿದ ತೀರ್ಪು ಮತ್ತು ಪವಿತ್ರ ಕುರಾನ್‌ಲ್ಲಿ ಇರುವ ವಿಚಾರವನ್ನು ಇಟ್ಟುಕೊಂಡು ಮಾಡಿದ ಈ ಸಿನೆಮಾ ಮುಸ್ಲಿಂ ಮಹಿಳೆಯರ ಬದುಕಿಗೆ ಒಂದು ತಿರುವು ನೀಡಿದೆ. ಯಾಕುಬ್‌ ಖಾದರ್‌ ಗುಲ್ವಾಡಿ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

ಛಾಯಾಚಿತ್ರಗ್ರಹಣ ಪಿ.ವಿ.ಆರ್‌. ಸ್ವಾಮಿ ಮತ್ತು ಸತೀಶ್‌ ಕುಮಾರ್‌, ಎಡಿಟರ್‌ ಮತ್ತು ಕಲರಿಸ್ಟ್‌ ಮೋಹನ್‌ ಎಲ್‌. ರಂಗಕಹಳೆ, ಸೌಂಡ್‌ ಮಿಕ್ಸಿಂಗ್‌ ಮುನೀಬ್‌ ಅಹ್ಮದ್‌, ಹಿನ್ನೆಲೆ ಸಂಗೀತ ಗಿರೀಶ್‌ ಬಿ.ಎಂ., ವಸ್ತ್ರ ವಿನ್ಯಾಸ ಇಸ್ಮಾಯಿಲ್‌ ಸಫುìದ್ದೀನ್‌, ಕಲೆ ಎ.ಕೆ. ಗುಲ್ವಾಡಿ, ಸಹ ನಿರ್ದೇಶನ ಪನಕನಹಳ್ಳಿ ಪ್ರಸನ್ನ ಮತ್ತು ರಿಜ್ವಾನ್‌ ಗುಲ್ವಾಡಿ, ತಾರಾಗಣದಲ್ಲಿ ರೂಪಾ ವರ್ಕಾಡಿ, ನ್ಯಾಯವಾದಿಗಳಾದ ರವಿಕಿರಣ ಮುರುಡೇಶ್ವರ, ಎ.ಎಸ್‌.ಎನ್‌ ಹೆಬ್ಟಾರ್‌, ನವ್ಯಾ ಪೂಜಾರಿ, ಉಮರ್‌ ಯು.ಎಚ್‌., ಎಂ.ಕೆ. ಮಠ, ಬೇಬಿ ಫಹಿಮತುಲ್‌ ಯುಶ್ರ, ಅಝರ್‌ ಷಾ, ಮಹ್ಮದ್‌ ಬಡೂxರ್‌, ಅಮೀರ್‌ ಹಮ್ಜಾ, ನಾರಾಯಣ ಸುವರ್ಣ, ಪ್ರಭಾ ಸುವರ್ಣ, ಸುಬ್ರಹ್ಮಣ್ಯ ಶೆಟ್ಟಿ, ಮಾ| ಫಹಾದ್‌ ಮುಂತಾದವರು ನಟಿಸಿದ್ದಾರೆ.

ನನ್ನ ಮೊದಲ ನಿರ್ಮಾಣದ
ಸಿನೆಮಾ ರಿರ್ಸವೇಶನ್‌ಗೆ
2018ರಲ್ಲಿ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಂದಿತ್ತು. ಈಗ ನನ್ನ ಮೊದಲ ನಿರ್ದೇಶನದ ಸಿನೆಮಾ ಟ್ರಿಪಲ್‌ ತಲಾಖ್‌ ಅನ್ಸಂಗ್‌ ಇನ್‌ಕ್ರೆಡಿಬಲ್‌ ಇಂಡಿಯಾ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿರುವುದು ಅತ್ಯಂತ ಖುಷಿ ಕೊಟ್ಟಿದೆ.
-ಯಾಕುಬ್‌ ಖಾದರ್‌ ಗುಲ್ವಾಡಿ,ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next