Advertisement

ಲೋಕಸಭೆಯಲ್ಲಿ ತ್ರಿವಳಿ ತಲಾಕ್‌: ಕಾಂಗ್ರೆಸ್‌ ಸಂಸದರಿಗೆ ವಿಪ್‌ ಜಾರಿ

12:32 PM Dec 27, 2018 | udayavani editorial |

ಹೊಸದಿಲ್ಲಿ : ಲೋಕಸಭೆಯಲ್ಲಿ  ಇಂದು ಗುರುವಾರ ತ್ರಿವಳಿ ತಲಾಕ್‌ ಮಸೂದೆ ಮೇಲೆ ಚರ್ಚೆ ನಡೆಯಬಹುದೆಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಪಕ್ಷ  ತನ್ನ ಸಂಸದರಿಗೆ ದಿನಪೂರ್ತಿ ಸದನದಲ್ಲಿ ಹಾಜರಿರುವಂತೆ ವಿಪ್‌ ಜಾರಿ ಮಾಡಿದೆ. 

Advertisement

ತ್ರಿವಳಿ ತಲಾಕ್‌ ನಿಷೇಧ ಮತ್ತು ಅದರ ಅಪರಾಧೀಕರಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಕಾಂಗ್ರೆಸ್‌ ಎಚ್ಚರಿಕೆ ಹೆಜ್ಜೆ ಇರಿಸಿದ್ದು ತನ್ನ ನಿಲುವೇನೆಂಬುದನ್ನು ಎಲ್ಲಿಯೂ ಬಿಟ್ಟುಕೊಡದಿರುವ ಜಾಣತನವನ್ನು ತೋರಿರುವುದು ಗಮನಾರ್ಹವಾಗಿದೆ. 

ಕಾಂಗ್ರೆಸ್‌ ನಾಯಕರು ತ್ರಿವಳಿ ತಲಾಕ್‌ ಅಪರಾಧೀಕರಣ ಸಲ್ಲದೆಂದು ವಾದಿಸುತ್ತಾ ಬಂದಿದ್ದಾರೆ. ಅಂತೆಯೇ ಪ್ರಸ್ತಾವಿತ ಮಸೂದೆಗೆ ತಿದ್ದುಪಡಿ ಅಗತ್ಯವೆಂದು ಒತ್ತಾಯಿಸುತ್ತಾ ಬಂದಿದ್ದಾರೆ. 

ತ್ರಿವಳಿ ತಲಾಕ್‌ ಮಸೂದೆಯು ಮುಸ್ಲಿಮ್‌ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸುವ ಉದ್ದೇಶವನ್ನೂ ಹೊಂದಿದೆ. 

ತಾನು ಮಸೂದೆಯ ವಿರೋಧಿ ಅಲ್ಲ; ಆದರೆ ಮಸೂದೆಗೆ ಕೆಲವೊಂದು ತಿದ್ದುಪಡಿಗಳು ಅಗತ್ಯವಿದೆ ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ.

Advertisement

ತ್ರಿವಳಿ ತಲಾಕ್‌ ಮಸೂದೆಯ ಪ್ರಕಾರ ಮುಸ್ಲಿಂ ಪತಿಯು ಅಪರಾಧಿ ಎಂದು ಪರಿಗಣಿಸಲ್ಪಟ್ಟು ದಂಡನೆಗೆ ಗುರಿಯಾದ ಸಂದರ್ಭದಲ್ಲಿ ಆತನ ಪತ್ನಿಯನ್ನು ನೋಡಿಕೊಳ್ಳುವವರು ಯಾರು ? ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್‌ ನಾಯಕ, ಗುಲಾಂ ನಬೀ ಆಜಾದ್‌ ಪ್ರಶ್ನಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next