Advertisement

ಎಲ್ಲರಿಗೂ ಇಷ್ಟವಾಗುವ ರೈಡಿಂಗ್‌: ಉದಯವಾಣಿ ಕಚೇರಿಯಲ್ಲಿ ‘ತ್ರಿಬಲ್‌ ರೈಡಿಂಗ್‌’ಚಿತ್ರತಂಡ

12:51 PM Nov 12, 2022 | Team Udayavani |

ನಟ ಗಣೇಶ್‌ ಅಭಿನಯದ “ತ್ರಿಬಲ್‌ ರೈಡಿಂಗ್‌’ ಸಿನಿಮಾ ಇದೇ ನವೆಂಬರ್‌ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ “ತ್ರಿಬಲ್‌ ರೈಡಿಂಗ್‌’ ಸಿನಿಮಾದ ಒಂದು ಟೀಸರ್‌ ಮತ್ತು ಮೂರು ಹಾಡುಗಳು “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಹಿಟ್‌ಲಿಸ್ಟ್‌ ಸೇರಿದೆ.

Advertisement

ಸದ್ಯ ಭರದಿಂದ “ತ್ರಿಬಲ್‌ ರೈಡಿಂಗ್‌’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಶುಕ್ರವಾರ “ಉದಯವಾಣಿ’ ಕಚೇರಿಗೆ ಭೇಟಿ ನೀಡಿ, ಸಿನಿಮಾದ ಬಗ್ಗೆ ಒಂದಷ್ಟು ಮಾತನಾಡಿತು.

ಮೊದಲ ಸಿನಿಮಾದ ಖುಷಿಯಲ್ಲಿ ಮೇಘಾ ಶೆಟ್ಟಿ

ಕಿರುತೆರೆಯ ಜನಪ್ರಿಯ “ಜೊತೆ ಜೊತೆಯಲಿ…’ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ನಟಿ ಮೇಘಾ ಶೆಟ್ಟಿ, ಹಿರಿತೆರೆಯಲ್ಲಿ ಹೀರೋಯಿನ್‌ ಆಗಿ ಅಭಿನಯಿಸಿದ ಮೊದಲ ಸಿನಿಮಾ “ತ್ರಿಬಲ್‌ ರೈಡಿಂಗ್‌’. “”ತ್ರಿಬಲ್‌ ರೈಡಿಂಗ್‌’ ನಾನು ಹೀರೋಯಿನ್‌ ಆಗಿ ಒಪ್ಪಿಕೊಂಡ ಮೊದಲ ಸಿನಿಮಾ. ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ ಟೈನ್ಮೆಂಟ್‌ ಸಿನಿಮಾ. ಮೊದಲ ಸಿನಿಮಾದಲ್ಲೇ ತುಂಬ ಒಳ್ಳೆಯ ಟೀಮ್‌ ಸಿಕ್ಕಿದ್ದರಿಂದ, ಸಿನಿಮಾ ಮಾಡಿ ಮುಗಿಸಿದ್ದೇ ಗೊತ್ತಾಗಲಿಲ್ಲ. ಈಗಾಗಲೇ ಬಿಡುಗಡೆಯಾಗಿರುವ “ತ್ರಿಬಲ್‌ ರೈಡಿಂಗ್‌’ ಸಿನಿಮಾದ ಮೂರೂ ಹಾಡುಗಳು ಕೂಡ ಬಿಗ್‌ ಹಿಟ್‌ ಆಗಿದೆ. ಅದೇ ರೀತಿ ಸಿನಿಮಾ ಕೂಡ ಆಡಿಯನ್ಸ್‌ಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎಂಬುದು ಮೇಘಾ ಶೆಟ್ಟಿ ಮಾತು.

ಜೈ ಆನಂದ್‌ ಬೆಳ್ಳಿ ಸಿನಿಮಾ

Advertisement

ಕನ್ನಡ ಚಿತ್ರರಂಗದಲ್ಲಿ ಮುಂಚೂಣಿ ಸಿನಿಮಾ ಛಾಯಾಗ್ರಹಕರಲ್ಲಿ ಜೈ ಆನಂದ್‌ ಕೂಡ ಒಬ್ಬರು. ಕನ್ನಡದ ಹಲವು ಬಿಗ್‌ ಬಜೆಟ್‌ ಸ್ಟಾರ್ ಸಿನಿಮಾಗಳಿಗೆ ಕ್ಯಾಮರಾ ಹಿಡಿದ ಅನುಭವವಿರುವ ಜೈ ಆನಂದ್‌ ಅವರಿಗೆ “ತ್ರಿಬಲ್‌ ರೈಡಿಂಗ್‌’ ಸಿನಿ ಕೆರಿಯರ್‌ನ 25ನೇ ಸಿನಿಮಾ. “ನನ್ನ ಸಿನಿಮಾ ಕೆರಿಯರ್‌ನಲ್ಲಿ ಇದು 25ನೇ ಸಿನಿಮಾವಾಗಿರುವುದರಿಂದ, ನನಗೂ ಕೂಡ ಇದು ತುಂಬ ಸ್ಪೆಷಲ್‌ ಆಗಿದೆ. ಇಲ್ಲಿಯವರೆಗೆ ನಾನು ಮಾಡಿರುವ ಸಿನಿಮಾಗಳು ಒಂದು ರೀತಿಯಲ್ಲಿದ್ದರೆ, “ತ್ರಿಬಲ್‌ ರೈಡಿಂಗ್‌’ ಮತ್ತೂಂದು ರೀತಿಯ ಸಿನಿಮಾ. ತುಂಬ ಒಳ್ಳೆಯ ಕಂಟೆಂಟ್‌ ಸಿನಿಮಾದಲ್ಲಿದೆ. ಇಡೀ ಸಿನಿಮಾವನ್ನು ಹೊಸರೀತಿಯಲ್ಲಿ ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಿದ್ದೇವೆ’ ಎಂಬುದು ಛಾಯಾಗ್ರಹಕ ಜೈ ಆನಂದ್‌ ಮಾತು.

ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ ಟೈನ್ಮೆಂಟ್‌ ಪ್ಯಾಕೇಜ್‌

ಸಿನಿಮಾದ ಹೆಸರು “ತ್ರಿಬಲ್‌ ರೈಡಿಂಗ್‌’ ಅಂತಿದ್ದರೂ, ಇದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಪ್ಯಾಕೇಜ್‌ ಇರುವಂಥ ಸಿನಿಮಾ ಎಂಬುದು ನಿರ್ದೇಶಕ ಮಹೇಶ್‌ ಗೌಡ ಮಾತು. “ಸುಮಾರು 50 ದಿನಗಳ ಕಾಲ “ತ್ರಿಬಲ್‌ ರೈಡಿಂಗ್‌’ ಸಿನಿಮಾ ಶೂಟಿಂಗ್‌ ಮಾಡಿದ್ದೇವೆ. ಆರಂಭದಲ್ಲಿ ಗಣೇಶ್‌ ಅವರ ಸಿನಿಮಾಕ್ಕೆ ಈ ಟೈಟಲ್‌ ವಕೌìಟ್‌ ಆಗುತ್ತದೆಯಾ? ಎಂಬ ಬಗ್ಗೆ ನಮಗೂ ಸ್ವಲ್ಪ ಯೋಚನೆಯಿತ್ತು. ಆದ್ರೆ ಸಿನಿಮಾದ ಸಬ್ಜೆಕ್ಟ್ ಇದೇ ಟೈಟಲ್‌ ಸೂಕ್ತವೆನಿಸಿತು. ಇಡೀ ಸಿನಿಮಾದಲ್ಲಿ ಎಲ್ಲೂ ಡಬಲ್‌ ಮೀನಿಂಗ್‌ ಡೈಲಾಗ್ಸ್‌ ಇಲ್ಲ. ಗಣೇಶ್‌ ಅವರ ಎಲ್ಲ ಅಭಿಮಾನಿಗಳಿಗೂ “ತ್ರಿಬಲ್‌ ರೈಡಿಂಗ್‌’ ಖಂಡಿತವಾಗಿಯೂ ಇಷ್ಟವಾಗುತ್ತದೆ. ಇಲ್ಲಿ ಫ‌ನ್‌ ಇದೆ. ಎಮೋಶನ್ಸ್‌ ಇದೆ. ಒಳ್ಳೆಯ ಮ್ಯೂಸಿಕ್‌, ಡ್ಯಾನ್ಸ್‌ ಹೀಗೆ ಫ್ಯಾಮಿಲಿ ಆಡಿಯನ್ಸ್‌ ಒಂದು ಸಿನಿಮಾದಲ್ಲಿ ಏನೇನು ನಿರೀಕ್ಷಿಸುತ್ತಾರೋ, ಅದೆಲ್ಲವೂ “ತ್ರಿಬಲ್‌ ರೈಡಿಂಗ್‌’ನಲ್ಲಿದೆ. ಗಣೇಶ್‌, ಮೇಘಾ ಶೆಟ್ಟಿ, ಅದಿತಿ, ರಚನಾ ಇಂದರ್‌, ರವಿಶಂಕರ್‌, ಸಾಧುಕೋಕಿಲ, ರಂಗಾಯಣ ರಘು ಹೀಗೆ ಬೃಹತ್‌ ಕಲಾವಿದರ ತಾರಾಗಣ ಸಿನಿಮಾದಲ್ಲಿದೆ’ ಎಂಬ ವಿವರಣೆ ನಿರ್ದೇಶಕ ಮಹೇಶ್‌ ಗೌಡ ಅವರದ್ದು

Advertisement

Udayavani is now on Telegram. Click here to join our channel and stay updated with the latest news.

Next