Advertisement

ಪಾಕ್‌ ವಿರುದ್ಧ ಭಾರತ ಕಿಡಿ

06:00 AM Nov 04, 2018 | |

ವಿಶ್ವಸಂಸ್ಥೆ: ಭಯೋತ್ಪಾದನಾ ಚಟುವಟಿಕೆಗಳು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದ್ದು, ಭಾರತದಲ್ಲಿ ಗಡಿಯಾಚೆಗಿನ ಪ್ರಚೋದನೆಯಿಂದ ಇಂಥ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ ಎಂದು ಭಾರತ, ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನವನ್ನು ಗುರಿಯಾಗಿರಿಸಿಕೊಂಡು ವಾಗ್ಧಾಳಿ ನಡೆಸಿದೆ. 

Advertisement

ಮಾನವ ಹಕ್ಕುಗಳ ಕೌನ್ಸಿಲ್‌ ಬಗೆಗಿನ ವರದಿಯ ಬಗ್ಗೆ ಶನಿವಾರ ಆಯೋಜಿಸಲಾಗಿದ್ದ 3ನೇ ಸಂವಾದದಲ್ಲಿ ಮಾತನಾಡಿದ ವಿಶ್ವ ಸಂಸ್ಥೆಯಲ್ಲಿನ ಭಾರತದ ಶಾಶ್ವತ ನಿಯೋಗದ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ, ಹಲವಾರು ರೂಪಗಳಲ್ಲಿ ಹರಡಿರುವ ಭಯೋತ್ಪಾದನೆಯ ಮೂಲೋಚ್ಛಾಟನೆಗೆ ಇಡೀ ಜಾಗತಿಕ ಸಮುದಾಯ ಒಗ್ಗಟ್ಟಾಗಿ ಶ್ರಮಿಸ ಬೇಕೆಂದು ಕರೆ ನೀಡಿದರು. 

“”ಭಯೋತ್ಪಾದನೆ ಬಾಧಿತ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ಕೌನ್ಸಿಲ್‌ನ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತಿಲ್ಲ. ಭಯೋತ್ಪಾದನೆಯಿಂದ ಜನರು ಎದುರಿ ಸುತ್ತಿ ರುವ ಸಮಸ್ಯೆಗಳು ನಿವಾರಣೆಯಾಗುವ ಬದಲು, ಅವು ರಾಜಕೀಯ ಬಣ್ಣ ಪಡೆದು ಕೊಳ್ಳುತ್ತಿರುವುದು ವಿಪರ್ಯಾಸ” ಎಂದು ತ್ರಿಪಾಠಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next