ನವದೆಹಲಿ: ಅಮೆರಿಕದ ಪ್ರವಾಸೋದ್ಯಮ ಕಂಪನಿ ಟ್ರಿಪ್ ಅಡ್ವೈಸರ್ 2022ನೇ ಸಾಲಿಗಾಗಿ ಜಗತ್ತಿನ ಜನಪ್ರಿಯ ಪ್ರವಾಸೋದ್ಯಮ ಸ್ಥಳಗಳ ಪಟ್ಟಿಯನ್ನು ಪ್ರಕಟಿಸಿದೆ.
Advertisement
ಅದರಲ್ಲಿ ನವದೆಹಲಿ ಮತ್ತು ಜೈಪುರ ಸ್ಥಾನ ಪಡೆದುಕೊಂಡಿದೆ. ದೇಶದ ಎರಡು ನಗರಗಳಿಗೆ ಕ್ರಮವಾಗಿ 15 ಮತ್ತು 19ನೇ ರ್‍ಯಾಂಕ್ ದೊರಕಿದೆ. ಪ್ರವಾಸಿಗರೇ ಆಯ್ಕೆ ಮಾಡಿದ ಸ್ಥಳಗಳು ಇವುಗಳಾಗಿವೆ.
ಈ ಪಟ್ಟಿಯ ಪ್ರಕಾರ ಮೊದಲ ಸ್ಥಾನದಲ್ಲಿ ಇದ್ದ ಲಂಡನ್ ಅನ್ನು ಹಿಂದಿಕ್ಕಿ ದುಬೈ ಮೊದಲ ಸ್ಥಾನಕ್ಕೆ ಏರಿದೆ. ವರ್ಷಕ್ಕಾಗಿನ ಪಟ್ಟಿಯ ಪ್ರಕಾರ ದುಬೈ, ಲಂಡನ್, ಮೆಕ್ಸಿಕೋದ ಕ್ಯಾನ್‌ಕನ್, ಇಂಡೋನೇಷ್ಯಾದ ಬಾಲಿ, ಗ್ರೀಸ್‌ನ ಕ್ರೀಟ್, ರೋಮ್ ಕ್ರಮವಾಗಿ 1 ರಿಂದ 6ನೇ ಸ್ಥಾನ ಪಡೆದುಕೊಂಡಿವೆ.