Advertisement

ಸರಸ್ವತಿ ಪೂಜೆ ಕಾರಣ ಬಜೆಟ್‌ ದಿನ ನಾವು ಸಂಸತ್ತಿಗೆ ಬರಲ್ಲ : TMC

12:11 PM Jan 30, 2017 | udayavani editorial |

ಹೊಸದಿಲ್ಲಿ : ಫೆ.1ರ ಬಜೆಟ್‌ ಮಂಡನೆಯ ದಿನದಂದು ತೃಣಮೂಲ ಕಾಂಗ್ರೆಸ್‌ ಪಕ್ಷ ಸಂಸತ್ತಿನಲ್ಲಿ  ಹಾಜರಿರುವುದಿಲ್ಲ. ಬಹುಕೋಟಿ ಚಿಟ್‌ಫ‌ಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರನ್ನು ಬಂಧಿಸಿರುವುದೇ ಇದಕ್ಕೆ ಕಾರಣಎಂದು ತಿಳಿಯಲಾಗಿದೆ.

Advertisement

ಆದರೆ ತೃಣಮೂಲ ಪಕ್ಷ ಮಾತ್ರ ಕೊಟ್ಟಿರುವ ಕಾರಣವೇ ಬೇರೆ ಇದೆ: ಅದೆಂದರೆ ಅಂದು, ಫೆ.1ರಂದು ಸರಸ್ವತಿ ಪೂಜೆ ಇರುವುದರಿಂದ ತಾನು ಸಂಸತ್ತಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅದು ಹೇಳಿದೆ !

ಇದೇ ವೇಳೆ, ಇಂದು ಸಂಜೆ, ಲೋಕಸಭೆಯ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಬಜೆಟ್‌ ಅಧಿವೇಶನದ ಕುರಿತಾಗಿ ಕರೆದಿರುವ ಸರ್ವ ಪಕ್ಷ ಸಭೆಯಲ್ಲೂ  ತಾನು ಭಾಗವಹಿಸುವುದಿಲ್ಲ ಎಂದು ತೃಣಮೂಲ ಪಕ್ಷ ಹೇಳಿದೆ. ಬಜೆಟ್‌ ಅಧಿವೇಶನ ನಾಳೆ ಮಂಗಳವಾರದಿಂದ ಆರಂಭಗೊಳ್ಳಲಿದೆ.

“ಸರಸ್ವತಿ ಪೂಜೆ ನಮಗೆ ಬಂಗಾಲದಲ್ಲಿ ಬಹುದೊಡ್ಡ ದಿನವಾಗಿದೆ. ಅಂದು ನಾವು ಯಾರೂ ಕೆಲಸ ಮಾಡುವುದಿಲ್ಲ ಮಾತ್ರವಲ್ಲ ಕೆಲಸ ಕಾರ್ಯಗಳ ಸಲಕರಣೆಗಳನ್ನು ಕೂಡ ಮುಟ್ಟುವುದಿಲ್ಲ. ಏಕೆಂದರೆ ಸರಸ್ವತಿ ಪೂಜೆ ಎನ್ನುವುದು ನಮಗೆ ಧಾರ್ಮಿಕ ಉತ್ಸವಗಳಿಗಿಂತಲೂ ಮಿಗಿಲಾದುದು; ಇದು ಬಂಗಾಲದ ಸಾಮಾಜಿಕ-ಸಾಂಸ್ಕೃತಿಕ ಉತ್ಸವವಾಗಿದೆ’ ಎಂದು ಟಿಎಂಸಿ ನಾಯಕ ಹಾಗೂ ಸಂಸದರಾಗಿರುವ Derek O’Brien ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next