ಪಶ್ಚಿಮ ಬಂಗಾಳ: ಪಡಿತರ ವಿತರಣೆ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಶಂಕರ್ ಅಧ್ಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಆವರಣದಲ್ಲಿ ಇಡಿ ವ್ಯಾಪಕ ಶೋಧ ನಡೆಸಿದ ನಂತರ ಬಂಗಾಂವ್ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ಅಧ್ಯಾ ಅವರನ್ನು ಬಂಧಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಸಹಕರಿಸಿದ ಹೊರತಾಗಿಯೂ ತನ್ನ ಪತಿಯನ್ನು ಬಂಧಿಸಲಾಗಿದೆ ಎಂದು ಅವರ ಪತ್ನಿ ಜ್ಯೋತ್ಸ್ನಾ ಆಧ್ಯ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಶುಕ್ರವಾರ ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಜಾರಿ ನಿರ್ದೇಶನಾಲಯ ತಂಡದ ಮೇಲೆ ಹಲವು ಮಂದಿಯಿಂದ ಹಲ್ಲೆ ನಡೆಸಲಾಗಿತ್ತು ಅಲ್ಲದೆ ವಾಹನವನ್ನು ಜಖಂ ಗೊಳಿಸಿದ್ದರು.
ಇತ್ತ ಶಂಕರ ಅವರನ್ನು ಬಂಧಿಸುತ್ತಿದ್ದಂತೆ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಯಿತು ಶಂಕರ್ ಅವರನ್ನು ಅನಾವಶ್ಯಕವಾಗಿ ಬಂಧಿಸಲಾಗುತ್ತಿದೆ ಅವರು ಯಾವುದೇ ತಪ್ಪು ಎಸಗಳಿಲ್ಲ ಅಧಿಕಾರಿಗಳು ವಿನಾ ಕಾರಣಶಂಕರ್ ಅವರನ್ನು ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಶಂಕರ್ ಅಧ್ಯಾ ಮತ್ತು ಇನ್ನೋರ್ವ ಟಿಎಂಸಿ ನಾಯಕ ಸಹಜಹಾನ್ ಶೇಖ್ ಅವರ ಮನೆಗಳ ಮೇಲೆ ಇಡಿ ದಾಳಿ ನಡೆಸಿತ್ತು. ತನಿಖಾ ಸಂಸ್ಥೆಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುತಿದ್ದ ಪಡಿತರವನ್ನು ಫಲಾನುಭವಿಗಳಿಗಳಿಗೆ ಒದಗಿಸದೆ ಅದನ್ನು ಮಾರುಕಟ್ಟೆಗೆ ಮಾರಾಟಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಅದರ ಪ್ರಕಾರ ಶುಕ್ರವಾರ, ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿ ದಾಳಿ ಮಾಡಲು ಹೋಗುತ್ತಿದ್ದಾಗ ಸಂದೇಶಕಲಿಯಲ್ಲಿ ಸಹಜಹಾನ್ ಶೇಖ್ ಅವರ ಬೆಂಬಲಿಗರು ಗುಂಪು ಗುಂಪೊಂದು ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿತು. ದಾಳಿಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: Hollywood ನಟ ಕ್ರಿಶ್ಚಿಯನ್ ಆಲಿವರ್ ಸೇರಿ ಇಬ್ಬರು ಪುತ್ರಿಯರು ವಿಮಾನ ಅಪಘಾತದಲ್ಲಿ ಮೃತ್ಯು