Advertisement

ದತ್ತಪೀಠದಲ್ಲಿ ತ್ರಿಕಾಲ ಪೂಜೆ ನಡೆಯಲಿ: ಕಡೂರು ಮಣಿ

05:08 PM Dec 21, 2018 | Team Udayavani |

ಕಡೂರು: ಕಳೆದ 21 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ನೇತೃತ್ವದಲ್ಲಿ ದತ್ತ ಪೀಠದಲ್ಲಿ ನಡೆಯುತ್ತಿರುವ ದತ್ತ ಜಯಂತಿ, ದತ್ತಮಾಲೆ ಕಾರ್ಯಕ್ರಮದಲ್ಲಿ ಕಡೂರು ತಾಲೂಕಿನ ಭಕ್ತರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ದತ್ತಮಾಲಾ ಅಭಿಯಾನದ ಜಿಲ್ಲಾ ಪ್ರಮುಖ್‌ ಕಡೂರು ಎ.ಮಣಿ ಹೇಳಿದರು.

Advertisement

ಐತಿಹಾಸಿಕ ಮದಗದಕೆರೆ ಕೆಂಚಮ್ಮನ ಸನ್ನಿಧಿಯಲ್ಲಿ ಗುರುವಾರ ದತ್ತಮಾಲೆ ಧರಿಸಿ ನಂತರ ಅವರು ಮಾತನಾಡಿದರು. ದತ್ತಪೀಠದ ಗುಹೆಯಲ್ಲಿ ತ್ರಿಕಾಲ ಪೂಜೆ ನಡೆಯಬೇಕು, ಪ್ರತಿನಿತ್ಯ ಪೀಠಕ್ಕೆ ಬರುವ ಭಕ್ತರಿಗೆ ದತ್ತಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು, ಪೀಠದಲ್ಲಿ ಮೂಲಸೌಕರ್ಯ  ಒದಗಿಸಬೇಕು ಎಂದರು.
 
ದತ್ತ ಪೀಠದ ವಿಚಾರದ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದತ್ತಪೀಠದ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳು ಸರ್ಕಾರದ ಬಳಿಯಿದ್ದು, ಅದನ್ನು ಬಗೆಹರಿಸಿ ಶೀಘ್ರವಾಗಿ ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಪ್ರತಿ ವರ್ಷದಂತೆ ದತ್ತಜಯಂತಿಯಲ್ಲಿ ಪ್ರಸಾದ ವಿನಿಯೋಗ ಹಾಗೂ ಪೂಜಾ ಧಾರ್ಮಿಕ ಕಾರ್ಯಗಳು ಜಿಲ್ಲಾಡಳಿತವು ವ್ಯವಸ್ಥೆ ಮಾಡಬೇಕು ಎಂದರು. 

ಸಂವಿಧಾನದಲ್ಲಿ ಕಾನೂನಿನ ಧಾರ್ಮಿಕ ಆಚರಣೆಯಂತೆ ನಾವುಗಳು ಧಾರ್ಮಿಕವಾಗಿ ಜಯಂತಿ ಆಚರಿಸುತ್ತಿದ್ದೇವೆ. ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್‌ನ ಕಾರ್ಯಕರ್ತರು ಶಾಂತಿಪ್ರಿಯರು ಎಂದು ಹೇಳಿದರು.

ಡಿ. 22 ರಂದು ನಡೆಯಲಿರುವ ದತ್ತ ಜಯಂತಿ ಮತ್ತು ದತ್ತಮಾಲೆ ಕಾರ್ಯಕ್ರಮಕ್ಕೆ ಕಡೂರು ತಾಲೂಕಿನಿಂದ ಸುಮಾರು 1500 ರಿಂದ 2000 ದತ್ತ ಭಕ್ತರು ದತ್ತಪೀಠಕ್ಕೆ ತೆರಳಿದ್ದಾರೆ. ಅಂದು ಪಟ್ಟಣದ ಬಸವೇಶ್ವರ ವೃತ್ತದಿಂದ ಮಾಲಾಧಾರಿಗಳು ಪೀಠಕ್ಕೆ ತೆರಳಲಿದ್ದು, ಬಸವೇಶ್ವರ ವೃತ್ತಕ್ಕೆ ಬರಬೇಕು ಎಂದು ಮನವಿ ಮಾಡಿದರು.

ಗುರುವಾರ ನಡೆದ ಅನುಸೂಯ ಜಯಂತಿಗೆ ತಾಲೂಕಿನಿಂದ ಸುಮಾರು 300 ಮಹಿಳೆಯರು ಭಾಗವಹಿಸಿದ್ದರು ಎಂದರು.
ಸಿದ್ದರಹಳ್ಳಿಯ ಮೈಲಾರಪ್ಪ, ಮಂಜುನಾಥ್‌, ಹೊಸಹಳ್ಳಿಯ ವಿಶ್ವ, ಸಿಂಗಟಗೆರೆಯ ದಯಾನಂದ, ನಾಗರಾಜ್‌, ಚಿಕ್ಕಂಗಳದ ಗಂಗಾಧರ, ನಾಗರಾಜ್‌, ಅಂದೇನಹಳ್ಳಿಯ ಸುನೀಲ್‌, ಪ್ರದೀಪ್‌, ಸಿದ್ದೇಶ್‌, ಲೋಹಿತ್‌ ಮಾಲೆಧರಿಸಿದರು. ಶುಕ್ರವಾರ ಚಿಕ್ಕಮಗಳೂರು ಪಟ್ಟಣದಲ್ಲಿ ನಡೆಯಲಿರುವ ಶೋಭಾಯಾತ್ರೆಗೆ ಮಾಲಾಧಾರಿಗಳು ಪಾಲ್ಗೊಳ್ಳುವರು ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next