Advertisement

ತ್ರಿಕೋನ ಸರಣಿ : ಬಾಂಗ್ಲಾದೇಶ ಚಾಂಪಿಯನ್‌

11:51 PM May 18, 2019 | Sriram |

ಡಬ್ಲಿನ್‌: ತ್ರಿಕೋನ ಸರಣಿಯ ಫೈನಲ್‌ನಲ್ಲಿ ಡಕ್‌ವರ್ತ್‌-ಲೂಯಿಸ್‌ ನಿಯಮವನ್ನು ಮೆಟ್ಟಿನಿಂತ ಬಾಂಗ್ಲಾದೇಶ ಚಾಂಪಿಯನ್‌ ಆಗಿ ಮೂಡಿಬಂದಿದೆ. ಪ್ರಶಸ್ತಿ ಕಾಳಗದಲ್ಲಿ ಅದು ವೆಸ್ಟ್‌ ಇಂಡೀಸಿಗೆ 5 ವಿಕೆಟ್‌ ಸೋಲುಣಿಸಿತು.

Advertisement

ಮಳೆಪೀಡಿತ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 24 ಓವರ್‌ಗಳಲ್ಲಿ ಒಂದು ವಿಕೆಟಿಗೆ 152 ರನ್‌ ಬಾರಿಸಿತು. ಬಾಂಗ್ಲಾದೇಶಕ್ಕೆ ಡಿ-ಎಲ್‌ ನಿಯಮದಂತೆ ಇಷ್ಟೇ ಓವರ್‌ಗಳಲ್ಲಿ ಲಭಿಸಿದ ಗುರಿ 210 ರನ್‌! ಇದನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಬಾಂಗ್ಲಾ 22.5 ಓವರ್‌ಗಳಲ್ಲಿ 5 ವಿಕೆಟಿಗೆ 213 ರನ್‌ ಬಾರಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯಿತು.

ಆರಂಭಕಾರ ಸೌಮ್ಯ ಸರ್ಕಾರ್‌ 66, ಏಳನೇ ಕ್ರಮಾಂದಲ್ಲಿ ಆಡಲಿಳಿದ ಮೊಸದೆಕ್‌ ಹೊಸೈನ್‌ ಅಜೇಯ 52 ರನ್‌ ಬಾರಿಸಿ ಬಾಂಗ್ಲಾವನ್ನು ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-24 ಓವರ್‌ಗಳಲ್ಲಿ ಒಂದು ವಿಕೆಟಿಗೆ-152 (ಹೋಪ್‌ 74, ಆ್ಯಂಬ್ರಿಸ್‌ ಔಟಾಗದೆ 69). ಬಾಂಗ್ಲಾದೇಶ-22.5 ಓವರ್‌ಗಳಲ್ಲಿ 5 ವಿಕೆಟಿಗೆ 213 (ಸರ್ಕಾರ್‌ 66, ಮೊಸದೆಕ್‌ ಔಟಾಗದೆ 52).

Advertisement

Udayavani is now on Telegram. Click here to join our channel and stay updated with the latest news.

Next