ಹಳೇ ಕಾಲದ ಡ್ರೆಸ್ಸಿಂಗ್ ಸ್ಟೈಲ್‌ಗಳು ಕಾಲ ಕಳೆದಂತೆ ಮತ್ತೆ ಮುನ್ನೆಲೆಗೆ ಬಂದು ಫ್ಯಾಶನ್ ಕ್ರೇಜ್ ಹುಟ್ಟಿಸುವುದು ಸಾಮಾನ್ಯ. ಈ ವಿಚಾರದಲ್ಲಿ ಮಹಿಳೆ ಅಥವಾ ಪುರುಷರ ಉಡುಪು ಎಂಬ ತಾರತಮ್ಯವೂ ಇಲ್ಲ. ಅಜ್ಜ ಅಜ್ಜಿಯಂದಿರು ಧರಿಸುತ್ತಿದ್ದ ಬಟ್ಟೆಗಳು ಮತ್ತೆ ಮೊಮ್ಮಕ್ಕಳ ಕಾಲದಲ್ಲಿ ಟ್ರೆಂಡ್ ಸೃಷ್ಟಿಸುತ್ತವೆ ಎಂಬುದಕ್ಕೆ ವೈಡ್ ಲೆಗ್ ಟೋಸರ್ ಪ್ಯಾಂಟ್‌ಗಳು ಸಾಕ್ಷಿಯಾಗಿವೆ.
ಇದೊಂದು ಪರಿಕಲ್ಪನೆಯಷ್ಟೇ ಎಂದು ತಿಳಿದುಕೊಂಡಿದ್ದರೆ ತಪ್ಪಾಗುತ್ತದೆ. ಸುಮಾರು 1920 ರಲ್ಲಿಯೇ ಆಕ್ಸ್‌ಫರ್ಡ್ ವಿವಿಯು ವೈಡ್ ಲೆಗ್ ಪ್ಯಾಂಟ್ ರೈಸ್ ಅನ್ನು ಜನರಿಗೆ ಪರಿಚಯಿಸಿದ್ದರು. 40 ಇಂಚುಗಳಷ್ಟು ಎತ್ತರವಿರುವ ಈ ಪ್ಯಾಂಟ್ ಗಳು ಆ ಕಾಲದಲ್ಲಿನ ಫ್ಯಾಶನ್ ಲೋಕದ ರಾಜನಂತೆ ಕಂಗೊಳಿಸುತ್ತಿದ್ದು, ಇದೀಗ 2019 ರಲ್ಲಿ ಮಾರುಕಟ್ಟೆಯಲ್ಲಿ ಮತ್ತೆ ಬೇಡಿಕೆ ಪಡೆದಿವೆ. 1970 ರಲ್ಲಿ ಡೇವಿಡ್ ಬೋವಿ ಅವರು ವೈಡ್ ಲೆಗ್ ಪ್ಯಾಂಟ್‌ಗಳಿಗೆ ಹೊಸ ರೂಪವನ್ನೂ ನೀಡಿದ್ದರು.
ಹೇಗಿದೆ ಸ್ಟ್ರಕ್ಚರ್?
ವೈಡ್ ಲೆಗ್ ಟೋಸರ್‌ಗಳಲ್ಲಿನ ನಾಲ್ಕು ವಿಧಗಳಿದ್ದು, ಇದು ಫಾರ್ಮಲ್ಸ್ ಮತ್ತು ಸ್ಟೈಲಿಷ್ ಈ ಎರಡೂ ಬಗೆಯ ಲುಕ್‌ಗಳಲ್ಲಿಯೂ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಕ್ಯಾಷುವಲ್, ಸ್ಮಾರ್ಟ್ ಕ್ಯಾಷುವಲ್, ಸ್ಮಾರ್ಟ್ ಮತ್ತು ಸ್ಟ್ರೀಟ್ ವೇರ್‌ಗಳಲ್ಲಿ ಬಟ್ಟೆಯಂಗಡಿಯಲ್ಲಿ ರಾರಾಜಿಸುತ್ತಿವೆ.
ಕ್ಯಾಷುವಲ್ ಪ್ಯಾಂಟ್‌ಗಳು ಹೆಚ್ಚು ರಿಲ್ಯಾಕ್ಸಾಡಾಗಿದ್ದು ನಿಮ್ಮ ವ್ಯಕ್ತಿತ್ವಕ್ಕೆ ಶಿಸ್ತನ್ನು ತಂಡುಕೊಡು ತ್ತವೆ. ಗಾಂಭಿರ್ಯವನ್ನು ಹೆಚ್ಚಿಸುವ ಈ ಪ್ಯಾಂಟ್ ಗಳು ಹೆಚ್ಚಾಗಿ ಕಪ್ಪು ಬಣ್ಣಗಳ ಹತ್ತಿ ಬಟ್ಟೆಯಲ್ಲಿ ಸಿದ್ಧಪಡಿಸಲಾಗಿದೆ. ಪ್ಯಾಂಟ್‌ಗೆ ಸರಿಹೊಂದುವ ಟೀ ಶರ್ಟ್ ಅಥವಾ ಹೆನ್ಲಿಯ ಜತೆ ಧರಿಸಿದಲ್ಲಿ ಮತ್ತಷ್ಟು ಕ್ಯಾಷುವಲ್ ಲುಕ್ ಜತಗೆ ಸ್ವಲ್ಪ ಹೆಚ್ಚಿನ ಸ್ಟೈಲಿಷ್ ಲುಕ್‌ನ್ನು ಹೆಚ್ಚಿಸುತ್ತ ವೆ. ಟೋನಲ್ ಶರ್ಟ್, ರೋಲ್ ಮಿಕ್ಸ್, ಮ್ಯೂಟ್ ಬಾಂಬರ್ ಶರ್ಟ್‌ಗಳನ್ನು ಈ ಪ್ಯಾಂಟ್ ಜತೆಗೆ ಧರಿಸಿದಲ್ಲಿ ಹೊಸ ಲುಕ್ ಇತರರೆದುರು ನಿಮ್ಮನ್ನು ಇನ್ನಷ್ಟು ಆಕರ್ಷಣೀಯರನ್ನಗಿ ಮಾಡುತ್ತದೆ.
ಸ್ಮಾರ್ಟ್ ಪ್ಯಾಂಟ್
ಇದು ಹೆಸರೇ ಸೂಚಿಸುವಂತೆ ನಿಮ್ಮ ಸ್ಮಾರ್ಟ್‌ನೆಸ್ ಅನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಈ ಪ್ಯಾಂಟ್‌ಗಳಿಗೆ ಹೊಸ ಲುಕ್ ನೀಡುವುದು ನೀವು ಧರಿಸುವ ಶರ್ಟ್ ಮತ್ತು ಬ್ಲೇಸರ್ ಗಳನ್ನಾಧರಿಸಿ. ಕಚೇರಿಗಳಲ್ಲಿನ ಕೆಲಸಗಳಿಗೆ ಸಂಬಂದಿಸಿದಂತೆಯೂ ಈ ಡ್ರೆಸ್ಸಿಂಗ್ ಸ್ಟೈಲ್ ನಿಮಗೆ ಫಾರ್ಮಲ್ ಲುಕ್ ತಂದು ಕೊಡುತ್ತದೆ. ಕಾಲಿನ ಮಣಿಗಂಟಿನ ವರೆಗೆ ಬರುವ ಈ ವೈಡ್ ಲೆಗ್ ಟೋಸರ್ ಗೆ ಡರ್ಬಿ ಶೂಗಳು ಮತ್ತು ಔಪಚಾರಕ ಶರ್ಟ್ ಮೇಲೊಂದು ಕೋಟ್ ಧರಿಸಿದರೆ ನಿಮ್ಮ ಲುಕ್ ಡಿಫರೆಂಟ್ ಆಗಿರುತ್ತದೆ.
ಹಳೇ ಕಾಲದ ವಿನ್ಯಾಸಗಳು ಮತ್ತೆ ನಮ್ಮನ್ನು ಸೆಳೆಯುತ್ತಿರುವ ಸಂದರ್ಭದಲ್ಲಿ ನಾವು ಬಟ್ಟೆಗಳ ಕಚ್ಚಾವಸ್ತುಗಳ ಮೇಲೆಯೂ ನಾವು ಗಮನ ಹರಿಸುವುದು ಅಗತ್ಯ. ಶುದ್ಧ ಕಾಟನ್‌ಗಳಲ್ಲಿಯೇ ಈ ರೀತಿಯ ಪ್ಯಾಂಟ್‌ಗಳನ್ನು ಹೊಲಿಸಿದಲ್ಲಿ ಮತ್ತು ಅದಕ್ಕೆ ಸರಿ ಹೊಂದುವಂತಹ ಶರ್ಟ್, ಬ್ಲೇಸರ್ ಮತ್ತು ಶೂ ಗಳಿಗೆ ಆದ್ಯತೆ ನೀಡಿದಲ್ಲಿ ಮಾತ್ರವೇ ಈ ಬಟ್ಟೆಗಳು ನಿಮ್ಮನ್ನು ಇತರರ ಮಧ್ಯೆಯೂ ಎದ್ದು ಕಾಣುವಂತೆ ಮಾಡಬಹುದಷ್ಟೇ. ಹಾಗಾಗಿ ಮ್ಯಾಚಿಂಗ್ ಸಂದರ್ಭದಲ್ಲಿ ಎಚ್ಚರವಿರಲಿ.
ಭುವನ ಬಾಬು, ಪುತ್ತೂರು