Advertisement

ಹಿಮಾಚಲ ಪ್ರದೇಶದ ಕಿನ್ನೋರ್‌ ಜಿಲ್ಲೆಯಲ್ಲಿ ಲಘು ಭೂಕಂಪ

11:37 AM Oct 22, 2018 | udayavani editorial |

ಶಿಮ್ಲಾ : ಹಿಮಾಚಲ ಪ್ರದೇಶದ ಕಿನ್ನೋರ್‌ ಜಿಲ್ಲೆಯಲ್ಲಿ ಇಂದು ಸೋಮವಾರ  ಬೆಳಗ್ಗೆ 9 ಗಂಟೆಯ ಸುಮಾರಿಗೆ ಲಘು ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಆದರೆ ಯಾವುದೇ ಜೀವ ಹಾನಿ, ಸೊತ್ತು ನಾಶ – ನಷ್ಟ ಉಂಟಾದ ವರದಿಗಳು ಇಲ್ಲ.

Advertisement

ಬೆಳಗ್ಗೆ ಸುಮಾರು 9.11ರ ಹೊತ್ತಿಗೆ 3 ಅಂಕಗಳ ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಶಿಮ್ಲಾ ಹವಾಮಾನ ಇಲಾಖೆಯ ನಿರ್ದೇಶಕ ಮನಮೋಹನ್‌ ಸಿಂಗ್‌ ತಿಳಿಸಿದ್ದಾರೆ. 

ಕಿನ್ನೋರ್‌ ಜಿಲ್ಲೆಯ ಈಶಾನ್ಯ ಭಾಗದಲ್ಲಿ ಐದು ಕಿ.ಮೀ. ಭೂಮಿಯಾಳದಲ್ಲಿ ಭೂಕಂಪವು ಕೇಂದ್ರೀಕೃತವಾಗಿತ್ತು. ಆಸುಪಾಸಿನ ಪ್ರದೇಶಗಳಲ್ಲೂ  ಜನರಿಗೆ ಭೂಕಂಪನದ ಅನುಭವವಾಗಿದೆ ಎಂದು ಸಿಂಗ್‌ ಹೇಳಿದರು. 

ಹಿಮಾಚಲ ಪ್ರದೇಶದ ಪರ್ವತ ಪ್ರದೇಶಗಳ ಹೆಚ್ಚಿನೆಲ್ಲ ಭಾಗಗಳು ಗರಿಷ್ಠ ಭೂಕಂಪ ಸೂಕ್ಷ್ಮತೆಯ ವಲಯ ವ್ಯಾಪ್ತಿಗೆ ಒಳಪಡುತ್ತವೆ. ಈ ವಲಯದಲ್ಲಿ ಆಗೀಗ ಎಂಬಂತೆ ಲಘು ಭೂಕಂಪಗಳು ಸಂಭವಿಸುವುದು ಸಾಮಾನ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next