Advertisement

ದೆಹಲಿ ಸೇರಿ ಉತ್ತರಭಾರತದ ಹಲವೆಡೆ ಭೂ ಕಂಪನ; 6.2ರಷ್ಟು ತೀವ್ರತೆ

01:08 PM Jan 31, 2018 | Team Udayavani |

ನವದೆಹಲಿ:ದೆಹಲಿ ಸೇರಿದಂತೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನವಾಗಿರುವ ಘಟನೆ ಬುಧವಾರ ನಡೆದಿದ್ದು, ಅಫ್ಘಾನಿಸ್ತಾನದ ಹಿಂದುಖುಷ್ ಪರ್ವತ ಪ್ರದೇಶ ಕಂಪನದ ಕೇಂದ್ರಬಿಂದು ಎಂದು ವರದಿ ತಿಳಿಸಿದೆ.

Advertisement

ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 12.42ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವಾಗಿರುವುದಾಗಿ ದೆಹಲಿ ಹಾಗೂ ಸುತ್ತಮುತ್ತ ಪ್ರದೇಶದ ಜನರು ತಿಳಿಸಿದ್ದಾರೆ.

ದೆಹಲಿ, ಜಮ್ಮುಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶ, ಹರ್ಯಾಣ, ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಭೂಮಿ ಕಂಪಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next