Advertisement

ಗಾಳಿ-ಮಳೆಗೆ ಉರುಳಿದ ಮರಗಳು: ಜನಜೀವನ ಅಸ್ತವ್ಯಸ್ತ

07:35 AM Aug 20, 2017 | Team Udayavani |

ಕುಂದಾಪುರ:  ಕರಾವಳಿಯಲ್ಲಿ  ಉತ್ತಮ ಮಳೆಯಾಗಿದ್ದು, ಕುಂದಾಪುರ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಬಾರಿ ಮಳೆಯಾಗಿದೆ. 

Advertisement

ಗಾಳಿ ಮಳೆಗೆ  ಗಂಗೊಳ್ಳಿಯಲ್ಲಿ  ಮನೆಯ ಮೇಲೆ ಮರಬಿದ್ದು ಅಪಾರ ಹಾನಿಯಾದರೆ ಶಿರೂರಿನಲ್ಲಿ ರಸ್ತೆಯ ಮೇಲೆ ಮರ ಬಿದ್ದು ವಾಹನಸಂಚಾರ ಸ್ಥಗಿತಗೊಂಡಿತು.

ನಗರದಲ್ಲಿ  ಶನಿವಾರ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.ನಿರಂತರ ಮಳೆಯಿಂದಾಗಿ ನಗರದ ಶಾಸ್ತ್ರಿವೃತ್ತದ  ಹೆದ್ದಾರಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯ ಮೇಲೆ ನೀರು ಹರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಮನೆಯ ಮೇಲೆ 
ಮರ ಬಿದ್ದು ಅಪಾರ ಹಾನಿ 

ಶುಕ್ರವಾರ ರಾತ್ರಿ ಮಳೆಯೊಂದಿಗೆ ಗಾಳಿ  ಬೀಸಿದ ಪರಿಣಾಮ ಗಂಗೊಳ್ಳಿಯ  ಮ್ಯಾಂಗನೀಸ್‌ ರಸ್ತೆಯ ಉದಯ ಅವರ ಮನೆ ಮೇಲೆ ಬೃಹತ್‌ ಗಾತ್ರದ ಮರ ಬಿದ್ದು ಸುಮಾರು ರೂ. 4 ಲಕ್ಷದಷ್ಟು ಹಾನಿ ಸಂಭವಿಸಿದೆ. 

ಮನೆಯ ಛಾವಣಿ ಹಾಗೂ ಗೋಡೆಗೆ  ಹಾನಿಯಾಗಿದ್ದು,  ಮರ ಬೀಳುವಾಗ  ಮನೆಯಲ್ಲಿ ಉದಯ ಹಾಗೂ ಅವರ ಪತ್ನಿ, ಮಗು ಇದ್ದರೂ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ  ಗ್ರಾಮ ಲೆಕ್ಕಿಗರು ಆಗಮಿಸಿದ್ದಾರೆ.

Advertisement

ತಗ್ಗು ಪ್ರದೇಶಗಳು ಜಲಾವೃತ
ನಿರಂತರವಾಗಿ ಸುರಿದ ಮಳೆಯಿಂದಾಗಿ ನದಿ ಪಾತ್ರದ ಸ್ಥಳಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಕೆಲವು ಕಡೆ ಕೃಷಿ ತೋಟಗಳಿಗೆ ನೀರು ನುಗ್ಗಿ  ಹಾನಿ ಉಂಟಾಯಿತು.

ಉತ್ತಮ ಮಳೆ
ಸಿದ್ದಾಪುರ, ಹೊಸಂಗಡಿ, ಹಳ್ಳಿ ಹೊಳೆ, ಆರ್ಡಿ, ಗೋಳಿಯಂಗಡಿ, ಮಡಾಮಕ್ಕಿ, ಬೆಳ್ವೆ, ಶಂಕರನಾರಾಯಣ, ಉಳ್ಳೂರು-74, ಅಮಾಸೆಬೈಲು, ಹಾಲಾಡಿ, ಅಂಪಾರು, ಆಜ್ರಿ, ನೇರಳಕಟ್ಟೆ, ವಂಡ್ಸೆ, ಕೊಲ್ಲೂರು, ಬೈಂದೂರು, ಶಿರೂರು, ಗಂಗೊಳ್ಳಿ, ಪಡುಕೋಣೆ, ಸೇನಾಪುರ, ಮರವಂತೆ, ತ್ರಾಸಿ, ಕೋಟೇಶ್ವರ, ಕುಂಭಾಶಿ, ಕುಂದಾಪುರದಲ್ಲಿ  ಉತ್ತಮ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next