Advertisement

ನೂರಾರು ಹಕ್ಕಿಗಳ ಮಾರಣಹೋಮ; ಮರ ಬೀಳಿಸಿದ ಬಗ್ಗೆ ವರದಿ ಕೇಳಿದ ಸರ್ಕಾರ

09:16 PM Sep 03, 2022 | Team Udayavani |

ತಿರುವನಂತಪುರಂ: ಇತ್ತೀಚೆಗೆ ಅಭಿವೃದ್ಧಿ ಹೆಸರಿನಲ್ಲಿ ಮರವೊಂದನ್ನು ಬೀಳಿಸಿದಾಗ, ಅದರಲ್ಲಿದ್ದ ನೂರಾರು ಹಕ್ಕಿಗಳು ಮೃತಪಟ್ಟ ವಿಡಿಯೋವೊಂದು ವೈರಲ್‌ ಆಗಿತ್ತು. ಈ ಘಟನೆ ನಡೆದಿದ್ದು ಕೇರಳದ ಮಲಪ್ಪುರಂ ಜಿಲ್ಲೆಯ ರಂದಥಾನಿ ಪ್ರದೇಶದಲ್ಲಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ)ದಿಂದ ನಡೆದ ಕಾಮಗಾರಿಯಲ್ಲಿ ಈ ರೀತಿ ಮಾಡಲಾಗಿದೆ.

Advertisement

ವಿಡಿಯೋ ಬಗ್ಗೆ ಜನರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿ ಕೊಡುವಂತೆ ರಾಜ್ಯ ಪಿಡಬ್ಲ್ಯೂ ಡಿ ಸಚಿವ ಪಿ.ಎ.ಮೊಹಮದ್‌ ರಿಯಾಸ್‌ ಎನ್‌ಎಚ್‌ಎಐಗೆ ಕೇಳಿದ್ದಾರೆ.

ಮರವನ್ನು ಬೀಳಿಸಿದ ಜೆಸಿಬಿ ಮತ್ತು ಅದರ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ “ಸೇವ್‌ ವೆಟ್‌ಲ್ಯಾಂಡ್‌ ಇಂಟರ್‌ನ್ಯಾಷನಲ್‌ ಮೂವ್ಮೆಂಟ್ ‘ ಸಂಸ್ಥೆಯ ಮುಖ್ಯಸ್ಥ ಥಾಮಸ್‌ ಲಾರೆನ್ಸ್‌ ಅವರು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೂ ಪತ್ರ ಬರೆದಿದ್ದು, ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next