Advertisement

ಮರ ಉರುಳಿ ತಹಶೀಲ್ದಾರ್‌ ಮನೆಗೆ ಹಾನಿ

03:45 AM Jun 29, 2017 | Team Udayavani |

ಸುಳ್ಯ: ಸುಳ್ಯದಲ್ಲಿ ಬುಧವಾರ ಬೀಸಿದ ಭಾರೀ ಗಾಳಿಗೆ ತಹಶೀಲ್ದಾರ್‌ ಎಂ.ಎಂ. ಗಣೇಶ್‌ ಅವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕಾಂಪೌಂಡ್‌ ಹೊರಗೆ ಇದ್ದ ಮರ ಉರುಳಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ. ಕಾಂಪೌಂಡ್‌ ಜರಿದು ಬಿದ್ದಿದೆ. ತಹಶೀಲ್ದಾರ್‌ ಅವರ ಪತ್ನಿ, ಪುತ್ರ ಮನೆಯೊಳಗೆ ಇದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಗೃಹರಕ್ಷಕ ದಳ, ಅರಣ್ಯ ಇಲಾಖೆ ಮತ್ತು ನಗರ ಪಂಚಾಯತ್‌, ಕಂದಾಯ ಇಲಾಖಾಧಿಕಾರಿಗಳು ಮರವನ್ನು ತೆರವುಗೊಳಿಸಿದರು.

Advertisement

ಮರದ ಸುತ್ತ ಇದ್ದ ಮಣ್ಣನ್ನು ಸಾರ್ವಜನಿಕ ಶೌಚಾಲಯ ನಿರ್ಮಿಸುವಾಗ ತೆಗೆಯಲಾಗಿತ್ತು. ಮರ ಬಿದ್ದು ಹಾನಿಯಾಗಬಹುದೆಂದು ತಹಶೀಲ್ದಾರ್‌ ಅವರು ಅದನ್ನು ತೆಗೆಸುವಂತೆ ಇಲಾಖೆಗೆ  ಮೊದಲೇ ಸೂಚಿಸಿದ್ದರೆನ್ನಲಾಗಿದೆ. ಮರಗಳ ಬುಡದಲ್ಲಿ ಮಣ್ಣು ಇಲ್ಲದ ಕಾರಣದಿಂದ ಎರಡು ಮರಗಳು ಗಾಳಿಗೆ ಉರುಳಿವೆ. ತಾಲೂಕಿನಾದ್ಯಂತ ಮರಗಳು, ವಿದ್ಯುತ್‌ ಕಂಬಗಳು ಉರುಳಿದ್ದು, ಮಂಗಳವಾರ ಮತ್ತು ಬುಧವಾರ ವಿದ್ಯುತ್‌ ವ್ಯತ್ಯಯಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next